ಮಾಲ್ಡೀವ್ಸ್‌ನಿಂದ ಭಾರತೀಯ ಯೋಧರ ಮೊದಲ ಬ್ಯಾಚ್ ದೇಶಕ್ಕೆ ಮರಳಿದೆ: ವಿದೇಶಾಂಗ ವ್ಯವಹಾರ ಸಚಿವಾಲಯ

ಮಾಲ್ಡೀವ್ಸ್‌ ಭಾರತೀಯ ಯೋಧರ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತೀಯ ಯೋಧರು
ಭಾರತೀಯ ಯೋಧರುPTI
Updated on

ನವದೆಹಲಿ: ಮಾಲ್ಡೀವ್ಸ್‌ ಭಾರತೀಯ ಯೋಧರ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಹಿಂದಿರುಗಿಸಲು ಮಾರ್ಚ್ 10ರ ಗಡುವು ನಿಗದಿಪಡಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, HLA ಅನ್ನು ನಿರ್ವಹಿಸುವ ಸಿಬ್ಬಂದಿಯ ಮೊದಲ ತಂಡವನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದೆ. ಮೊದಲ ಬ್ಯಾಚ್‌ನಡಿ ಬದಲಾಯಿಸಬೇಕಿದ್ದವರನ್ನು ಬದಲಾಯಿಸುವ ಕಾರ್ಯ ಪೂರ್ಣಗೊಂಡಿದೆ.

ಭಾರತೀಯ ಯೋಧರು
ಇನ್ಮುಂದೆ ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯೇ ಇರಲ್ಲ: ಚೀನಾದೊಂದಿಗಿನ ಸೇನಾ ಒಪ್ಪಂದದ ಬಳಿಕ ಅಧ್ಯಕ್ಷ ಮುಯಿಝು ಘೋಷಣೆ

ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ವಿಷಯದ ಕುರಿತು ರಚಿಸಲಾದ ಉನ್ನತ ಮಟ್ಟದ ಕೋರ್ ಗ್ರೂಪ್‌ನ ಎರಡನೇ ಸಭೆಯ ನಂತರ, ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯವು ಭಾರತವು ತನ್ನ ಎಲ್ಲಾ ಮಿಲಿಟರಿ ಸಿಬ್ಬಂದಿಯನ್ನು ಮೇ 10ರೊಳಗೆ ಎರಡು ಹಂತಗಳಲ್ಲಿ ಬದಲಾಯಿಸಲಿದೆ ಎಂದು ಹೇಳಿತ್ತು.

ಕೋರ್ ಗ್ರೂಪ್‌ನ ಎರಡನೇ ಸಭೆ ಫೆಬ್ರವರಿ 2 ರಂದು ದೆಹಲಿಯಲ್ಲಿ ನಡೆಯಿತು. ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ COP-28 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ನಡುವಿನ ಸಭೆಯ ನಂತರ ಕೋರ್ ಗ್ರೂಪ್ ರಚಿಸುವ ನಿರ್ಧಾರವನ್ನು ಉಭಯ ದೇಶಗಳು ತೆಗೆದುಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com