ಭೀಕರ ದೃಶ್ಯ: ಸ್ನೇಹಿತೆಯ ಹೆಗಲ ಮೇಲೆ ಕೈ ಹಾಕಿದ ಯುವಕ; ಆಯಾತಪ್ಪಿ 3ನೇ ಮಹಡಿಯಿಂದ ಬಿದ್ದ ಮಹಿಳೆ; ವಿಡಿಯೋ ವೈರಲ್!
ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಮಹಿಳೆಯೊಬ್ಬರು ಕಟ್ಟಡದ ಮೂರನೇ ಮಹಡಿಯಿಂದ ಬಿದ್ದಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಡೊಂಬಿವಲಿಯ ವಿಕಾಸ್ ನಾಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಜೊತೆಗೆ ಯುವಕನೂ ಬಿದ್ದಿದ್ದು, ಆತನನ್ನು ಹೇಗೋ ಜನ ರಕ್ಷಿಸಿದ್ದಾರೆ. ಸದ್ಯ ಮಾನ್ಪಾಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಡೊಂಬಿವಲಿ ಪೂರ್ವದ ವಿಕಾಸ್ ನಾಕಾ ಪ್ರದೇಶದಲ್ಲಿ ಗ್ಲೋಬ್ ಸ್ಟೇಟ್ ಹೆಸರಿನ ಕಟ್ಟಡವಿದೆ. ಗುಡಿಯಾದೇವಿ ಈ ಕಟ್ಟಡದಲ್ಲಿರುವ ಕಚೇರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಗುಡಿಯಾ ಡೊಂಬಿವಲಿ ಹಿಂದೆ ಪಿಸಾವಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಕಟ್ಟಡದ ಮೂರನೇ ಮಹಡಿಯಲ್ಲಿ ಗುಡಿಯಾ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ಕಟ್ಟಡದ ಮೂರನೇ ಮಹಡಿಯ ಕಟ್ಟೆಯ ಮೇಲೆ ಕುಳಿತಿದ್ದಳು. ಸ್ನೇಹಿತ ಆಕೆಯ ಮೇಲೆ ಕೈ ಹಾಕಿದ್ದು ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ.
ಮಹಿಳೆಯ ಸಹೋದ್ಯೋಗಿ ಬಂಟಿ ಅಲ್ಲಿಗೆ ಬಂದು ಮಹಿಳೆಯೊಂದಿಗೆ ತಮಾಷೆ ಮಾಡಲು ಪ್ರಾರಂಭಿಸಿದರು. ಇತರ ಜನರು ಸಹ ಅಲ್ಲಿ ಹಾಜರಿದ್ದರು. ತಮಾಷೆ ಮಾಡುತ್ತಿದ್ದಾಗ ಯುವಕನ ಕೈ ಗುಡಿಯಾಗೆ ತಗುಲಿತು ಮತ್ತು ಅವಳು ನೇರವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದಳು. ವಾಸ್ತವವಾಗಿ, ಯುವಕ ಬಂಟಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿದ್ದನು, ಇದರಿಂದಾಗಿ ಮಹಿಳೆ ತನ್ನ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದರು.
ಮಹಿಳೆಯೊಂದಿಗೆ ಮೋಜು ಮಸ್ತಿಯಲ್ಲಿದ್ದ ಬಂಟಿ ಕೂಡ ಸಮತೋಲನ ಕಳೆದುಕೊಂಡು ಹೇಗೋ ಬದುಕುಳಿದಿದ್ದಾನೆ. ಮಹಿಳೆ ಕುಳಿತಿದ್ದ ಸ್ಥಳದಲ್ಲಿ ಸಣ್ಣ ಮೆಟ್ಟಿಲು ಇತ್ತು. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