ಉತ್ತರ ಪ್ರದೇಶದಲ್ಲಿ ಮತದಾನ ಮಾಡಲು ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತದಾನ ಮಾಡಲು ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ಲೋಕಸಭೆ ಚುನಾವಣೆ 4ನೇ ಹಂತ: 10 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಮತದಾನ ಆರಂಭ

ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ತನ್ನ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.
Published on

ನವದೆಹಲಿ: ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ತನ್ನ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.

82 ದಿನಗಳ ಸುದೀರ್ಘ, ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 96 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ನಡೆದ ಮೊದಲ ಮೂರು ಹಂತಗಳಲ್ಲಿ 283 ಲೋಕಸಭಾ ಕ್ಷೇತ್ರಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೊದಲ ಮೂರು ಹಂತಗಳಲ್ಲಿ ಕ್ರಮವಾಗಿ ಶೇ 66.1, ಶೇ 66.7 ಮತ್ತು ಶೇ 61 ರಷ್ಟು ಮತದಾನ ದಾಖಲಾಗಿದೆ.

ನಾಲ್ಕನೇ ಹಂತದ ಮತದಾನದಲ್ಲಿ ಆಂಧ್ರ ಪ್ರದೇಶ ವಿಧಾನಸಭೆಗೆ (175 ಸ್ಥಾನಗಳು) ಮತ್ತು ಲೋಕಸಭೆಗೆ (25 ಸ್ಥಾನಗಳು) ಏಕಕಾಲದಲ್ಲಿ ಚುನಾವಣೆಗೆ ಸಾಕ್ಷಿಯಾಗಲಿದೆ. ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ನಾಲ್ಕನೇ ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಟಿಎಂಸಿಯ ಮಹುವಾ ಮೊಯಿತ್ರಾ, ಶತ್ರುಘ್ನ ಸಿನ್ಹಾ ಮತ್ತು ಯೂಸುಫ್ ಪಠಾಣ್ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಮತ್ತು ವೈಎಸ್ ಶರ್ಮಿಳಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿಯ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಅರ್ಜುನ್ ಮುಂಡಾ, ಅಜಯ್ ಮಿಶ್ರಾ ತೇನಿ, ಗಿರಿರಾಜ್ ಸಿಂಗ್ ಮತ್ತು ನಿತ್ಯಾನಂದ್ ರೈ ಸೇರಿದಂತೆ ಪಕ್ಷದ ನಾಯಕರಾದ ಸಾಕ್ಷಿ ಮಹಾರಾಜ್, ದಿಲೀಪ್ ಘೋಷ್, ಪಂಕಜಾ ಮುಂಡೆ, ಬಂಡಿ ಸಂಜಯ್, ಮಾಧವಿ ಲತಾ ಮತ್ತು ದಗ್ಗುಬಾಟಿ ಪುರಂದೇಶ್ವರಿ ಸೇರಿದಂತೆ ದೊಡ್ಡ ಹೆಸರುಗಳಿವೆ.

ಶ್ರೀನಗರ

ಆರ್ಟಿಕಲ್ 370ರ ರದ್ದತಿ ನಂತರದ ಮೊದಲ ಸಂಸತ್ ಚುನಾವಣೆಗೆ ಸಾಕ್ಷಿಯಾಗಿರುವ ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಅಘಾ ರುಹುಲ್ಲಾ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಾಯಕ ವಹೀದ್ ಪಾರಾ ಮತ್ತು ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಾರ್ಟಿಯ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ ಮೊಹಮ್ಮದ್ ಅಶ್ರಫ್ ಮಿರ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಜೂನ್ 4 ರಂದು ದೇಶದಾದ್ಯಂತ ಮತ ಎಣಿಕೆ ನಡೆಯಲಿದೆ.

ಮತ ಚಲಾಯಿಸುವಂತೆ ಪ್ರಧಾನಿ ಮನವಿ

ಲೋಕಸಭೆ ಚುನಾವಣೆಯ 4 ನೇ ಹಂತದಲ್ಲಿ ಇಂದು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಮತ್ತು ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತದಾನ ಪ್ರಮಾಣದಲ್ಲಿ ಏರಿಕೆಗೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ನಾವೆಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಆಂಧ್ರಪ್ರದೇಶ ಮತ್ತು ಒಡಿಶಾದ ಜನರಿಗೆ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಿಗೆ ಮನವಿ ಮಾಡಿದರು. ಮತದಾನ ನಮ್ಮ ಪ್ರಜಾಪ್ರಭುತ್ವದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿ ಎಂದಿದ್ದಾರೆ.

ನಾಲ್ಕನೇ ಹಂತದ ಮತದಾನ

ಆಂಧ್ರ ಪ್ರದೇಶ: ಎಲ್ಲ 25 ಸ್ಥಾನಗಳು

ತೆಲಂಗಾಣ: ಎಲ್ಲ 17 ಸ್ಥಾನಗಳು

ಜಾರ್ಖಂಡ್: 14 ಕ್ಷೇತ್ರಗಳ ಪೈಕಿ 4 ಸ್ಥಾನಗಳು

ಒಡಿಶಾ: 21 ಕ್ಷೇತ್ರಗಳಳ್ಲಿ 4 ಸ್ಥಾನಗಳು

ಉತ್ತರ ಪ್ರದೇಶ: 80 ರಲ್ಲಿ 13 ಸ್ಥಾನಗಳು

ಮಧ್ಯಪ್ರದೇಶ: 29 ರಲ್ಲಿ 8 ಸ್ಥಾನಗಳು

ಬಿಹಾರ: 40 ರಲ್ಲಿ 5 ಸ್ಥಾನಗಳು

ಮಹಾರಾಷ್ಟ್ರ: 48 ರಲ್ಲಿ 11 ಸ್ಥಾನಗಳು

ಪಶ್ಚಿಮ ಬಂಗಾಳ: 42 ಸ್ಥಾನಗಳಲ್ಲಿ 8 ಕ್ಷೇತ್ರಗಳು

ಜಮ್ಮು ಮತ್ತು ಕಾಶ್ಮೀರ: 5 ರಲ್ಲಿ 1 ಸ್ಥಾನ

ಆಂಧ್ರ ಪ್ರದೇಶ: ಎಲ್ಲ 175 ವಿಧಾನಸಭಾ ಸ್ಥಾನಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com