ಉತ್ತರ ಪ್ರದೇಶ: ಕೈಕಾಲು ಕಟ್ಟಿ ಪತಿಯ ಮರ್ಮಾಂಗಕ್ಕೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ, ವಿಡಿಯೋ ವೈರಲ್

ಪ್ರೇಮ ವಿವಾಹವಾದ ಬಳಿಕ ಪತಿಗೆ ಚಿತ್ರಹಿಂಸೆ ನೀಡಿದ ಪ್ರಕರಣ ಬಿಜ್ನೋರ್ ನಲ್ಲಿ ಬೆಳಕಿಗೆ ಬಂದಿದೆ. ಪತಿ ಕೈಕಾಲು ಕಟ್ಟಿ ಖಾಸಗಿ ಭಾಗಕ್ಕೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪತಿಗೆ ಚಿತ್ರಹಿಂಸೆ ನೀಡಿದ ಪತ್ನಿ ಬಂಧನ
ಪತಿಗೆ ಚಿತ್ರಹಿಂಸೆ ನೀಡಿದ ಪತ್ನಿ ಬಂಧನ
Updated on

ಲಖನೌ: ಪ್ರೇಮ ವಿವಾಹವಾದ ಬಳಿಕ ಪತಿಗೆ ಚಿತ್ರಹಿಂಸೆ ನೀಡಿದ ಪ್ರಕರಣ ಬಿಜ್ನೋರ್ ನಲ್ಲಿ ಬೆಳಕಿಗೆ ಬಂದಿದೆ. ಪತಿ ಕೈಕಾಲು ಕಟ್ಟಿ ಖಾಸಗಿ ಭಾಗಕ್ಕೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಈ ಘಟನೆ ನಡೆದಿದ್ದು ಸಿಯೋಹರಾ ಎಂಬಲ್ಲಿ. ಆಕೆ ಪತಿಯ ಕೈಕಾಲು ಕಟ್ಟಿ, ಥಳಿಸಿ, ಕತ್ತು ಹಿಸುಕಿ, ಸಿಗರೇಟಿನಿಂದ ಸುಟ್ಟು ಹಾಕಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಸಿಯೋಹರಾ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಮನ್ನನ್ ಝೈದಿ ತನ್ನ ಪತ್ನಿ ಮೆಹರ್ಜಹಾನ್ ತನಗೆ ಅಮಲು ಪದಾರ್ಥ ನೀಡಿ ಚಿತ್ರಹಿಂಸೆ ನೀಡುತ್ತಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದನು. ನಾನು ಪ್ರಜ್ಞೆ ತಪ್ಪಿದಾಗ, ಅವಳು ನನ್ನ ಕೈ ಮತ್ತು ಕಾಲುಗಳನ್ನು ಕಟ್ಟಿ ಹೊಡೆಯುತ್ತಾಳೆ. ಅಲ್ಲದೆ ನಿರಂತರವಾಗಿ ಹಿಂಸಿಸುತ್ತಲೇ ಇರುತ್ತಾಳೆ. ಕೆಲ ಸಮಯದ ಹಿಂದೆ ಪತಿಗೆ ಮಾದಕ ಮಾತ್ರೆಗಳನ್ನು ನೀಡಿ ನಂತರ ಸಿಗರೇಟ್‌ನಿಂದ ಆಕೆಯ ದೇಹವನ್ನು ಸುಟ್ಟು ಹಾಕಿದ್ದ. ನಂತರ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಳು.

ಪತಿಗೆ ಚಿತ್ರಹಿಂಸೆ ನೀಡಿದ ಪತ್ನಿ ಬಂಧನ
ಪುಣೆ: ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಸಾವು!

ಈ ವೇಳೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವಿಡಿಯೋವನ್ನು ಪೊಲೀಸರಿಗೆ ನೀಡಿದ್ದಾನೆ. ಈ ವಿಡಿಯೋದಲ್ಲಿ ಪತ್ನಿ ತನ್ನ ಪತಿಯನ್ನು ವೇಲ್ ನಿಂದ ಕೈಕಾಲು ಕಟ್ಟಿ ಥಳಿಸಿದ್ದಾಳೆ. ಆತನ ಎದೆಯ ಮೇಲೆ ಕುಳಿತು ಕತ್ತು ಹಿಸುಕಲು ಯತ್ನಿಸುತ್ತಿರುವ ದೃಶ್ಯವೂ ಇದೆ. ಈ ವಿಡಿಯೋದಲ್ಲಿ ಆಕೆ ಆತನನ್ನು ಥಳಿಸುತ್ತಿರುವುದನ್ನು ಹಾಗೂ ಆತನ ದೇಹವನ್ನು ಸಿಗರೇಟಿನಿಂದ ಸುಟ್ಟು ಹಾಕುತ್ತಿರುವುದನ್ನು ಸಹ ಕಾಣಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com