ಆನ್ಲೈನ್ ಗೇಮಿಂಗ್ ಚಟದಿಂದ ಮೈ ತುಂಬಾ ಸಾಲ; ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ!

ಆನ್‌ಲೈನ್ ಗೇಮಿಂಗ್‌ನ ಚಟಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ವಿಮಾ ಹಣ ಪಡೆಯಲು ತನ್ನ ತಾಯಿಯನ್ನೇ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ
ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ

ಲಖನೌ: ಆನ್‌ಲೈನ್ ಗೇಮಿಂಗ್‌ನ ಚಟಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ವಿಮಾ ಹಣ ಪಡೆಯಲು ತನ್ನ ತಾಯಿಯನ್ನೇ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಆರೋಪಿ ಹಿಮಾಂಶು 50 ಲಕ್ಷ ರೂ ವಿಮೆ ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಆಕೆಯ ಶವವನ್ನು ಯಮುನಾ ನದಿ ದಡದ ಬಳಿ ವಿಲೇವಾರಿ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ
ಕೋಲಾರ: ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಬಂಧನ

ಆರೋಪಿಯು ಜನಪ್ರಿಯ ಪ್ಲಾಟ್‌ಫಾರ್ಮ್ ಝುಪಿಯಲ್ಲಿ ಗೇಮಿಂಗ್‌ಗೆ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಈ ವ್ಯಸನವು ಅವನ ಪುನರಾವರ್ತಿತ ನಷ್ಟಗಳಿಂದಾಗಿ ಆತ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಒಂದು ಹಂತದ ನಂತರ, ಅವರು ಸುಮಾರು 4 ಲಕ್ಷ ರೂ ಸಾಲವನ್ನು ಹೊಂದಿದ್ದ ಎಂದು ಹೇಳಲಾಗಿದೆ. ಸಾಲಗಾರರಿಗೆ ಮರುಪಾವತಿ ಮಾಡಲು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಆಭರಣ ಕದ್ದು ವಿಮೆ ಖರೀದಿ

ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದು, ತನ್ನ ಹೆತ್ತವರಿಗೆ ತಲಾ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಈ ಹಣವನ್ನು ಬಳಸಿದ್ದ. ಇದಾದ ಕೆಲವೇ ದಿನಗಳಲ್ಲಿ, ತಂದೆ ಇಲ್ಲದಿದ್ದಾಗ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಅದನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಅನ್ನು ಯಮುನಾ ನದಿಯ ದಡಕ್ಕೆ ಓಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಪಾಪಿ
ಆನ್‌ಲೈನ್ ಗೇಮಿಂಗ್ ಜಾಹೀರಾತು: ಸಚಿನ್ ತೆಂಡೂಲ್ಕರ್ ಮನೆ ಮುಂದೆ ಮಹಾ ಶಾಸಕನಿಂದ ಪ್ರತಿಭಟನೆ

ಚಿತ್ರಕೂಟ ದೇವಸ್ಥಾನಕ್ಕೆ ತೆರಳಿದ್ದ ಹಿಮಾಂಶುವಿನ ತಂದೆ ರೋಷನ್ ಸಿಂಗ್ ಹಿಂತಿರುಗಿ ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗ ಕಾಣಲಿಲ್ಲ. ಅವನು ಸುತ್ತಲ ಮನೆಗಳಲ್ಲಿ ಕೇಳಿದನು ಮತ್ತು ನಂತರ ಅದೇ ಪ್ರದೇಶದ ತನ್ನ ಸಹೋದರನ ಮನೆಗೆ ಹೋಗಿ ವಿಚಾರಿಸಿದ್ದಾನೆ. ಪ್ರಭಾ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆಗ ಅಕ್ಕಪಕ್ಕದವರು ಹಿಮಾಂಶು ಅವರನ್ನು ಟ್ರ್ಯಾಕ್ಟರ್‌ನಲ್ಲಿ ನದಿಯ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ.

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯಮುನಾ ಬಳಿಯಿಂದ ಮೃತದೇಹ ಪತ್ತೆಯಾಗಿದೆ. ಶೀಘ್ರದಲ್ಲೇ ಹಿಮಾಂಶು ನನ್ನು ಬಂಧಿಸಲಾಯಿತು. ಅವನ ವಿಚಾರಣೆ ವೇಳೆ ಸತ್ಯಾಂಶ ಒಪ್ಪಿಕೊಂಡಿದ್ದು, ತನ್ನ ಸಾಲವನ್ನು ತೀರಿಸಲು ತನ್ನ ತಾಯಿಯನ್ನು ಕೊಲ್ಲಲು ಸಂಚು ರೂಪಿಸಿರುವುದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. "ತಾಯಿಯನ್ನು ಕೊಂದ ನಂತರ ಮಗ ಪರಾರಿಯಾಗಿದ್ದನು. ನಾವು ಅವನನ್ನು ಹಿಡಿದು ಪಾತಕಿ ಅಪರಾಧವನ್ನು ಬಯಲಿಗೆಳೆದಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಶಂಕರ್ ಮಿಶ್ರಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com