ಪಾಕ್ ಅಣ್ವಸ್ತ್ರ ಯೋಜನೆ ಬಳಕೆಗೆ ರವಾನೆಯಾಗುತ್ತಿದ್ದ ಶಂಕೆ: ಮುಂಬೈ ನಲ್ಲಿ ಹಲವು ವಸ್ತುಗಳು ವಶಕ್ಕೆ

ಚೀನಾದಿಂದ ಕರಾಚಿಗೆ ತೆರಳುತ್ತಿದ್ದ ಹಡಗೊಂದನ್ನು ಭಾರತೀಯ ಭದ್ರತಾ ಏಜೆನ್ಸಿಗಳು ತಡೆದು ನಿಲ್ಲಿಸಿದ್ದು, ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಬ್ಯಾಲಿಸ್ಟಿಕ್ ಮಿಸೈಲ್ ಯೋಜನೆಗೆ ಬಳಕೆಯಾಗುವುದಕ್ಕೆ ಸಾಧ್ಯವಿರುವ ಉಭಯ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈ ಬಂದರು (ಸಾಂಕೇತಿಕ ಚಿತ್ರ)
ಮುಂಬೈ ಬಂದರು (ಸಾಂಕೇತಿಕ ಚಿತ್ರ)online desk

ಮುಂಬೈ: ಚೀನಾದಿಂದ ಕರಾಚಿಗೆ ತೆರಳುತ್ತಿದ್ದ ಹಡಗೊಂದನ್ನು ಭಾರತೀಯ ಭದ್ರತಾ ಏಜೆನ್ಸಿಗಳು ತಡೆದು ನಿಲ್ಲಿಸಿದ್ದು, ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಬ್ಯಾಲಿಸ್ಟಿಕ್ ಮಿಸೈಲ್ ಯೋಜನೆಗೆ ಬಳಕೆಯಾಗುವುದಕ್ಕೆ ಸಾಧ್ಯವಿರುವ ಉಭಯ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಂಬೈ ನ ನ್ಹವಾ ಶೇವಾ ಬಂದರಿನಲ್ಲಿ ಈ ಘಟನೆ ವರದಿಯಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ ಕಸ್ಟಮ್ಸ್ ಅಧಿಕಾರಿಗಳು ಮಾಲ್ಟಾ-ಧ್ವಜ ಹಾಕಿದ್ದ, ಕರಾಚಿಗೆ ತೆರಳುತ್ತಿದ್ದ ವ್ಯಾಪಾರಿ ಹಡಗು -- CMA CGM ಅಟಿಲಾನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ, ಈ ವೇಳೆ ಇಟಾಲಿ ಸಂಸ್ಥೆಯಿಂದ ತಯಾರಾದ ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ (ಸಿಎನ್ ಸಿ) ಮಷಿನ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಂಡ ಕನ್ಸೈನ್ಮೆಂಟ್ ನ್ನು ಪರಿಶೀಲಿಸಿದ್ದು ನೆರೆಯ ರಾಷ್ಟ್ರ ತನ್ನ ಪರಮಾಣು ಕಾರ್ಯಕ್ರಮಕ್ಕಾಗಿ ಅದನ್ನು ಬಳಸುವ ಸಾಧ್ಯತೆ ಇದೆ ಎಂದು ಪ್ರಮಾಣೀಕರಿಸಿದೆ. ತಜ್ಞರ ಪ್ರಕಾರ, ಪಾಕಿಸ್ತಾನದ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ನಿರ್ಣಾಯಕ ಭಾಗಗಳನ್ನು ತಯಾರಿಸಲು ಇಲ್ಲಿ ಪತ್ತೆಯಾಗಿರುವ ಉಪಕರಣಗಳು ಉಪಯುಕ್ತವಾಗಿವೆ.

ಮುಂಬೈ ಬಂದರು (ಸಾಂಕೇತಿಕ ಚಿತ್ರ)
1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ: ಟಿಎಡಿಎ ಕೋರ್ಟ್

1996 ರಿಂದ, ಸಿಎನ್‌ಸಿ ಯಂತ್ರಗಳನ್ನು ವಾಸ್ಸೆನಾರ್ ಅರೇಂಜ್‌ಮೆಂಟ್‌ನಲ್ಲಿ ಸೇರಿಸಲಾಗಿದ್ದು-- ಇದು ನಾಗರಿಕ ಮತ್ತು ಮಿಲಿಟರಿ ಬಳಕೆಗಳೊಂದಿಗೆ ಉಪಕರಣಗಳ ಪ್ರಸರಣವನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ನಿಯಂತ್ರಣ ವ್ಯವಸ್ಥೆಯಾಗಿದೆ. ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಮತ್ತು ಉಭಯ ಬಳಕೆಯ ಸರಕುಗಳು ಮತ್ತು ತಂತ್ರಜ್ಞಾನಗಳ ವರ್ಗಾವಣೆಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ 42 ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.

CNC ಯಂತ್ರವನ್ನು ಉತ್ತರ ಕೊರಿಯಾ ತನ್ನ ಪರಮಾಣು ಕಾರ್ಯಕ್ರಮದಲ್ಲಿ ಬಳಸುತ್ತಿದೆ. ಬಂದರು ಅಧಿಕಾರಿಗಳು, ನಿರ್ದಿಷ್ಟ ಗುಪ್ತಚರ ಮಾಹಿತಿಯೊಂದಿಗೆ, ಭಾರತೀಯ ರಕ್ಷಣಾ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ನಂತರ ಸರಕುಗಳನ್ನು ವಶಪಡಿಸಿಕೊಳ್ಳಲಾಯಿತು, ವಶಪಡಿಸಿಕೊಂಡಿರುವ ವಸ್ತುಗಳು ಪಾಕಿಸ್ತಾನ ಮತ್ತು ಚೀನಾದಿಂದ ಸಂಭವನೀಯ ಪ್ರಸರಣವನ್ನು ತಡೆಗಟ್ಟುವ ಅಡಿಯಲ್ಲಿ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಬಂದರು (ಸಾಂಕೇತಿಕ ಚಿತ್ರ)
ಮುಂಬೈ ನಗರದ 6 ಕಡೆ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ: ಪೊಲೀಸರ ತೀವ್ರ ಕಟ್ಟೆಚ್ಚರ, ತಪಾಸಣೆ

ಲೋಡಿಂಗ್‌ನ ಬಿಲ್‌ಗಳು ಮತ್ತು ಕನ್ಸೈನ್ಮೆಂಟ್ ನ ಇತರ ವಿವರಗಳಂತಹ ದಾಖಲೆಗಳ ಪ್ರಕಾರ, ರವಾನೆದಾರನನ್ನು 'ಶಾಂಘೈ JXE ಗ್ಲೋಬಲ್ ಲಾಜಿಸ್ಟಿಕ್ಸ್ ಕಂ ಲಿಮಿಟೆಡ್' ಎಂದು ನಮೂದಿಸಲಾಗಿದೆ ಮತ್ತು ರವಾನೆಯಾಗುವ ವಸ್ತುವನ್ನು ಸಿಯಾಲ್‌ಕೋಟ್‌ನ 'ಪಾಕಿಸ್ತಾನ್ ವಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸ್ವೀಕರಿಸಲಿದೆ ಎಂದು ನಮೂದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com