ThinkEdu 2024: ದೇಶದ ಉತ್ತಮ ವಾತಾವರಣದಿಂದ ಹಲವು ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರಲು ಬಯಸುತ್ತಿವೆ!

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಇರುವುದರಿಂದ ಹಾಗೂ ಕೊಯಮತ್ತೂರು ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರುವುದರಿಂದ, ಹಲವು ವಿದೇಶಿ  ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರಲು ಬಯಸುತ್ತವೆ.
ಥಿಂಕ್ EDU 2024 ಸಂವಾದ
ಥಿಂಕ್ EDU 2024 ಸಂವಾದ
Updated on

ಚೆನ್ನೈ: ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಇರುವುದರಿಂದ ಹಾಗೂ ಕೊಯಮತ್ತೂರು ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರುವುದರಿಂದ, ಹಲವು ವಿದೇಶಿ  ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರಲು ಬಯಸುತ್ತವೆ, ಅದರಲ್ಲೂ ವಿಶೇಷವಾಗಿ ಅಫ್ರಿಕನ್ ದೇಶಗಳು ಹೆಚ್ಚು ಆಸಕ್ತಿ ವಹಿಸುತ್ತವೆ, ಆದರೆ ಚುನಾವಣಾ ವರ್ಷವಾದುದ್ದರಿಂದ ಅವರು ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಕೇರಳ ಅಂತಾರಾಷ್ಚ್ರೀಯ ಉನ್ನತ ಶಿಕ್ಷಣ ಅಧಿಕಾರಿ ಎಲ್ಡೀವ್ಸ್  ಮ್ಯಾಥ್ಯೂಸ್ ಹೇಳಿದ್ದಾರೆ.

ಚೆನ್ನೈನಲ್ಲಿ SASTRA ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ThinkEdu ಕಾನ್ಕ್ಲೇವ್ 2024 ರ 13 ನೇ ಆವೃತ್ತಿಯಲ್ಲಿ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ಸಂಬಂಧ ನಡೆದ "ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು: ಇದು ಚಿನ್ನದ ಗುಣಮಟ್ಟ' ಸಂವಾದದಲ್ಲಿ ಮಾತನಾಡಿದರು. ಹಿರಿಯ ಪತ್ರಕರ್ತೆ ಕಾವೇರಿ ಬಾಮಜೈ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಆತಿಥ್ಯ ವಹಿಸುವ ಭಾರತದ ಸಾಮರ್ಥ್ಯದ ಕುರಿತು ಹಲವರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. .

ಭಾರತದಲ್ಲಿ ವಿದೇಶಿ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಒತ್ತಿ ಹೇಳಿದರು. "ಹೊಸ ಶಿಕ್ಷಣ ನೀತಿಯಿಂದಾಗಿ ಭಾರತವು ತೆರೆದುಕೊಳ್ಳುತ್ತಿದೆ ಆದರೆ ವಿಶ್ವವಿದ್ಯಾನಿಲಯಗಳು ಹೇಗೆ ಹೊಸ ಯೋಜನೆಗಳನ್ನು ತರುತ್ತಿವೆ, ಭಾರತದಲ್ಲಿ ಶಿಕ್ಷಣ ಮಾದರಿಯನ್ನು ವಿಸ್ತರಿಸುವ ಬಗ್ಗೆ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಯಿತು.

ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಭಾರತಕ್ಕೆ ಆಕರ್ಷಿಸುವ ಪ್ರಸ್ತುತ ವಾತಾವರಣದ ಬಗ್ಗೆ ಮಾತನಾಡಿ, "ಈ ಸಮಯದಲ್ಲಿ ಭಾರತವು ಅತ್ಯಂತ ಆಸಕ್ತಿದಾಯಕ ಸ್ಥಳವಾಗಿದೆ, ಆದರೆ ಯುವಕರು ಸ್ವಾತಂತ್ರ್ಯದ ಮೊದಲ ರುಚಿಯನ್ನು ಪಡೆಯಬಯಸುತ್ತಾರೆ, ಹೀಗಾಗಿ ಅವರು ತಮ್ಮ ಕುಟುಂಬದಿಂದ ದೂರವಿರಲು ಇಚ್ಚಿಸುತ್ತಾರೆ,  ತಮ್ಮ ಕುಟುಂಬವು ಅದನ್ನು ನಿಭಾಯಿಸಲು ಸಾಧ್ಯವಾದರೆ, ಅವರು ವಿದೇಶಗಳಿಗೆ ತೆರಳುತ್ತಾರೆ ಎಂದರು.

ಮ್ಯಾಥ್ಯೂಸ್ ಎರಡು ಆಸ್ಟ್ರೇಲಿಯನ್ ವಿಶ್ವವಿದ್ಯಾನಿಲಯಗಳನ್ನು ಉಲ್ಲೇಖಿಸಿದ್ದಾರೆ, ವೊಲೊಂಗೊಂಗ್ ವಿಶ್ವವಿದ್ಯಾನಿಲಯ ಮತ್ತು ಡೀಕಿನ್ಸ್ ವಿಶ್ವವಿದ್ಯಾನಿಲಯವು ಗುಜರಾತ್‌ನಲ್ಲಿದೆ, ಗುಜರಾತ್ ಗಿಫ್ಟ್ ಸಿಟಿ ಯೋಜನೆಯಿಂದ ಆ ವಿವಿಗಳು  ಅಲ್ಲಿ ಆರಂಭವಾಗಲು ಸಾಧ್ಯವಾಯಿತು ಎಂದಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು  ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ ಎಂದು ಮ್ಯಾಥ್ಯೂಸ್ ಗಮನಸೆಳೆದರು. "ದಕ್ಷಿಣ ಭಾರತದ ರಾಜ್ಯ ಸರ್ಕಾರಗಳು ಇಲ್ಲಿ ವಿದೇಶಿ ವಿಶ್ವವಿದ್ಯಾಲಯಗಳನ್ನು ಉತ್ತೇಜಿಸಲು ಮತ್ತು ಆಕರ್ಷಿಸಲು ಹೆಚ್ಚಿನ ಅನುಕೂಲ  ಮಾಡುತ್ತಿಲ್ಲ. ಆದರೆ ಸರ್ಕಾರಗಳು ವಿದೇಶಿ ವಿವಿಗಳಿಗೆ ಅನುಕೂಲ ಮಾಡಿಕೊಡಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿವೆ," ಎಂದು ಅವರು ಹೇಳಿದರು.

ದೇಶದಲ್ಲಿರುವ ವಿದೇಶಿ ಕ್ಯಾಂಪಸ್‌ಗಳಿಗೆ ಸಂಬಂಧಿಸಿದಂತೆ ಭಾರತದ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಹಕರಿಸುವ ವಿದೇಶಿ ಮತ್ತು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ವೈವಿಧ್ಯತೆಯನ್ನು ಸದಾರಂಗನಿ ಪ್ರತಿಪಾದಿಸಿದರು.

ಚೆನ್ನೈನಲ್ಲಿರುವ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕಾನ್ಸುಲ್-ಜನರಲ್ ಮೈಕೆಲಾ ಕುಚ್ಲರ್, ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಯು ಹೊಂದಿರಬೇಕಾದ ಗುಣಗಳನ್ನು ಒತ್ತಿಹೇಳಿದರು. "ಜರ್ಮನಿಯಲ್ಲಿ 45000 ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com