ಇನ್ನೆಲ್ಲೂ ಹೋಗಲ್ಲ, ಎನ್ ಡಿಎ ನಲ್ಲೇ ಇರುತ್ತೇನೆ: ನಿತೀಶ್ ಕುಮಾರ್

ಬಿಹಾರದ ಸಿಎಂ ಆಗಿ 9 ನೇ ಬಾರಿಗೆ ಪದಗ್ರಹಣ ಮಾಡಿರುವ ನಿತೀಶ್ ಕುಮಾರ್ ಇನ್ನು ಮುಂದೆ ಮೈತ್ರಿ ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. 
ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನ: ಬಿಹಾರದ ಸಿಎಂ ಆಗಿ 9 ನೇ ಬಾರಿಗೆ ಪದಗ್ರಹಣ ಮಾಡಿರುವ ನಿತೀಶ್ ಕುಮಾರ್ ಇನ್ನು ಮುಂದೆ ಮೈತ್ರಿ ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. 

ಇನ್ನೆಲ್ಲೂ ಹೋಗುವ ಪ್ರಶ್ನೆಯೇ ಇಲ್ಲ, ಎನ್ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುತ್ತೇನೆ ಎಂದು ತಿಳಿಸಿದ್ದಾರೆ.  

INDIA ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. 

ನಾನು ಈ ಹಿಂದೆಯೂ ಎನ್ ಡಿಎ ಮೈತ್ರಿಕೂಟದಲ್ಲೇ ಇದ್ದೆ. ಆದರೆ ನಾವು ಬೇರೆ ಪಥದಲ್ಲಿದ್ದೆವು, ಈಗ ಜೊತೆಯಲ್ಲಿದ್ದೇವೆ, ಮುಂದೆಯೂ ಜೊತೆಯಲ್ಲಿಯೇ ಇರಲಿದ್ದೇವೆ. ನಾನು ಹಿಂದೆ ಎಲ್ಲಿದ್ದೆನೋ ಅಲ್ಲಿಗೇ ಮರಳಿದ್ದೇನೆ, ಇನ್ನೆಲ್ಲೂ ಹೋಗುವ ಪ್ರಶ್ನೆಯೇ ಇಲ್ಲ ಎಂದು ಪದಗ್ರಹಣ ಕಾರ್ಯಕ್ರಮದ ಬಳಿಕ ನಿತೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com