ಬೇಸಿಗೆ: ಭಾರತದ ಪ್ರಮುಖ ಜಲಾಶಯಗಳಲ್ಲಿ ಇರುವುದು ಶೇ.38 ರಷ್ಟು ನೀರು ಮಾತ್ರ!

ಬೇಸಿಗೆ ಈಗಷ್ಟೇ ಆರಂಭವಾಗಿದ್ದು, ಭಾರತದ ಹಲವೆಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ಭಾರತದ ಪ್ರಮುಖ ಜಲಾಶಯಗಳ ಬಗ್ಗೆ ಪ್ರಕಟಗೊಂಡಿರುವ ಅಂಕಿ- ಅಂಶಗಳು ಆತಂಕ ಮೂಡಿಸುತ್ತಿದೆ.
ಹಾರಂಗಿ ಜಲಾಶಯ
ಹಾರಂಗಿ ಜಲಾಶಯonline desk
Updated on

ನವದೆಹಲಿ: ಬೇಸಿಗೆ ಈಗಷ್ಟೇ ಆರಂಭವಾಗಿದ್ದು, ಭಾರತದ ಹಲವೆಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ಭಾರತದ ಪ್ರಮುಖ ಜಲಾಶಯಗಳ ಬಗ್ಗೆ ಪ್ರಕಟಗೊಂಡಿರುವ ಅಂಕಿ- ಅಂಶಗಳು ಆತಂಕ ಮೂಡಿಸುತ್ತಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಭಾರತದ 150 ಪ್ರಾಥಮಿಕ ಜಲಾಶಯಗಳಲ್ಲಿ ಸಾಮರ್ಥ್ಯಕ್ಕಿಂತ ಶೇ.38 ರಷ್ಟು ನೀರು ಮಾತ್ರ ಇದೆ ಎಂಬುದನ್ನು ಅಂಕಿ-ಅಂಶವೊಂದು ಬಹಿರಂಗಗೊಳಿಸಿದೆ. ಬೆಂಗಳೂರಿನಲ್ಲಿ ಪ್ರತಿ ದಿನವೊಂದಕ್ಕೆ 2,600 ಎಂಎಲ್ ಡಿ ನೀರಿಗೆ ಬೇಡಿಕೆ ಇದ್ದು, 500 ಎಂಎಲ್ ಡಿ ನೀರಿನ ಕೊರತೆ ಎದುರಾಗಿದೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಕೆ ಮಾಡಿದಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 14,000 ಬೋರ್ ವೆಲ್ ಗಳಿದ್ದು 6,900 ಬೊರ್ ವೆಲ್ ಗಳು ಬತ್ತಿಹೋಗಿವೆ. ನೀರಿನ ಮೂಲಗಳನ್ನು ಆಕ್ರಮಿಸಿಕೊಳ್ಳಲಾಗಿದೆ ಇಲ್ಲವೇ ಒಣಗಿ ಹೋಗಿವೆ.

ಹಾರಂಗಿ ಜಲಾಶಯ
ಬೆಂಗಳೂರಿಗೆ 500 ಎಂಎಲ್ ಡಿ ನೀರಿನ ಕೊರತೆ: ಸಿಎಂ ಸಿದ್ದರಾಮಯ್ಯ

ನಗರಕ್ಕೆ ದಿನವೊಂದಕ್ಕೆ 2,600 ಎಂಎಲ್ ಡಿ ನೀರಿನ ಅವಶ್ಯಕತೆ ಇದ್ದು, ಈ ಪೈಕಿ 1,470 ಎಂಎಲ್ ಡಿಯಷ್ಟು ನೀರಿನ ಬೇಡಿಕೆ ಕಾವೇರಿ ನೀರಿನಿಂದ ಪೂರೈಕೆಯಾಗುತ್ತಿದ್ದರೆ, 650 ಎಂಎಲ್ ಡಿಯಷ್ಟು ನೀರು ಬೋರ್ ವೆಲ್ ಗಳಿಂದ ಪೂರೈಕೆಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಹಿಮಾಚಲ ಪ್ರದೇಶ, ಪಂಜಾಬ್, ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ಛತ್ತೀಸ್‌ಗಢ, ಆಂಧ್ರ ಪ್ರದೇಶ ಮತ್ತು ತೆಲಂಗಾಣ (ಎರಡೂ ರಾಜ್ಯಗಳಲ್ಲಿ ಎರಡು ಸಂಯೋಜಿತ ಯೋಜನೆಗಳು), ಮತ್ತು ತಮಿಳುನಾಡು ಸೇರಿದಂತೆ ಹಲವಾರು ಇತರ ರಾಜ್ಯಗಳು ಕಡಿಮೆ ಸಂಗ್ರಹ ಮಟ್ಟವನ್ನು ವರದಿ ಮಾಡಿದೆ.

ಈ 150 ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯ 178784 BCM ಯಷ್ಟಿದ್ದರೆ, ಇದು ಅಧಿಕೃತ ಮಾಹಿತಿಯ ಪ್ರಕಾರ 257.812 ಶತಕೋಟಿ ಘನ ಮೀಟರ್ (ಬಿಸಿಎಂ) ಎಂದು ಅಂದಾಜಿಸಲಾದ ರಾಷ್ಟ್ರದ ಒಟ್ಟು ಲೈವ್ ಶೇಖರಣಾ ಸಾಮರ್ಥ್ಯದ ಸುಮಾರು 69.35 ಪ್ರತಿಶತವನ್ನು ಹೊಂದಿದೆ.

ಹಾರಂಗಿ ಜಲಾಶಯ
ಬಿರು ಬೇಸಗೆಯ ಆರ್ಭಟಕ್ಕೆ ಮಧ್ಯ ಕರ್ನಾಟಕ ತತ್ತರ: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಅಭಾವ!

ಜಲಾಶಯಗಳ ಶೇಖರಣಾ ಬುಲೆಟಿನ್ ಪ್ರಕಾರ, ಈ ಜಲಾಶಯಗಳಲ್ಲಿ ಲಭ್ಯವಿರುವ ಲೈವ್ ಸ್ಟೋರೇಜ್ 67.591 BCM ಆಗಿದ್ದು, ಇದು ಅವುಗಳ ಒಟ್ಟು ಲೈವ್ ಶೇಖರಣಾ ಸಾಮರ್ಥ್ಯದ 38 ಪ್ರತಿಶತದಷ್ಟಿದೆ. ಆದಾಗ್ಯೂ, ಕಳೆದ ವರ್ಷದ ಇದೇ ಅವಧಿಯಲ್ಲಿ, ಲಭ್ಯವಿರುವ ಲೈವ್ ಸ್ಟೋರೇಜ್ 80.557 BCM ಆಗಿತ್ತು, ಕಳೆದ ದಶಕದಲ್ಲಿ ಸರಾಸರಿ 72.396 BCM ಯಷ್ಟಿತ್ತು ಎಂದು ವರದಿ ಮೂಲಕ ತಿಳಿದುಬಂದಿದೆ. "ದೇಶದ ಒಟ್ಟಾರೆ ಶೇಖರಣೆ ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆಯಾಗಿದೆ ಮತ್ತು ಇದೇ ಅವಧಿಗೆ ಕಳೆದ ಹತ್ತು ವರ್ಷಗಳಲ್ಲಿ ಸರಾಸರಿ ಸಂಗ್ರಹಣೆಗಿಂತ ಕಡಿಮೆಯಾಗಿದೆ" ಎಂದು ಬುಲೆಟಿನ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com