ದೆಹಲಿ ಆಯ್ತು, ಈಗ ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿತ!

ಭಾರೀ ಮಳೆಯ ನಡುವೆ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿನ ಮೇಲ್ಛಾವಣಿ ಕುಸಿದಿದೆ.
ರಾಜ್ ಕೋಟ್ ವಿಮಾನ ನಿಲ್ದಾಣ
ರಾಜ್ ಕೋಟ್ ವಿಮಾನ ನಿಲ್ದಾಣ
Updated on

ರಾಜ್ ಕೋಟ್: ದೆಹಲಿ ಆಯ್ತು, ಈಗ ಗುಜರಾತಿನ ರಾಜ್ ಕೋಟ್ ವಿಮಾನ ನಿಲ್ದಾಣದ ಹೊರಗಿನ ಮೇಲ್ಫಾವಣಿ ಕುಸಿದು ಬಿದ್ದಿದೆ. ಭಾರೀ ಮಳೆಯ ನಡುವೆ ರಾಜ್‌ಕೋಟ್ ವಿಮಾನ ನಿಲ್ದಾಣದ ಟರ್ಮಿನಲ್‌ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿನ ಮೇಲ್ಛಾವಣಿ ಕುಸಿದಿದೆ. ಆದರೆ, ಯಾವುದೇ ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.

ರಾಜ್ ಕೋಟ್ ವಿಮಾನ ನಿಲ್ದಾಣ
88 ವರ್ಷಗಳ ಬಳಿಕ ದಾಖಲೆಯ ವರ್ಷಧಾರೆ: ಬಿರುಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ; ಮಳೆ ಸಂಬಂಧಿತ ಅವಘಡಕ್ಕೆ 7 ಬಲಿ

ನಿನ್ನೆ ದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಟರ್ಮಿನಲ್ 1ರ ಛಾವಣಿಯ ಒಂದು ಭಾಗ ಕುಸಿದಿದ್ದರಿಂದ ಒಬ್ಬರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದರು. ಇದಾದ ಮಾರನೇ ದಿನವೇ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನ ರಾಜ್ ಕೋಟ್ ನಲ್ಲಿಯೂ ಇಂತಹುದೇ ಘಟನೆ ನಡೆದಿದೆ.

ಇದು ದೇಶದಲ್ಲಿ ಸಂಭವಿಸಿದ ಮೂರನೇ ಘಟನೆಯಾಗಿದೆ. ರಾಜ್‌ಕೋಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರಂದು ಉದ್ಘಾಟಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com