ದೆಹಲಿ: ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯ ಮಾರ್ಗ ಎಂದು ಬದಲಾಯಿಸಿದ ಹಿಂದೂ ಕಾರ್ಯಕರ್ತರು!

ದೆಹಲಿ ನಗರದ ಬಾಬರ್ ರಸ್ತೆಯ ನಾಮಫಲಕಗಳ ಮೇಲೆ ಹಿಂದೂ ಸೇನಾ ಕಾರ್ಯಕರ್ತರು ‘ಅಯೋಧ್ಯ ಮಾರ್ಗ’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯ ಮಾರ್ಗ ಎಂದು ಬದಲಾಯಿಸಿದ ಹಿಂದೂ ಕಾರ್ಯಕರ್ತರು
ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯ ಮಾರ್ಗ ಎಂದು ಬದಲಾಯಿಸಿದ ಹಿಂದೂ ಕಾರ್ಯಕರ್ತರು
Updated on

ನವದೆಹಲಿ: ದೆಹಲಿ ನಗರದ ಬಾಬರ್ ರಸ್ತೆಯ ನಾಮಫಲಕಗಳ ಮೇಲೆ ಹಿಂದೂ ಸೇನಾ ಕಾರ್ಯಕರ್ತರು ‘ಅಯೋಧ್ಯ ಮಾರ್ಗ’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಹಿಂದೂ ಸೇನಾ ಕಾರ್ಯಕರ್ತರೆಂದು ಹೇಳಲಾಗಿರುವ ವ್ಯಕ್ತಿಗಳು ಬಾಬರ್ ರಸ್ತೆ ನಾಮಫಲಕದ ಮೇಲೆ ‘ಅಯೋಧ್ಯೆ ಮಾರ್ಗ’ ಎಂಬ ಭಿತ್ತಿ ಪತ್ರವನ್ನು ಅಂಟಿಸಿದ್ದಾರೆ.

ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಈ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಸೇನೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ, ಹಿಂದೂ ಸೇನೆ ಬಹಳ ದಿನಗಳಿಂದ ಈ ರಸ್ತೆಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದೇವು. ಈ ದೇಶವು ಭಗವಾನ್ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ವಾಲ್ಮೀಕಿ, ಗುರು ರವಿದಾಸರಂತಹ ಮಹಾಪುರುಷರ ಹೆಸರು ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವು ಎಂದು ಹೇಳಿದ್ದಾರೆ. ಈಗ ಬಾಬರಿ ಮಸೀದಿ ಇಲ್ಲದಿರುವಾಗ ದೆಹಲಿಯ ಬಾಬರ್ ರಸ್ತೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com