ದೆಹಲಿ ಅಬಕಾರಿ ನೀತಿ ಹಗರಣ: 7ನೇ ಬಾರಿಗೆ ಇ.ಡಿ ವಿಚಾರಣೆಯಿಂದ ತಪ್ಪಿಸಿಕೊಂಡ ಅರವಿಂದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಮತ್ತು ಸಂಸ್ಥೆಯು ಪದೇ ಪದೆ ಸಮನ್ಸ್ ನೀಡುವ ಬದಲು ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕು ಎಂದು ಎಎಪಿ ಹೇಳಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಮತ್ತು ಸಂಸ್ಥೆಯು ಪದೇ ಪದೆ ಸಮನ್ಸ್ ನೀಡುವ ಬದಲು ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕು ಎಂದು ಎಎಪಿ ಹೇಳಿದೆ.

ಇ.ಡಿ ಸಮನ್ಸ್‌ ನೀಡಿದ್ದರೂ ವಿಚಾರಣೆಗೆ ಅರವಿಂದ ಕೇಜ್ರಿವಾಲ್ ಗೈರಾಗುತ್ತಿರುವುದು ಇದು ಏಳನೇ ಬಾರಿ.

ತನಿಖಾ ಸಂಸ್ಥೆಯು ಕಳೆದ ವಾರ ಅರವಿಂದ ಕೇಜ್ರಿವಾಲ್ ಅವರಿಗೆ ಏಳನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು.

ಜಾರಿ ನಿರ್ದೇಶನಾಲಯ ಇದುವರೆಗೆ ನೀಡಿರುವ ಎಲ್ಲಾ ಸಮನ್ಸ್‌ಗಳನ್ನು ಕೇಜ್ರಿವಾಲ್ ಅವರು 'ಕಾನೂನು ಬಾಹಿರ' ಎಂದು ಕರೆದಿದ್ದಾರೆ. ಅವುಗಳನ್ನು ಹಿಂಪಡೆಯುವಂತೆ ಇಡಿಗೆ ಪತ್ರವನ್ನೂ ಬರೆದಿದ್ದಾರೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್
ದೆಹಲಿ ಅಬಕಾರಿ ನೀತಿ ಪ್ರಕರಣ: ಮೂರನೇ ಬಾರಿಯೂ ಇ.ಡಿ ವಿಚಾರಣೆಗೆ ಅರವಿಂದ ಕೇಜ್ರಿವಾಲ್ ಗೈರು

ಇ.ಡಿ ಮುಂದೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.

ಇ.ಡಿಯ ಸಮನ್ಸ್ ಮಾನ್ಯತೆ ಕುರಿತಂತೆ ದೆಹಲಿ ನ್ಯಾಯಾಲಯವು ಮಾರ್ಚ್ 16 ರಂದು ವಿಚಾರಣೆ ನಡೆಸಲಿದೆ. ಪದೇ ಪದೆ ಸಮನ್ಸ್ ಕಳುಹಿಸುವ ಬದಲು ತನಿಖಾ ಸಂಸ್ಥೆಯು ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕು ಎಂದು ಇ.ಡಿ ಕಾಯಲಿ ಎಂದು ಎಎಪಿ ಹೇಳಿದೆ.

ಪ್ರಕರಣವು ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವಾಗ ಹೊಸ ಸಮನ್ಸ್ ನೀಡುವುದು ತಪ್ಪು ಎಂಬ ಕೇಜ್ರಿವಾಲ್ ವಾದವನ್ನು ತಿರಸ್ಕರಿಸಿದ್ದ ಜಾರಿ ನಿರ್ದೇಶನಾಲಯವು ಏಳನೇ ಸಮನ್ಸ್ ಜಾರಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com