ಕಳುವಾಗಿದ್ದ 9.35 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದ ಪೊಲೀಸರು!

ಮಹಾರಾಷ್ಟ್ರದ ಥಾಣೆ ನಗರದ ಪೊಲೀಸರು ಕಳ್ಳತನ, ದರೋಡೆ ಮತ್ತು ಮತ್ತಿತರ ಅಪರಾಧಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 9.35 ಕೋಟಿ ರೂ. ಮೌಲ್ಯದ ಕಳುವಾಗಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಪೊಲೀಸರು ಕಳ್ಳತನ, ದರೋಡೆ ಮತ್ತು ಮತ್ತಿತರ ಅಪರಾಧಗಳ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 9.35 ಕೋಟಿ ರೂ. ಮೌಲ್ಯದ ಕಳುವಾಗಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಥಾಣೆ ನಗರ, ಭಿವಂಡಿ ಮತ್ತು ವಾಗ್ಲೆ ಎಸ್ಟೇಟ್ ವಿಭಾಗಗಳಲ್ಲಿ ಮನೆಗಳ್ಳತನ, ಡಕಾಯಿತಿ, ದರೋಡೆ, ಕಳ್ಳತನ, ವಂಚನೆ, ಸರಗಳ್ಳತನ ಮತ್ತಿತರ ಕಳವು ಮಾಡಿದ ವಸ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಪಶ್ಚಿಮ) ಡಾ.ಮಹೇಶ್ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಥಾಣೆ ಪೊಲೀಸ್ ಕಮಿಷನರ್ ಅಶುತೋಷ್ ದುಂಬ್ರೆ ಮತ್ತು ಇತರ ಹಿರಿಯ ಅಧಿಕಾರಿಗಳು ಬೆಲೆಬಾಳುವ ವಸ್ತುಗಳನ್ನು ದೂರುದಾರರಿಗೆ ಹಸ್ತಾಂತರಿಸಿದರು.

ಪೊಲೀಸರ ಪ್ರಕಾರ, ದೂರುದಾರರಿಗೆ ಒಪ್ಪಿಸಿದ ಒಟ್ಟು ಆಸ್ತಿಯ ಮೌಲ್ಯ ಸುಮಾರು 9.35 ಕೋಟಿ ರೂ. ಆಗಿದೆ. ಕಳುವಾದ ವಸ್ತುಗಳಲ್ಲಿ 1.07 ಕೋಟಿ ರೂಪಾಯಿ ನಗದು, 2.20 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.97 ಕೋಟಿ ರೂಪಾಯಿ ಮೌಲ್ಯದ ವಾಹನಗಳು ಸೇರಿದಂತೆ ಇತರ ವಸ್ತುಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com