ಮಹಾರಾಷ್ಟ್ರ ಸಚಿವ ಭುಜಬಲ್‌ಗೆ ಜೀವ ಬೆದರಿಕೆ ಪತ್ರ!

ಮಹಾರಾಷ್ಟ್ರದ ಸಚಿವ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕ ಛಗನ್ ಭುಜಬಲ್ ಅವರಿಗೆ ಶುಕ್ರವಾರ ಜೀವ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ನಾಸಿಕ್‌ನಲ್ಲಿರುವ ಸಚಿವರ ಕಚೇರಿಗೆ ಕೊಲ್ಲುವ ಸುಪಾರಿ ಕುರಿತ ಪತ್ರವೊಂದನ್ನು ಕಳುಹಿಸಿದ್ದಾರೆ.
ಭುಜಬಲ್
ಭುಜಬಲ್

ಮುಂಬೈ: ಮಹಾರಾಷ್ಟ್ರದ ಸಚಿವ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶಾಸಕ ಛಗನ್ ಭುಜಬಲ್ ಅವರಿಗೆ ಶುಕ್ರವಾರ ಜೀವ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ನಾಸಿಕ್‌ನಲ್ಲಿರುವ ಸಚಿವರ ಕಚೇರಿಗೆ ಕೊಲ್ಲುವ ಸುಪಾರಿ ಕುರಿತ ಪತ್ರವೊಂದನ್ನು ಕಳುಹಿಸಿದ್ದಾರೆ.

ಹತ್ಯೆ ಮಾಡಲು ಐದು ಜನರಿಗೆ 50 ಲಕ್ಷ ರೂ. ಸುಪಾರಿ ನೀಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಭುಜಬಲ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಅವರ  ಬೆಂಬಲಿಗರು ಕೋರಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ನಾಸಿಕ್ ಪೊಲೀಸರು ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎನ್‌ಸಿಪಿ ನಾಯಕನಿಗೆ ಹೆಚ್ಚುವರಿ ಭದ್ರತೆ ನೀಡುವ ಅಗತ್ಯವಿದೆಯೇ ಎಂಬುದರ ಬಗ್ಗೆಯೂ ಅವರು ಪರಿಶೀಲಿಸುತ್ತಿದ್ದಾರೆ ಎಂದು ನಾಸಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು ಚಿಹ್ನೆಯನ್ನು ಮಂಜೂರು ಮಾಡಿದ ಕೆಲವು ದಿನಗಳ ನಂತರ ಬೆದರಿಕೆ ಬಂದಿದೆ. ಇದು ಪಕ್ಷದ ಸಂಸ್ಥಾಪಕ ಶರದ್ ಪವಾರ್ ನೇತೃತ್ವದ ಬಣಕ್ಕೆ ದೊಡ್ಡ ಹೊಡೆತವಾಗಿದೆ.

ಶರದ್ ಪವಾರ್ ಬಣಕ್ಕೆ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' ಎಂಬ ಹೆಸರನ್ನು ಎಂಬ ಹೊಸ ಹೆಸರು ಬಂದಿದೆ.  ಆರು ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಚುನಾವಣಾ ಸಮಿತಿ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com