'ಅವರು ಸಂವಿಧಾನ ಉಳಿಸುವ ಘನ ಸಂದೇಶ ರವಾನಿಸಿದ್ದಾರೆ': ಯುಪಿ ಜನರನ್ನು ಶ್ಲಾಘಿಸಿದ ಪ್ರಿಯಾಂಕಾ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಉತ್ತರ ಪ್ರದೇಶದ ಜನತೆಯನ್ನು ಶ್ಲಾಘಿಸಿದ್ದು, ಅವರು ಇಡೀ ದೇಶಕ್ಕೆ ಸಂವಿಧಾನವನ್ನು ಉಳಿಸುವ ಘನ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ
Updated on

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಉತ್ತರ ಪ್ರದೇಶದ ಜನತೆಯನ್ನು ಶ್ಲಾಘಿಸಿದ್ದು, ಅವರು ಇಡೀ ದೇಶಕ್ಕೆ ಸಂವಿಧಾನವನ್ನು ಉಳಿಸುವ ಘನ ಸಂದೇಶ ರವಾನಿಸಿದ್ದಾರೆ ಮತ್ತು ಸಾರ್ವಜನಿಕ ಸಮಸ್ಯೆಗಳೇ ಮುಖ್ಯ ಎಂಬ ಹಳೆ ಆದರ್ಶವನ್ನು ಮರುಸ್ಥಾಪಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಉತ್ತರ ಪ್ರದೇಶದಲ್ಲಿ ಸೋಲು ಅನುಭವಿಸಿದ್ದು, ಕೇವಲ 36 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಇಂಡಿಯಾ ಬ್ಲಾಕ್‌ 43 ಸ್ಥಾನಗಳನ್ನು ಗಳಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, "ಯುಪಿ ಕಾಂಗ್ರೆಸ್‌ನ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ನಮಸ್ಕಾರಗಳು. ನೀವು ಬಿಸಿಲು ಮತ್ತು ಧೂಳಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡಿದೆ. ನೀವು ತಲೆಬಾಗಲಿಲ್ಲ, ನೀವು ನಿಲ್ಲಲಿಲ್ಲ, ನಿಮ್ಮ ವಿರುದ್ಧ ದೌರ್ಜನ್ಯಗಳು ನಡೆದಿವೆ, ನಿಮ್ಮ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಮ್ಮನ್ನು ಪದೇ ಪದೇ ಗೃಹಬಂಧನದಲ್ಲಿ ಇರಿಸಲಾಗಿದೆ. ಆದರೂ ನೀವು ಭಯಪಡಲಿಲ್ಲ. ದೃಢವಾಗಿ ಕಾಂಗ್ರಸ್ ಜತೆ ನಿಂತಿದ್ದೀರಿ" ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ
ನೀವು ಪ್ರೀತಿ, ಸತ್ಯ ಮತ್ತು ಮಾನವೀಯತೆಯಿಂದ ಹೋರಾಡಿದ್ದೀರಿ: ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ

ಈ ದೇಶದ ಆಳ ಮತ್ತು ಸತ್ಯವನ್ನು ಅರ್ಥಮಾಡಿಕೊಂಡು ಇಡೀ ಭಾರತಕ್ಕೆ ಸಂವಿಧಾನವನ್ನು ಉಳಿಸುವ ಘನ ಸಂದೇಶ ನೀಡಿದ ಉತ್ತರ ಪ್ರದೇಶದ ಜಾಗರೂಕ ಜನರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಪ್ರಯಾಂಕಾ ಗಾಂಧಿ ಶ್ಲಾಘಿಸಿದ್ದಾರೆ.

"ನೀವು ಇಂದಿನ ರಾಜಕೀಯದಲ್ಲಿ ಹಳೆಯ ಆದರ್ಶವನ್ನು ಮರುಸ್ಥಾಪಿಸಿದ್ದೀರಿ - ಜನರ ಸಮಸ್ಯೆಗಳು ಮುಖ್ಯ, ಅವುಗಳನ್ನು ನಿರ್ಲಕ್ಷಿಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಸಂದೇಶ ನೀಡಿದ್ದೀರಿ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com