ಬಿಜೆಪಿಯನ್ನು ಸೋಲಿಸುವ ಮೂಲಕ ಅಯೋಧ್ಯೆ ಜನರು 'ದೇಗುಲ ರಾಜಕೀಯ'ವನ್ನು ಸರಿಪಡಿಸಿದ್ದಾರೆ: ಶರದ್ ಪವಾರ್

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಅಯೋಧ್ಯೆಯ ಜನರು 'ದೇವಸ್ಥಾನದ ರಾಜಕೀಯ'ವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಪ್ರದರ್ಶಿಸಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on

ಪುಣೆ: ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಅಯೋಧ್ಯೆಯ ಜನರು 'ದೇವಸ್ಥಾನದ ರಾಜಕೀಯ'ವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಪ್ರದರ್ಶಿಸಿದ್ದಾರೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.

ಬಾರಾಮತಿಯಲ್ಲಿ ನಡೆದ ವರ್ತಕರ ಸಮಾವೇಶದಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಈ ಬಾರಿ ಅವರ ಸಂಖ್ಯೆ 240ಕ್ಕೆ ಇಳಿದಿದೆ, ಬಹುಮತದ ಕೊರತೆಯಿದೆ. ಈ ಬಾರಿ 60 ಸ್ಥಾನಗಳು ಕಡಿಮೆಯಾಗಿವೆ ಮತ್ತು ಈ ಕಡಿತದಲ್ಲಿ ಉತ್ತರ ಪ್ರದೇಶವು ಪ್ರಮುಖ ರಾಜ್ಯವಾಗಿದೆ. ಏಕೆಂದರೆ, ಅಲ್ಲಿನ ಜನರು ವಿಭಿನ್ನ ರೀತಿಯ ತೀರ್ಪು ನೀಡಿದ್ದಾರೆ' ಎಂದರು.

ರಾಮಮಂದಿರವು ಚುನಾವಣಾ ಅಜೆಂಡಾ ಆಗಿರುತ್ತದೆ ಮತ್ತು ಆಡಳಿತ ಪಕ್ಷವು ಮತಗಳನ್ನು ಪಡೆಯುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ, ನಮ್ಮ ದೇಶದ ಜನರು ಸಾಕಷ್ಟು ಬುದ್ಧಿವಂತರಾಗಿದ್ದಾರೆ. ದೇವಸ್ಥಾನದ ಹೆಸರಿನಲ್ಲಿ ಮತ ಕೇಳಲಾಗುತ್ತಿದೆ ಎಂಬುದನ್ನು ತಿಳಿದ ಕೂಡಲೇ ಅವರು ವಿಭಿನ್ನ ನಿಲುವು ತೆಗೆದುಕೊಳ್ಳಲು ನಿರ್ಧರಿಸಿದರು ಮತ್ತು ಬಿಜೆಪಿ ಸೋಲನ್ನು ಕಾಣಬೇಕಾಯಿತು ಎಂದು ಹೇಳಿದರು.

ಶರದ್ ಪವಾರ್
'ಅವರು ಸಂವಿಧಾನ ಉಳಿಸುವ ಘನ ಸಂದೇಶ ರವಾನಿಸಿದ್ದಾರೆ': ಯುಪಿ ಜನರನ್ನು ಶ್ಲಾಘಿಸಿದ ಪ್ರಿಯಾಂಕಾ

ಅಯೋಧ್ಯೆಯ ಫೈಜಾಬಾದ್ ಸಂಸದೀಯ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಅವರನ್ನು 54,567 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ಬಿಜೆಪಿಗೆ ತೀವ್ರ ಹೊಡೆತ ನೀಡಿದೆ.

ರಾಮ ಮಂದಿರವನ್ನು ಚುನಾವಣಾ ಅಜೆಂಡಾವಾಗಿ ಬಳಸುವುದರ ಬಗ್ಗೆ ಪ್ರತಿಪಕ್ಷಗಳು ಆತಂಕಗೊಂಡಿದ್ದವು. ಆದರೆ, ಜನರು ವಿಭಿನ್ನ ನಿಲುವು ತಳೆದಿದ್ದಾರೆ. ಮತ ಕೇಳಲು ದೇವಸ್ಥಾನವನ್ನು ಚುನಾವಣಾ ಅಜೆಂಡಾವಾಗಿ ಬಳಸುವ ಬಿಜೆಪಿ ನಿಲುವಿನಿಂದ ನಾವು ಭಯಗೊಂಡಿದ್ದೆವು. ಆದರೆ, ಅಯೋಧ್ಯೆಯ ಜನರು ದೇವಾಲಯದ ರಾಜಕೀಯವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದರು.

ಶರದ್ ಪವಾರ್
ಟೆಂಟ್‌ನಲ್ಲಿದ್ದ ರಾಮನಿಗೆ ದೇಗುಲ ಕಟ್ಟಿದ್ದೇ ತಪ್ಪಾ?; ಅಯೋಧ್ಯೆ ಜನರ ವಿರುದ್ಧ 'ರಾಮಾಯಣ'ದ ನಟ ಕಿಡಿ

ಜನರ ಸಾಮೂಹಿಕ ಆತ್ಮಸಾಕ್ಷಿಯಿಂದ ಭಾರತದಲ್ಲಿ ಪ್ರಜಾಪ್ರಭುತ್ವವು ಅಖಂಡವಾಗಿದೆ. ಆದರೆ, ರಾಜಕೀಯದಿಂದಲ್ಲ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವವರು ಅಸಾಮಾನ್ಯ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಜನರು ಅವರನ್ನು ಮತ್ತೆ ನೆಲಕ್ಕೆ ತಂದಿದ್ದಾರೆ. ಚಂದ್ರಬಾಬು ನಾಯ್ಡು (ಟಿಡಿಪಿ) ಮತ್ತು ನಿತೀಶ್ ಕುಮಾರ್ ಅವರ ಸಹಾಯ ಪಡೆದು ನರೇಂದ್ರ ಮೋದಿ ಅವರು ಸರ್ಕಾರ ರಚಿಸಿದ್ದಾರೆ. ಆದರೆ ಸ್ವಂತವಾಗಿ ಅಲ್ಲ ಎಂದು ಪವಾರ್ ಹೇಳಿದರು.

ಇತರರ ನೆರವಿನಿಂದ ಸರ್ಕಾರ ನಡೆಸುವಾಗ ‘ಹೊಂದಾಣಿಕೆ’ಯನ್ನು ನಿರ್ಲಕ್ಷಿಸುವಂತಿಲ್ಲ ಮತ್ತು ಆ ರೀತಿಯ ಪರಿಸ್ಥಿತಿ ದೇಶದಲ್ಲಿ ಚಾಲ್ತಿಯಲ್ಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶಗಳು ಬಿಜೆಪಿಗೆ ಬಹುಮತ ನೀಡಿಲ್ಲ ಮತ್ತು ಎನ್‌ಡಿಎ ಮಿತ್ರಪಕ್ಷಗಳನ್ನು ಅವಲಂಬಿಸಿದೆ ಎಂದರು.

ಮಹಾರಾಷ್ಟ್ರದಲ್ಲಿ ಪವಾರ್ ನೇತೃತ್ವದ ಎನ್‌ಸಿಪಿ ತಾನು ಸ್ಪರ್ಧಿಸಿದ್ದ 10 ಲೋಕಸಭಾ ಕ್ಷೇತ್ರಗಳಲ್ಲಿ 8 ರಲ್ಲಿ ಗೆದ್ದು ಬೀಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com