ಯುವಕರನ್ನು ಮುನ್ನೆಲೆಗೆ ತರಲು ಕಾಂಗ್ರೆಸ್‌ಗೆ ಭಯ; 75-80 ವರ್ಷ ಮೇಲ್ಪಟ್ಟವರನ್ನು ನೇಮಿಸುತ್ತದೆ: ಪ್ರಧಾನಿ ಮೋದಿ

ಯುವ ನಾಯಕರನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ ಹೆದರುತ್ತಿದೆ ಎಂದು ಮಂಗಳವಾರ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, ಪಕ್ಷವು 75-80 ವರ್ಷ ಮೇಲ್ಪಟ್ಟವರನ್ನು ಹುದ್ದೆಗಳಿಗೆ ನೇಮಕ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಸಂಗಾರೆಡ್ಡಿ: ಯುವ ನಾಯಕರನ್ನು ಮುನ್ನೆಲೆಗೆ ತರಲು ಕಾಂಗ್ರೆಸ್ ಹೆದರುತ್ತಿದೆ ಎಂದು ಮಂಗಳವಾರ ಕಿಡಿಕಾರಿದ ಪ್ರಧಾನಿ ನರೇಂದ್ರ ಮೋದಿ, ಪಕ್ಷವು 75-80 ವರ್ಷ ಮೇಲ್ಪಟ್ಟವರನ್ನು ಹುದ್ದೆಗಳಿಗೆ ನೇಮಕ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳನ್ನು ಬಹಿರಂಗಪಡಿಸುತ್ತಿದ್ದಂತೆಯೇ ಕುಟುಂಬ ರಾಜಕಾರಣದ ಪಕ್ಷಗಳು ತನ್ನನ್ನು ಗುರಿಯಾಗಿಸಿಕೊಂಡಿವೆ. ನಾನು ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದಾಳಿ ಮಾಡಿಲ್ಲ ಆದರೆ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.

ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಮತ್ತು ಯುವಕರಿಗೆ ಸಿಗಬೇಕಿದ್ದ ಹೊಸ ಅವಕಾಶಗಳನ್ನು ತಡೆಯುತ್ತದೆ. ಇದಕ್ಕಾಗಿಯೇ ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತೇನೆ. ಅವರು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಮೋದಿಗೆ ಕುಟುಂಬವಿಲ್ಲ ಎಂದು ಟೀಕಿಸುತ್ತಾರೆ ಎಂದು ಹೇಳಿದರು.

ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ತೆಲಂಗಾಣದಲ್ಲಿ 56,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

'ಕಾಂಗ್ರೆಸ್ ಈ ಮೊದಲು ಕುಟುಂಬ ರಾಜಕಾರಣವನ್ನು ಹೊಂದಿರಲಿಲ್ಲ. ಇದು 50 ವರ್ಷಕ್ಕಿಂತ ಕೆಳಗಿನ ಯಾರನ್ನೂ ಮುನ್ನೆಲೆಗೆ ತರುವುದಿಲ್ಲ. ಅವರು ಯಾರನ್ನಾದರೂ ನೇಮಿಸಬೇಕಾದರೆ, 75-80 ವರ್ಷದವರು ಅಥವಾ 85 ವರ್ಷದವರನ್ನು ನೇಮಿಸುತ್ತಾರೆ. 50 ವರ್ಷದ ವ್ಯಕ್ತಿ ಬಂದು ಓವರ್ ಟೇಕ್ ಮಾಡಿದರೆ ಕುಟುಂಬದ ಗತಿಯೇನು ಎಂಬ ಭಯ ಅವರಿಗಿದೆ' ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಿಂದ ತಮಿಳುನಾಡಿನವರೆಗೆ, ಎಲ್ಲೆಲ್ಲಿ ಕುಟುಂಬಗಳು ಮುನ್ನಡೆಸುವ ಪಕ್ಷಗಳ ಆಡಳಿತವಿದೆಯೋ, ಅಂತಹ ರಾಜ್ಯಗಳು 'ಹಾಳಾಗಿವೆ' ಮತ್ತು ಆ ಕುಟುಂಬಗಳು ಬಲಿಷ್ಠವಾಗಿವೆ ಹೊರತು ರಾಜ್ಯಗಳಲ್ಲ. ಈ ಕುಟುಂಬಗಳು ನಡೆಸುವ ರಾಜಕೀಯವನ್ನು ಮುಂದುವರಿಸಲು ಬಿಡಬೇಕೇ ಎಂದು ಅವರು ಪ್ರಶ್ನಿಸಿದರು.

ತೆಲಂಗಾಣದ ಸಂಗಾರೆಡ್ಡಿಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಮುಚ್ಚಿರುವ ಉದ್ಯೋಗದ ಬಾಗಿಲನ್ನು ಯುವಕರಿಗೆ ಇಂಡಿಯಾ ಮೈತ್ರಿಕೂಟ ತೆರೆಯುತ್ತದೆ: ರಾಹುಲ್ ಗಾಂಧಿ

ಇಂತಹ ಕುಟುಂಬ ನಡೆಸುವ ಪಕ್ಷಗಳು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಪ್ರತಿಭೆ ಮತ್ತು ಯುವ ವಿರೋಧಿಯಾಗಿವೆ. ವಂಶಾಡಳಿತದ ರಾಜಕೀಯದ ಬಗ್ಗೆ ತಾವು ಪ್ರಸ್ತಾಪಿಸಿದಾಗ, 'ಮೋದಿ ಅವರಿಗೆ ಕುಟುಂಬವಿಲ್ಲ' ಎಂದು ಅವರು ಹೇಳುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com