ಭಾರತೀಯರ ಸರಾಸರಿ ಜೀವಿತಾವಧಿ, ತಲಾದಾಯ ಏರಿಕೆ: 193 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿ ಭಾರತ!

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, ಭಾರತೀಯರ ಸರಾಸರಿ ಜೀವಿತಾವಧಿ ಹಾಗೂ ತಲಾದಾಯ ಏರಿಕೆಯ ಪ್ರಮಾಣ ಅದ್ಭುತವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ (ಹೆಚ್'ಡಿಐ) ವರದಿ ಶ್ಲಾಘಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, ಭಾರತೀಯರ ಸರಾಸರಿ ಜೀವಿತಾವಧಿ ಹಾಗೂ ತಲಾದಾಯ ಏರಿಕೆಯ ಪ್ರಮಾಣ ಅದ್ಭುತವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ (ಹೆಚ್'ಡಿಐ) ವರದಿ ಶ್ಲಾಘಿಸಿದೆ.

2023ನೇ ಸಾಲಿನ ಹೆಚ್'ಡಿಐ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ 2022ರಲ್ಲಿ ಉಂಟಾದ ಭಾರತದ ಪ್ರಗತಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ. 2022ರಲ್ಲಿ ದೇಶದ ಮೌಲ್ಯವು 0.644ಕ್ಕೆ ಏರಿದೆ. ಮಾನವ ಅಭಿವೃದ್ಧಿ ವರದಿಯ ಪ್ರಕಾರ 193 ದೇಶಗಳ ಪೈಕಿ ಭಾರತವು 134ನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.

ಎಚ್‌ಡಿಆರ್‌ನ ʼಬ್ರೇಕಿಂಗ್‌ ದಿ ಗ್ರಿಡ್‌ಲಾಕ್‌: ರಿಇಮ್ಯಾಜಿನಿಂಗ್‌ ಕಾರ್ಪೋರೇಷನ್‌ ಇನ್‌ ಪೊಲರೈಸಡ್‌ ವರ್ಡ್‌ʼ (Breaking the Gridlock: Reimagining Cooperation in a Polarized World) ಎಂಬ ಶೀರ್ಷಿಕೆಯ ವರದಿಯಲ್ಲಿ ಭಾರತದ ಈ ಗಮನಾರ್ಹ ಬೆಳವಣಿಗೆಯನ್ನು ಉಲ್ಲೇಖಿಸಲಾಗಿದೆ. ಈ ವರದಿಯು 2021-2022ರ ಎಚ್‌ಡಿಆರ್‌ ಸಂಶೋಧನೆಗಳನ್ನು ಆಧರಿಸಿದೆ.

2021ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 62.7 ವರ್ಷವಿತ್ತು. ಅದು ಒಂದೇ ವರ್ಷದಲ್ಲಿ 67.7ಕ್ಕೆ ಏರಿಕೆಯಾಗಿದೆ. ಹಾಗೆಯೇ ಈ ಅವಧಿಯಲ್ಲಿ ಭಾರತೀಯರ ತಲಾದಾಯ ವರ್ಷಕ್ಕೆ 5.75ಲಕ್ಷ ರೂ.ಗೆ ಏರಿಕೆಯಾಗಿದೆ. ಏರಿಕೆ ಪ್ರಮಾಣ ಶೇ.6.3ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂಗ್ರಹ ಚಿತ್ರ
ದೇಶದ ತಲಾದಾಯ ರು.7 ಸಾವಿರ

ಒಟ್ಟಾರೆ ಹೆಚ್'ಡಿಐ ಸೂಚ್ಯಂಕದಲ್ಲಿ ಜಗತ್ತಿನ 193 ದೇಶಗಳ ಪೈಕಿ ಭಾರತ 134ನೇ ಸ್ಥಾನದಲ್ಲಿದೆ. ಇದರ ಪ್ರಕಾರ ಭಾರತದ ಮಾನವಾಭಿವೃದ್ಧಿ ಸೂಚ್ಯಂಕವು ಮಧ್ಯಮ ಸ್ತರದಲ್ಲಿದೆ. ಅಂಕಿ ಅಂಶದ ದೃಷ್ಟಿಯಲ್ಲಿ ಭಾರತದ ಹೆಚ್'ಡಿಐ ಸೂಚ್ಯಂಕ 0.644ರಷ್ಟಿದೆ. 2021ರಿಂದ 2022ರ ಅವಧಿಯಲ್ಲಿ ಭಾರತದ ಮಾನವಾಭಿವೃದ್ಧಿ ಸೂಚ್ಯಂಕ ಅದ್ಭುತವಾಗ ಪ್ರಗತಿ ಸಾಧಿಸಿದೆ. 1990ರಿಂದ ಈವರೆಗೆ ಭಾರತೀಯರ ಜೀವಿತಾವಧಿ 9.1 ವರ್ಷದಷ್ಟು ಹೆಚ್ಚಾಗಿದೆ ಎಂದು ವರದಿ ಪ್ರಶಂಸಿಸಿದೆ.

