
ನವದೆಹಲಿ: ದೇಶದ ಜನತೆ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಕರೆ ನೀಡಿದ್ದಾರೆ.
ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮುನ್ನ ಮೋದಿ ಅವರು ಈ ಕರೆ ನೀಡಿದ್ದು, ಇತರರಿಗೂ ಮಾಡಲು ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇನ್ನು 10 ದಿನಗಳಲ್ಲಿ ವಿಶ್ವವು 10ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದ್ದು, ಏಕತೆ ಮತ್ತು ಸಾಮರಸ್ಯವನ್ನು ಆಚರಿಸುವ ಸಮಯರಹಿತ ಅಭ್ಯಾಸವನ್ನು ಆಚರಿಸುತ್ತದೆ. ಯೋಗವು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದ್ದು, ಸಮಗ್ರ ಯೋಗಕ್ಷೇಮದ ಅನ್ವೇಷಣೆಯಲ್ಲಿ ವಿಶ್ವದ ಲಕ್ಷಾಂತರ ಜನರನ್ನು ಒಂದುಗೂಡಿಸಿದೆ ಎಂದು ಹೇಳಿದ್ದಾರೆ.
ಈ ವರ್ಷದ ಯೋಗ ದಿನ ಹತ್ತಿರ ಬರುತ್ತಿದ್ದು, ಯೋಗವನ್ನು ನಮಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವ ನಮ ಬದ್ಧತೆಯನ್ನು ಪುನರುಚ್ಚರಿಸುವುದು ಅತ್ಯಗತ್ಯವಾಗಿದೆ. ಇತರರನ್ನು ಕೂಡ ಇದರ ಭಾಗವಾಗಿಸಲು ಪ್ರೋತ್ಸಾಹ ನೋಡೋಣ ಎಂದ ತಿಳಿಸಿದ್ದಾರೆ.
ಅಲ್ಲದೆ, ಯೋಗದ ವಿವಿಧ ರೂಪಗಳು ಮತ್ತು ಅವುಗಳ ಪ್ರಯೋಜನಗಳನ್ನು ತೋರಿಸುವ ವೀಡಿಯೋವನ್ನು ಮೋದಿಯವರು ಹಂಚಿಕೊಂಡಿದ್ದಾರೆ.
Advertisement