2 ಸಾವಿರ ಕೋಟಿ ರೂ ಮೌಲ್ಯದ Drugs Smuggling; ಚಿತ್ರ ನಿರ್ಮಾಪಕ, DMK ಮಾಜಿ ನಾಯಕ ಜಾಫರ್ ಸಾದಿಕ್ ಬಂಧನ

ವಿದೇಶಕ್ಕೆ 2 ಸಾವಿರ ಕೋಟಿ ರೂ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚಿತ್ರ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ನಾಯಕನೋರ್ವನನ್ನು ಬಂಧಿಸಲಾಗಿದೆ.
ಡ್ರಗ್ಸ್ ಅಕ್ರಮಸಾಗಣೆ ಆರೋಪಿ ಬಂಧನ
ಡ್ರಗ್ಸ್ ಅಕ್ರಮಸಾಗಣೆ ಆರೋಪಿ ಬಂಧನ

ಚೆನ್ನೈ: ವಿದೇಶಕ್ಕೆ 2 ಸಾವಿರ ಕೋಟಿ ರೂ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚಿತ್ರ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ನಾಯಕನೋರ್ವನನ್ನು ಬಂಧಿಸಲಾಗಿದೆ.

ತಮಿಳುನಾಡಿನಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಪಕ್ಷದಲ್ಲಿ ಒಮ್ಮೆ ಸಕ್ರಿಯನಾಗಿದ್ದು ಬಳಿಕ ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಆಗಿ ಬೆಳೆದ ಖತರ್ನಾಕ್ ವ್ಯಕ್ತಿಯೋರ್ವನನ್ನು ಮಾದಕ ದ್ರವ್ಯ ನಿಯಂತ್ರಣ ದಳ( ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(NCB)ಕಡೆಗೂ ಬಂಧಿಸಿದೆ.

ಡ್ರಗ್ಸ್ ಅಕ್ರಮಸಾಗಣೆ ಆರೋಪಿ ಬಂಧನ
ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ, 57,000 ರೂ. ಮೌಲ್ಯದ ಡ್ರಗ್ಸ್ ವಶ

ಮೂಲಗಳ ಪ್ರಕಾರ ಭಾರತ ಮಾತ್ರವಲ್ಲದೇ ನ್ಯೂಜಿಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ಡ್ರಗ್‌ ಡೀಲಿಂಗ್ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಈ ವ್ಯವಹಾರದಲ್ಲಿ ಕೋಟ್ಯಾಂತರ ಮೊತ್ತದ ಹಣವನ್ನು ಸಂಗ್ರಹಿಸಿ ಇದೇ ಅಕ್ರಮ ಹಣವನ್ನೇ ಸಿನಿಮಾ, ಕಟ್ಟಡ ನಿರ್ಮಾಣ ಕಾರ್ಯ, ಆಸ್ಪತ್ರೆ ಮುಂತಾದ ಉದ್ಯಮಗಳಲ್ಲಿ ತೊಡಗಿಸಿದ್ದ ಎಂದು ಹೇಳಲಾಗಿದೆ.

ಬಂಧಿತನನ್ನು ತಮಿಳುನಾಡಿನ ಚಿತ್ರ ನಿರ್ಮಾಪಕ ಜಾಫರ್ ಸಾಧಿಕ್ ಎಂದು ಗುರುತಿಸಲಾಗಿದ್ದು, ಸಿನಿಮಾ ನಿರ್ಮಾಪಕನೂ ಆಗಿರುವ ಈತ ದಕ್ಷಿಣ ಭಾರತದ ಹಲವು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ.

ಈ ಬಗ್ಗೆ ದೆಹಲಿಯಲ್ಲಿ ಮಾದಕ ದ್ರವ್ಯ ನಿಯಂತ್ರಣ ದಳ ಎನ್‌ಸಿಬಿಯ ಉಪ ಮಹಾನಿರ್ದೇಶಕ ಜ್ಞಾನೇಶ್ವರ್‌ ಸಿಂಗ್, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, 'ಜಾಫರ್ ಸಾಧಿಕ್ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದ. ಇವನ ಈ ಅಕ್ರಮ ವ್ಯವಹಾರವೂ ಭಾರತದಿಂದ ನ್ಯೂಜಿಲ್ಯಾಂಡ್ವರೆಗೂ, ಆಸ್ಟ್ರೇಲಿಯಾ ಮಲೇಷ್ಯಾದವರೆಗೂ ಹಬ್ಬಿತ್ತು.

