NDA ಜೊತೆ ನಿತೀಶ್ ಮೈತ್ರಿ: ನ್ಯಾ.ರೋಹಿಣಿ ಸಮಿತಿ ವರದಿ ನಿರ್ಲಕ್ಷ್ಯ ಸಾಧ್ಯತೆ?

ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆಯೇ ದೇಶಾದ್ಯಂತ ರಾಜಕೀಯ ಸಮೀಕರಣಗಳು ಬದಲಾಗತೊಡಗಿವೆ.
ನಿವೃತ್ತ ನ್ಯಾ ರೋಹಿಣಿ
ನಿವೃತ್ತ ನ್ಯಾ ರೋಹಿಣಿTNIE

ನವದೆಹಲಿ: ಲೋಕಸಭಾ ಚುನಾವಣೆ ಎದುರಾಗುತ್ತಿದ್ದಂತೆಯೇ ದೇಶಾದ್ಯಂತ ರಾಜಕೀಯ ಸಮೀಕರಣಗಳು ಬದಲಾಗತೊಡಗಿವೆ. ಸಹಜವಾಗಿಯೇ ಇದು ಹಲವು ರೀತಿಗಳಲ್ಲಿ ತನ್ನದೇ ಆದ ಪರಿಣಾಮಗಳನ್ನು ಹೊಂದಿರಲಿದೆ. ಈ ಪೈಕಿ ಬಿಹಾರಕ್ಕೆ ಸಂಬಂಧಿಸಿದ ನ್ಯಾ. ರೋಹಿಣಿ ಸಮಿತಿ ವರದಿಯೂ ಸೇರಿದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ, ಎನ್ ಡಿಎ ಮೈತ್ರಿಕೂಟ ಸೇರಿದ್ದು, ನರೇಂದ್ರ ಮೋದಿ ಸರ್ಕಾರ ನ್ಯಾ.ರೋಹಿಣಿ ಸಮಿತಿ ವರದಿಯನ್ನು ನಿರ್ಲಕ್ಷ್ಯ ವಹಿಸಿರುವಂತೆ ತೋರುತ್ತಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಬಿಸಿಯ ಉಪ ಪಂಗಡಗಳಿಗೆ ಸಂಬಂಧಿಸಿದ ನ್ಯಾ.ರೋಹಿಣಿ ಸಮಿತಿ ವರದಿಯನ್ನು ಜಾರಿಗೆ ತರುತ್ತದೆ ಎಂದು ವಿಶ್ಲೇಷಿಸಲಾಗಿತ್ತು.

ಹಿಂದುಳಿದ ಜಾತಿಗಳ ಜನಸಂಖ್ಯೆಯನ್ನು 63% ಎಂದು ಸೂಚಿಸಿದ ಬಿಹಾರ ಜಾತಿಯ ದತ್ತಾಂಶವು ರಾಷ್ಟ್ರವ್ಯಾಪಿ ಜಾತಿ ಗಣತಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಮರುಪರಿಶೀಲನೆಗಾಗಿ ಪ್ರತಿಪಕ್ಷಗಳಿಂದ ಹೊಸ ಬೇಡಿಕೆಯನ್ನು ಹುಟ್ಟುಹಾಕಿತ್ತು.

ನಿವೃತ್ತ ನ್ಯಾ ರೋಹಿಣಿ
ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)

