ಆಹಾರ ಧಾನ್ಯ ಉತ್ಪಾದನೆ ಹೆಚ್ಚಳ, ಬೇಳೆಕಾಳುಗಳು ಉತ್ಪಾದನೆ ಕುಂಠಿತ!

2023-24ನೇ ಸಾಲಿನ ಆಹಾರ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ವಿಶೇಷವಾಗಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ಆದರೆ, ಬೇಳೆಕಾಳುಗಳ ಉತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: 2023-24ನೇ ಸಾಲಿನ ಆಹಾರ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ವಿಶೇಷವಾಗಿ ಅಕ್ಕಿ ಮತ್ತು ಗೋಧಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ತೋರಿಸಿದೆ. ಆದರೆ, ಬೇಳೆಕಾಳುಗಳ ಉತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಖಾರಿಫ್ ಆಹಾರ ಧಾನ್ಯ ಉತ್ಪಾದನೆಯನ್ನು 1541.87 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ ಮತ್ತು 2023-24ನೇ ಸಾಲಿನಲ್ಲಿ ರಬಿ ಆಹಾರ ಧಾನ್ಯ ಉತ್ಪಾದನೆಯನ್ನು 1551.61 ಎಲ್‌ಎಂಟಿ ಎಂದು ಅಂದಾಜಿಸಲಾಗಿದೆ. ಖಾರಿಫ್ ಬೆಳೆ ಉತ್ಪಾದನೆಯ ಅಂದಾಜು ಮೊದಲ ಅಂದಾಜಿಗಿಂತ 56 ಎಲ್ಎಂಟಿಯಷ್ಟು ಹೆಚ್ಚಾಗಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2023-24ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ (ಖಾರಿಫ್ ಮತ್ತು ರಬಿ ಋತು) ಎರಡನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ಕೃಷಿ ವರ್ಷದಿಂದ ಬೇಸಿಗೆಯನ್ನು ರಬಿ ಋತುವಿನಿಂದ ಪ್ರತ್ಯೇಕಿಸಲಾಗಿದೆ. ಆದ್ದರಿಂದ, ಈ ವರ್ಷದ ಎರಡನೇ ಮುಂಗಡ ಅಂದಾಜು ಪ್ರದೇಶ, ಉತ್ಪಾದನೆ ಮತ್ತು ಇಳುವರಿಯು ಕೇವಲ ಖಾರಿಫ್ ಮತ್ತು ರಬಿ ಋತುಗಳನ್ನು ಒಳಗೊಂಡಿದೆ.

ಪ್ರಾತಿನಿಧಿಕ ಚಿತ್ರ
ಬರಕ್ಕೆ ರೈತ ತತ್ತರ: ಕಡಿಮೆ ಬಂಡವಾಳ ಲಾಭದಾಯಕ ಕೃಷಿಯತ್ತ ಮುಖ, ಆಹಾರ ಧಾನ್ಯ ಬೆಳೆ ಉತ್ಪಾದನೆಯಲ್ಲಿ ಕುಸಿತ!

ಸರ್ಕಾರವು 2022-23ರಲ್ಲಿ ಅಂದಾಜಿಸಿದ್ದ 1105.12 ಎಲ್‌ಎಂಟಿಗೆ ಹೋಲಿಸಿದರೆ ಈ ಬಾರಿ ಖಾರಿಫ್ ಋತುವಿನಲ್ಲಿ 1114.58 ಎಲ್ಎಂಟಿ ಅಕ್ಕಿ ಉತ್ಪಾದನೆಯನ್ನು ಅಂದಾಜಿಸಿದೆ. ರಬಿ ಋತುವಿನ ಭತ್ತದ ಸದ್ಯದ ಅಂದಾಜಿನ ಪ್ರಕಾರ, ಇನ್ನೂ ಕೊಯ್ಲು ಪ್ರಾರಂಭಿಸಬೇಕಾಗಿದ್ದು, 123.57 ಎಲ್ಎಂಟಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ, ಗೋಧಿ ಕಟಾವು ಇನ್ನೂ ಪ್ರಾರಂಭವಾಗದಿದ್ದರೂ, ಸರ್ಕಾರವು ಬಂಪರ್ ಉತ್ಪಾದನೆಯನ್ನು ಅಂದಾಜಿಸಿದೆ. ಈ ಪ್ರಕಾರ, ಗೋಧಿ ಉತ್ಪಾದನೆಯು ಈ ಬಾರಿ 1120.19 ಎಲ್ಎಂಟಿ ಆಗಿದ್ದು, ಇದು ಹಿಂದಿನ ವರ್ಷದ ಉತ್ಪಾದನೆಯಾದ 1105.54 ಎಲ್ಎಂಟಿಗೆ ಹೋಲಿಸಿದರೆ 14.65 ಎಲ್ಎಂಟಿಯಷ್ಟು ಹೆಚ್ಚಾಗಿದೆ.

ಪ್ರಾತಿನಿಧಿಕ ಚಿತ್ರ
ದೇಶದಲ್ಲಿ ಅಕ್ಕಿ ಉತ್ಪಾದನೆ ಕುಸಿತ: ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಹಿನ್ನಡೆ ಸಾಧ್ಯತೆ!

ಆದಾಗ್ಯೂ, ತೊಗರಿ ಮತ್ತು ಕಡಲೆಯಂತಹ ಪ್ರಮುಖ ದ್ವಿದಳ ಧಾನ್ಯಗಳ ಉತ್ಪಾದನೆಯ ಬಗ್ಗೆ ಕಳವಳವಿದೆ. ಈ ವರ್ಷದ ಅಂದಾಜಿನ ಪ್ರಕಾರ 33.39 ಎಲ್ಎಂಟಿ ಉತ್ಪಾದನೆಯನ್ನು ಸೂಚಿಸಿದ್ದು, ಇದು ಕಳೆದ ವರ್ಷದ 33.12 ಎಲ್ಎಂಟಿ ಉತ್ಪಾದನೆಗೆ ಹೋಲುತ್ತದೆ. ಕಡಲೆ ಉತ್ಪಾದನೆಯು 121.61 ಎಲ್ಎಂಟಿ ಎಂದು ಅಂದಾಜಿಸಲಾಗಿದೆ. ಇದು ಕೂಡ ಹಿಂದಿನ ವರ್ಷಕ್ಕಿಂತ ಸ್ವಲ್ಪ ಕಡಿಮೆ ಉತ್ಪಾದನೆಯಾಗಿದೆ. ಆದರೆ, 2018-19 ರಿಂದ 2022-23 ರವರೆಗಿನ ಸರಾಸರಿ ಉತ್ಪಾದನೆಗಿಂತ ಉತ್ಪಾದನೆ ಹೆಚ್ಚಾಗಿದೆ. ಮಸೂರ ಉತ್ಪಾದನೆಯು 16.36 ಎಲ್ಎಂಟಿ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಯಾದ 15.59 ಎಲ್ಎಂಟಿಗಿಂತ 0.77 ಎಲ್ಎಂಟಿ ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com