ಮುಂದಿನ ಐದು ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಮಾದರಿ ದೇಶವಾಗಲಿದೆ, ಇದು 'ಮೋದಿ ಗ್ಯಾರಂಟಿ'

ಕಾಶಿಯನ್ನು ಈಗ ಪರಂಪರೆ-ಅಭಿವೃದ್ಧಿಯ ಮಾದರಿಯಾಗಿ ನೋಡಲಾಗುತ್ತಿದೆ: BHU ನಲ್ಲಿ ಪ್ರಧಾನಿ ಮೋದಿ ಮಾತು
ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ

ವಾರಣಾಸಿ: ಮುಂದಿನ ಐದು ವರ್ಷಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಮಾದರಿ ದೇಶವಾಗಲಿದೆ, ಇದು 'ಮೋದಿ ಗ್ಯಾರಂಟಿ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನಿನ್ನೆ ಗುರುವಾರ ರಾತ್ರಿ ತಮ್ಮ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ತಲುಪಿದ ಪ್ರಧಾನಿ ಮೋದಿ ಅವರು, ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ನಂತರ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (BHU) 'ಸಂಸದ್ ಸಂಸ್ಕೃತ ಪ್ರತಿಯೋಗಿತಾ' ಕಾರ್ಯಕ್ರಮದಲ್ಲಿ ವಿಜೇತರೊಂದಿಗೆ ಸಂವಾದ ನಡೆಸಿದರು.

ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370, ಎನ್ ಡಿಎ 400 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು- ಪ್ರಧಾನಿ ಮೋದಿ

ಕಾಶಿಯನ್ನು ಈಗ ಪರಂಪರೆ ಮತ್ತು ಅಭಿವೃದ್ಧಿಯ ಮಾದರಿಯಾಗಿ ನೋಡಲಾಗುತ್ತಿದೆ: "ಕಾಶಿಯನ್ನು ಈಗ ಪ್ರಪಂಚದಾದ್ಯಂತ ಅಭಿವೃದ್ಧಿ ಮತ್ತು ಪರಂಪರೆಯ ಮಾದರಿಯಾಗಿ ನೋಡಲಾಗುತ್ತಿದೆ. ಸಂಸ್ಕೃತಿ ಮತ್ತು ಸಂಪ್ರದಾಯದ ಸುತ್ತ ಆಧುನಿಕತೆಯು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ಜಗತ್ತು ಇಂದು ನೋಡುತ್ತಿದೆ" ಎಂದರು,

ಮುಂದಿನ ಐದು ವರ್ಷಗಳಲ್ಲಿ ದೇಶ ಅಭಿವೃದ್ಧಿಯ ಮಾದರಿಯಾಗಲಿದೆ, ಇದು ನಿಮಗೆ ಮೋದಿ ನೀಡುತ್ತಿರುವ ಗ್ಯಾರಂಟಿ. ಭಾರತದ ಶ್ರೀಮಂತ ಪರಂಪರೆಯ ಪ್ರತಿಧ್ವನಿ ವಿಶ್ವದಾದ್ಯಂತ ಕೇಳಿಬರುತ್ತಿದೆ ಎಂದು ಬಣ್ಣಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶ್ವವಿದ್ಯಾಲಯದಲ್ಲಿ ಪ್ರಧಾನಿಯನ್ನು ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಕೂಡ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಬಣ್ಣಿಸಿದರು.

ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ, ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಂತ ಗುರು ರವಿದಾಸ್ ಅವರ 647 ನೇ ಜನ್ಮದಿನದ ಸ್ಮರಣಾರ್ಥ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಪ್ರಧಾನ ಮಂತ್ರಿಗಳು ಸಂತ ಗುರು ರವಿದಾಸ್ ಜನ್ಮಸ್ಥಳಿಗೆ ಭೇಟಿ ನೀಡಿದರು. ಮಧ್ಯಾಹ್ನ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದು, 13 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಾರಣಾಸಿಯ ರಸ್ತೆ ಸಂಪರ್ಕವನ್ನು ಹೆಚ್ಚಿಸಲು, ರಾಷ್ಟ್ರೀಯ ಹೆದ್ದಾರಿ 233 ರ ಘರ್ಗ್ರಾ-ಸೇತುವೆ-ವಾರಣಾಸಿ ವಿಭಾಗದ ಚತುಷ್ಪಥ ಮತ್ತು ರಾಷ್ಟ್ರೀಯ ಹೆದ್ದಾರಿಯ ಸುಲ್ತಾನ್‌ಪುರ-ವಾರಣಾಸಿ ವಿಭಾಗದ ಚತುಷ್ಪಥ ಸೇರಿದಂತೆ ಹಲವಾರು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮೋದಿಯವರು ನೆರವೇರಿಸಲಿದ್ದಾರೆ.

ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲು ಸೇವಾಪುರಿಯಲ್ಲಿ ಎಚ್‌ಪಿಸಿಎಲ್ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್, ಯುಪಿಎಸ್‌ಐಡಿಎ ಆಗ್ರೋ ಪಾರ್ಕ್ ಕಾರ್ಖಿಯಾನ್‌ನಲ್ಲಿ ಬನಸ್ ಕಾಶಿ ಸಂಕುಲ್ ಹಾಲು ಸಂಸ್ಕರಣಾ ಘಟಕ, ಯುಪಿಎಸ್‌ಐಡಿಎ ಆಗ್ರೋ ಪಾರ್ಕ್‌ನಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿ, ಕಾರ್ಖಿಯಾಂವ್ ಮತ್ತು ರೇಷ್ಮೆ ಬಟ್ಟೆಯನ್ನು ಉದ್ಘಾಟಿಸಲಿದ್ದಾರೆ. ನೇಕಾರರಿಗೆ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಮುದ್ರಿಸುವುದು ಇತ್ಯಾದಿ ಕೆಲಸಗಳು ಒಳಗೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com