ಲಿಂಗ ಅಸಮಾನತೆ ಸೂಚ್ಯಂಕ ಅಥವಾ ಜಿಐಐ ಅನ್ನು 0.437ಕ್ಕೆ ಏರಿಸುವ ಮೂಲಕ ಭಾರತವು ʼಲಿಂಗ ಅಸಮಾನತೆಯನ್ನು ಕಡಿಮೆ ಮಾಡುವ ಪ್ರಕ್ರಿಯೆʼಯಲ್ಲಿ ಪ್ರಗತಿಯನ್ನು ದಾಖಲಿಸಿದೆ. ಇದು ಜಾಗತಿಕ ಸರಾಸರಿಗಿಂತ ಉತ್ತಮವಾಗಿದೆ.

ಜಿಐಐ ಪಟ್ಟಿಯಲ್ಲಿ ಭಾರತವು 166 ರಾಷ್ಟ್ರಗಳ ಪೈಕಿ 108ನೇ ಸ್ಥಾನದಲ್ಲಿದೆ. ಆದಾಗ್ಯೂ ಕಾರ್ಮಿಕ ಶಕ್ತಿಯ ಭಾಗವಹಿಸುವಿಕೆಯ ದರದಲ್ಲಿ ಭಾರತವು ಅತಿದೊಡ್ಡ ಲಿಂಗ ಅಸಮಾನತೆ ಎದುರಿಸುತ್ತಿದೆ. ಮಹಿಳೆಯರು ಶೇ.(28.3) ಮತ್ತು ಪುರುಷರ (ಶೇ.76.1) ನಡುವೆ ಶೇ.47.8 ಪಾಯಿಂಟ್‌ಗಳ ವ್ಯತ್ಯಾಸವಿದೆ.

ಈ ಮಧ್ಯೆ ಜಾಗತಿಕ ಎಚ್‌ಡಿಐ ಮೌಲ್ಯಗಳು ಸತತ 2ನೇ ವರ್ಷ ಕುಸಿದಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಿರಂತರ ಪರಿಣಾಮದಿಂದ ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ಅಂತರ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಸಂಗ್ರಹ ಚಿತ್ರ
26/11 ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಪಾಕ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ: ವಿಶ್ವಸಂಸ್ಥೆ

ಕೋವಿಡ್‌ನ ಮೊದಲು ಸುಸ್ಥಿರ ಅಭಿವೃದ್ಧಿ ಗುರಿಗಳ (Sustainable Development Goals) ಗಡುವಿನೊಂದಿಗೆ 2030ರ ವೇಳೆಗೆ ಜಗತ್ತು ಸರಾಸರಿ ಅತಿ ಹೆಚ್ಚಿನ ಎಚ್‌ಡಿಐ ತಲುಪುವ ಹಾದಿಯಲ್ಲಿತ್ತು. ಆದರೆ ಇದೀಗ ಲೆಕ್ಕಾಚಾರ ತಲೆ ಕೆಳಗಾಗಿದೆ. ಪ್ರತಿಯೊಂದು ಪ್ರದೇಶವು 2019ರ ಹಿಂದಿನ ಅಂದಾಜಿಗಿಂತ ಕೆಳಗಿದೆ ಎಂದು ವರದಿ ಹೇಳಿದೆ.

ಕೋವಿಡ್ ಕಾರಣದಿಂದಾಗಿ ಜಗತ್ತು ಈ ವೇಳೆಗೆ ನಿರೀಕ್ಷಿಸಿದ ಮಾನವ ಅಭಿವೃದ್ಧಿ ಮಟ್ಟವನ್ನು ತಲುಪಿಲ್ಲ. ಮಾತ್ರವಲ್ಲ ಅಸಮಾನತೆ ಹೆಚ್ಚುತ್ತಿದೆ ಹಾಗೂ ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣವನ್ನೂ ಪ್ರಚೋದಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com