ಕೇಂದ್ರ ಸರ್ಕಾರ ರಾಷ್ಟ್ರೀಯ ಜಾತಿ ಗಣತಿಗೆ ಬದ್ಧವಾಗಿಲ್ಲದಿದ್ದರೂ, ರೋಹಿಣಿ ಸಮಿತಿಯ ವರದಿಯನ್ನು ಜಾರಿಗೊಳಿಸುವ ಮೂಲಕ ಮತ್ತು ಅವರಿಗೆ ಕೆಲವು ಪ್ರಯೋಜನಗಳನ್ನು ನೀಡುವ ಮೂಲಕ ಅತ್ಯಂತ ಹಿಂದುಳಿದ ವರ್ಗಗಳನ್ನು ಓಲೈಸಲು ಚಿಂತನೆ ನಡೆಸಿತ್ತು. ಆದರೆ, ಕಳೆದ ವರ್ಷ ಜುಲೈನಲ್ಲಿ ಸರಕಾರಕ್ಕೆ ಸಲ್ಲಿಸಿದ್ದ ರೋಹಿಣಿ ಸಮಿತಿ ವರದಿ ಇನ್ನೂ ಪ್ರಕಟವಾಗಿಲ್ಲ.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಕೇಂದ್ರ ಸೇವೆಗಳ ನೇಮಕಾತಿಯಲ್ಲಿ ಶೇ.50ರಷ್ಟು ಮೀಸಲಾತಿ ಸೌಲಭ್ಯಗಳನ್ನು ಶೇ.1ಕ್ಕಿಂತ ಕಡಿಮೆ ಪ್ರಬಲ ಹಿಂದುಳಿದ ಜಾತಿಗಳು ಮೂಲೆಗುಂಪು ಮಾಡಿದ್ದಾರೆ ಎಂದು ನ್ಯಾ. ರೋಹಿಣಿ ಸಮಿತಿ ವರದಿ ಬಹಿರಂಗಪಡಿಸಿದೆ. ಕೇಂದ್ರೀಯ ಒಬಿಸಿ ಪಟ್ಟಿಯಲ್ಲಿರುವ 2,600 ಸಮುದಾಯಗಳ ಪೈಕಿ 938 ಉಪಜಾತಿಗಳಿಗೆ ಮೀಸಲು ಸ್ಥಾನಗಳಲ್ಲಿ ಪ್ರಾತಿನಿಧ್ಯವಿಲ್ಲ. ಪ್ರಯೋಜನಗಳ ಸಮಾನ ವಿತರಣೆಗಾಗಿ, ಆಯೋಗವು ಒಬಿಸಿಗಳನ್ನು ಪ್ರತ್ಯೇಕ ಮೀಸಲಾತಿ ಶೇಕಡಾವಾರುಗಳೊಂದಿಗೆ ಉಪಗುಂಪುಗಳಾಗಿ ವಿಂಗಡಿಸಲು ಪ್ರಸ್ತಾಪಿಸಿದೆ.

ನಿವೃತ್ತ ನ್ಯಾ ರೋಹಿಣಿ
INDIA ಕೂಟಕ್ಕೆ ಬೇರೆ ಹೆಸರು ಕೊಡಿ ಎಂದಿದ್ದೆ; ಜಾತಿ ಗಣತಿ ಕ್ರೆಡಿಟ್ ಪಡೆಯಲು ರಾಹುಲ್ ಗಾಂಧಿ ನೋಡುತ್ತಿದ್ದಾರೆ: ನಿತೀಶ್ ಕುಮಾರ್

ಆದಾಗ್ಯೂ, ನಿತೀಶ್ ಕುಮಾರ್ ಎನ್‌ಡಿಎಗೆ ಮರುಪ್ರವೇಶ ಮಾಡುವುದರೊಂದಿಗೆ, ಬಿಜೆಪಿ ಪ್ರತಿಪಕ್ಷಗಳ ಜಾತಿ ಗಣತಿ ಸವಾಲನ್ನು ಶಮನಗೊಳಿಸುವ ವಿಶ್ವಾಸದಲ್ಲಿದೆ ಎಂದು ಮೂಲಗಳು ತಿಳಿಸಿವೆ. “ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿ (ಇಬಿಸಿ) ಮತಗಳ ಬಲವರ್ಧನೆಯು ಬಿಜೆಪಿಯ ಪ್ರಮುಖ ಚಿಂತೆಯಾಗಿತ್ತು. ಕುರ್ಮಿ ನಾಯಕ ನಿತೀಶ್ ಎನ್‌ಡಿಎಗೆ ಮರಳಿದ ಕಾರಣ, ಜಾತಿ ಗಣತಿಯ ರಾಜಕೀಯ ಪರಿಣಾಮಗಳ ಬಗ್ಗೆ ಪಕ್ಷದ ಚಿಂತೆ ದೂರವಾಗಿದೆ. ಹಾಗಾಗಿ ಸದ್ಯಕ್ಕೆ ರೋಹಿಣಿ ಸಮಿತಿ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ರೋಹಿಣಿ ಸಮಿತಿಯ ವರದಿಯು ಎಲ್ಲಾ ಒಬಿಸಿ ಗುಂಪುಗಳನ್ನು ಉಪ-ವರ್ಗೀಕರಿಸುವುದರಿಂದ ರಾಜಕೀಯ ಮರುಜೋಡಣೆಗೆ ಕಾರಣವಾಗುತ್ತದೆ ಎಂಬ ಅಂಶ ಕೇಂದ್ರ ಸರ್ಕಾರಕ್ಕೆ ತಿಳಿದಿದೆ, ”ಎಂದು ನಾಯಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com