ಭಾರತ್ ಜೋಡೊ ಯಾತ್ರೆ ಮೇಲೆ ದಾಳಿ: ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷಗೆ ಗಾಯ

ಭಾನುವಾರ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂದಿ ಭಾರತ್ ಜೋಡೊ ಯಾತ್ರೆ
ರಾಹುಲ್ ಗಾಂದಿ ಭಾರತ್ ಜೋಡೊ ಯಾತ್ರೆ

ಗುವಾಹಟಿ: ಭಾನುವಾರ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.

ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಮೂಗಿನಿಂದ ರಕ್ತಸ್ರಾವವಾಗುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಯಾತ್ರೆಯ ಬಸ್ ಸೋನಿತ್‌ಪುರ ಜಿಲ್ಲೆಯ ಜಮುಗುರಿಹತ್‌ಗೆ ತಲುಪಿದಾಗ, ಸುಮಾರು 60 ಜನರು ಬಸ್‌ಗೆ ಘೇರಾವ್ ಹಾಕಿದರು ಎಂದು ಕಾಂಗ್ರೆಸ್ ಹೇಳಿದೆ. ಬೋರಾ ಬಸ್ಸಿನಿಂದ ಕೆಳಗಿಳಿದಾಗ ಅವರ ಮೇಲೆ ಹಲ್ಲೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನು ಉಳಿಸಲು ಯತ್ನಿಸಿದವರನ್ನೂ ಥಳಿಸಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ರಾಜ್ಯದಲ್ಲಿ ಯಾತ್ರೆಯ ತೊಂದರೆಗಳಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ಕಾರಣ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲು "ಸರ್ಕಾರಿ ಕಾರ್ಯಕ್ರಮ" ದ ಸ್ಥಳದಿಂದ ಮಹಿಳೆಯರ ಗುಂಪು ಹೊರಟುಹೋದ ದಿನದಿಂದ ಸಿಎಂ ಬಿಸ್ವಶರ್ಮಾ ಆತಂಕಗೊಂಡು, ಇಂತಹ ಕೃತ್ಯಗಳನ್ನು ನಡೆಸಿದ್ದಾರೆ.

‘ಜೈ ಶ್ರೀ ರಾಮ್’ ಮತ್ತು ‘ಮೋದಿ, ಮೋದಿ’ ಘೋಷಣೆಗಳನ್ನು ಕೂಗಿದ ಜನಸಮೂಹವು ಸೋಮವಾರ ರಾಹುಲ್ ಗಾಂಧಿ ಮತ್ತು ಯಾತ್ರೆಯಲ್ಲಿ ಪಾಲ್ಗೊಂಡ ಇತರೆ ನಾಯಕರನ್ನು ಹಿಮ್ಮೆಟ್ಟಿಸಿತ್ತು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಸುಮಾರು 20-25 ಬಿಜೆಪಿ ಕಾರ್ಯಕರ್ತರು ದೊಣ್ಣೆಗಳನ್ನು ಹಿಡಿದುಕೊಂಡು ನಮ್ಮ ಬಸ್ಸಿನ ಮುಂದೆ ಬಂದರು; ನಾನು ಬಸ್ಸಿನಿಂದ ಹೊರಬಂದಾಗ ಅವರು ಓಡಿಹೋದರು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com