180 ದೇಶಗಳ ಪೈಕಿ ಭ್ರಷ್ಟಾಚಾರದಲ್ಲಿ ಭಾರತಕ್ಕೆ ಯಾವ ಸ್ಥಾನ ಗೊತ್ತೇ?

ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತಿರುವ ಪರಿಣಾಮ ಭ್ರಷ್ಟಾಚಾರ ಅನಿಯಂತ್ರಿತವಾಗಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಭ್ರಷ್ಟಾಚಾರ (ಸಾಂಕೇತಿಕ ಚಿತ್ರ)
ಭ್ರಷ್ಟಾಚಾರ (ಸಾಂಕೇತಿಕ ಚಿತ್ರ)

ನವದೆಹಲಿ: ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತಿರುವ ಪರಿಣಾಮ ಭ್ರಷ್ಟಾಚಾರ ಅನಿಯಂತ್ರಿತವಾಗಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

2023 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ)  ಹೆಚ್ಚಿನ ದೇಶಗಳು ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಸ್ವಲ್ಪ ಅಥವಾ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಮತ್ತು ಮೂರನೇ ಎರಡರಷ್ಟು ದೇಶಗಳು 50 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ತೋರುತ್ತಿವೆ ಎಂದು ಹೇಳಿದೆ.

"ನ್ಯಾಯ ವ್ಯವಸ್ಥೆಗಳು ತಪ್ಪನ್ನು ಶಿಕ್ಷಿಸುವವರೆಗೆ ಮತ್ತು ಸರ್ಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವವರೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಫ್ರಾಂಕೋಯಿಸ್ ವಲೇರಿಯನ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ 180 ದೇಶಗಳ ಭ್ರಷ್ಟಾಚಾರ ಶ್ರೇಯಾಂಕವೂ ಪ್ರಕಟವಾಗಿದ್ದು, ಭಾರತ 93 ನೇ ಸ್ಥಾನದಲ್ಲಿದ್ದು ಹಿಂದಿಗಿಂತ ಹೆಚ್ಚಿನ ಬದಲಾವಣೆ ಇಲ್ಲ ಎಂದು ಹೇಳಿದೆ. 

ತಜ್ಞರು ಮತ್ತು ವ್ಯಾಪಾರಸ್ಥರ ಪ್ರಕಾರ ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯ ಮಟ್ಟಗಳ ಮೂಲಕ 180 ದೇಶಗಳು ಮತ್ತು ಪ್ರಾಂತ್ಯಗಳ ಶ್ರೇಣಿಯನ್ನು ನಿರ್ಧರಿಸಲಾಗಿದೆ. ಶೂನ್ಯ ಶ್ರೇಣಿ ಹೊಂದಿರುವ ದೇಶಗಳು ಅತಿ ಹೆಚ್ಚು ಭ್ರಷ್ಟವಾಗಿದ್ದರೆ, 100ನೇ ಸ್ಥಾನ ಹೊಂದಿರುವ ದೇಶಗಳು ಭ್ರಷ್ಟಾಚಾರದ ವಿಷಯದಲ್ಲಿ ಸ್ವಚ್ಛವಾಗಿದೆ. ಭಾರತದ ಒಟ್ಟಾರೆ ಅಂಕ 39 ಇದ್ದು, 2022 ರಲ್ಲಿ 40 ಅಂಕಗಳೊಂದಿಗೆ 85 ಶ್ರೇಯಾಂಕ ಹೊಂದಿತ್ತು. “ಭಾರತದ ಸ್ಕೋರ್ ಏರಿಳಿತಗಳನ್ನು ಹೊಂದಿದ್ದು, 85 ರಿಂದ 93ಕ್ಕೆ ಸುಧಾರಣೆ ಕಂಡಿದೆ ಎಂದು ವರದಿ ಹೇಳಿದೆ. 

ದಕ್ಷಿಣ ಏಷ್ಯಾದಲ್ಲಿ, ಪಾಕಿಸ್ತಾನ (133) ಮತ್ತು ಶ್ರೀಲಂಕಾ (115) ಎರಡೂ ತಮ್ಮ ಸಾಲದ ಹೊರೆಗಳನ್ನು ಮತ್ತು ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ. "ಆದಾಗ್ಯೂ, ಎರಡು ದೇಶಗಳು ಬಲವಾದ ನ್ಯಾಯಾಂಗ ಮೇಲ್ವಿಚಾರಣೆಯನ್ನು ಹೊಂದಿವೆ, ಇದು ಸರ್ಕಾರವನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತಿದೆ" ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com