ಡ್ರಗ್ ದಂಧೆಯಲ್ಲಿ ಕೋಟ್ಯಾಂತರ ವ್ಯವಹಾರ ನಡೆಸಿರುವ ಈತ ಇದರಿಂದ ಗಳಿಸಿದ ಹಣವನ್ನು ಸಿನಿಮಾ, ನಿರ್ಮಾಣ ಕಾಮಗಾರಿ, ಆಸ್ಪತ್ರೆ ಮುಂತಾದ ವ್ಯವಹಾರದಲ್ಲಿ ತೊಡಗಿಸಿ ಅದನ್ನೇ ತನ್ನ ಪ್ರಮುಖ ವ್ಯವಹಾರವೆಂಬಂತೆ ತೋರಿಸಿ ಈ ಡ್ರಗ್ ವ್ಯವಹಾರವನ್ನು ಮರೆ ಮಾಚಿದ್ದ. ನಿರ್ದಿಷ್ಠ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಎನ್‌ಬಿಸಿ ಯಶಸ್ವಿಯಾಗಿದೆ ಎಂದು ಆವರು ಮಾಹಿತಿ ನೀಡಿದ್ದಾರೆ.

ತಮಿಳು ಚಿತ್ರ ನಿರ್ಮಿಸಿದ್ದ ಸಾದಿಕ್

ಈತ ತಮಿಳು ಮೂಲದ ಸಿನಿಮಾ ನಿರ್ಮಾಪಕನಾಗಿದ್ದು, ಜೆಎಸ್ಎಂ ಸಿನಿಮಾ ಬ್ಯಾನರ್‌ನಡಿ ಈತ ಮಂಗೈ ಎಂಬ ತಮಿಳು ಸಿನಿಮಾವನ್ನು ನಿರ್ಮಾಣ ಮಾಡಿದ್ದ ಎಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಿಂದ ಈತ ಡ್ರಗ್ ವ್ಯವಹಾರ ನಡೆಸುತ್ತಿದ್ದು, ಈತ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನ ಹಲವು ವಿಳಾಸಗಳಿಗೆ 3 ಸಾವಿರ ಕಿಲೋಗ್ರಾಂ ಸೂಡೊಫೆಡ್ರಿನ್ ಎಂಬ ಡ್ರಗ್‌ನ್ನು ಪೂರೈಕೆ ಮಾಡಿದ್ದ. ಎಫ್‌ಬಿಐ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನ ತನಿಖಾ ಸಂಸ್ಥೆಗಳ ಸಹಕಾರ ಪಡೆದು ಭಾರತದ ಮಾದಕ ದ್ರವ್ಯ ನಿಯಂತ್ರಣ ದಳ ಈತನನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.

ಡ್ರಗ್ಸ್ ಅಕ್ರಮಸಾಗಣೆ ಆರೋಪಿ ಬಂಧನ
ಯುವಕರ ಡ್ರಗ್ಸ್ ವ್ಯಸನದ ವಿರುದ್ಧ ಹೋರಾಡಲು ಸದೃಢ ಕುಟುಂಬಗಳ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ಡಿಎಂಕೆ ಜೊತೆ ಸಂಬಂಧ, ಪಕ್ಷದಿಂದಲೇ ಉಚ್ಛಾಟನೆ

ಅಂತೆಯೇ ಸಾಧಿಕ್ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಜೊತೆಗೂ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಈತ ಡಿಎಂಕೆಯ ಅನಿವಾಸಿ ಭಾರತೀಯ ಘಟಕದ ಸಂಘಟಕನಾಗಿ ಕೆಲಸ ಮಾಡಿದ್ದ ಎಂದು ಹೇಳಲಾಗಿದ್ದು, ಈತನನ್ನು ಇತ್ತೀಚೆಗಷ್ಟೇ ಪಕ್ಷ ಉಚ್ಚಾಟನೆ ಮಾಡಿತ್ತು.

ಈ ಬಗ್ಗೆ ತಮಿಳುನಾಡು ಬಿಜೆಪಿ ಅಧಯಕ್ಷ ಅಣ್ಣಾಮಲೈ ಕೂಡ ಟ್ವಿಟ್‌ ಮಾಡಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೊತೆಗೆ ಈ ಆರೋಪಿ ಜಾಫರ್ ಸಾದಿಕ್ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com