

ಚಂಡೀಗಢ: ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರ ಮೃತದೇಹ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ತೋಹಾನಾದಲ್ಲಿರುವ ಭಾಕ್ರಾ ಕಾಲುವೆಯ ಉಪ ಕಾಲುವೆಯಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುರುಗ್ರಾಮ್ ಸಹಾಯಕ ಪೊಲೀಸ್ ಆಯುಕ್ತ(ಅಪರಾಧ) ವರುಣ್ ಕುಮಾರ್ ದಹಿಯಾ ಅವರು ಹೇಳಿದ್ದಾರೆ.
ಜನವರಿ 2 ರಂದು ಗುರುಗ್ರಾಮ್‌ನ ಹೋಟೆಲ್ ಕೊಠಡಿಯಲ್ಲಿ 27 ವರ್ಷದ ದಿವ್ಯಾ ಪಹುಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪೋಲೀಸರ ಪ್ರಕಾರ, ಮಾಜಿ ಮಾಡೆಲ್ "ಅಶ್ಲೀಲ ಚಿತ್ರಗಳನ್ನು" ಇಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ.