ಮಧ್ಯ ಪ್ರದೇಶದಲ್ಲೂ ಬುಲ್ಡೋಜರ್ ಆರ್ಭಟ: ಬುಡಕಟ್ಟು ವಿದ್ಯಾರ್ಥಿನಿಯರನ್ನು ರೇಪ್ ಮಾಡಿದ್ದ 3 ಆರೋಪಿಗಳ ಮನೆ ಧ್ವಂಸ, ವಿಡಿಯೋ

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸ್ಕಾಲರ್‌ಶಿಪ್ ಹೆಸರಿನಲ್ಲಿ 7 ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಮಧ್ಯ ಪ್ರದೇಶದಲ್ಲೂ ಬುಲ್ಡೋಜರ್ ಆರ್ಭಟ: ಬುಡಕಟ್ಟು ವಿದ್ಯಾರ್ಥಿನಿಯರನ್ನು ರೇಪ್ ಮಾಡಿದ್ದ 3 ಆರೋಪಿಗಳ ಮನೆ ಧ್ವಂಸ, ವಿಡಿಯೋ
Updated on

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸ್ಕಾಲರ್‌ಶಿಪ್ ಹೆಸರಿನಲ್ಲಿ 7 ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಪ್ರಕರಣ ಸಂಬಂಧ ಕ್ರಮ ಕೈಗೊಂಡ ಪೊಲೀಸರು ಹಾಗೂ ಆಡಳಿತ ಮಂಡಳಿ ಪ್ರಮುಖ ಆರೋಪಿಯ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಇದಾದ ಬಳಿಕ ಇಡೀ ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ಮನೆಗಳ ಮೇಲೂ ಬುಲ್ಡೋಜರ್‌ಗಳನ್ನು ಬಳಸಲಾಗಿದೆ.

ಸಿಧಿ ಜಿಲ್ಲೆಯ ಮಜೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಸಂವೇದನಾಶೀಲ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ 7 ವಿದ್ಯಾರ್ಥಿನಿಯರನ್ನು ಸ್ಕಾಲರ್‌ಶಿಪ್ ಹೆಸರಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆರೋಪಿಗಳು ಧ್ವನಿ ಬದಲಾಯಿಸುವ ಆ್ಯಪ್‌ ಮೂಲಕ ಕೃತ್ಯ ಎಸಗುತ್ತಿದ್ದರು. ಮಹಿಳಾ ಶಿಕ್ಷಕರಂತೆ ಬಿಂಬಿಸಿ ಹೆಣ್ಣು ಮಕ್ಕಳನ್ನು ವಂಚಿಸುತ್ತಿದ್ದರು.

ಮಧ್ಯ ಪ್ರದೇಶದಲ್ಲೂ ಬುಲ್ಡೋಜರ್ ಆರ್ಭಟ: ಬುಡಕಟ್ಟು ವಿದ್ಯಾರ್ಥಿನಿಯರನ್ನು ರೇಪ್ ಮಾಡಿದ್ದ 3 ಆರೋಪಿಗಳ ಮನೆ ಧ್ವಂಸ, ವಿಡಿಯೋ
ಯೂಟ್ಯೂಬರ್ ಧ್ರುವ್‌ ರಾಠೆ ವಿಡಿಯೋ ಬಳಿಕ ಅತ್ಯಾಚಾರ, ಜೀವ ಬೆದರಿಕೆಗಳು ಬರುತ್ತಿವೆ: ಸ್ವಾತಿ ಮಲಿವಾಲ್

3 ಆರೋಪಿಗಳ ಮನೆ ಧ್ವಂಸ

ವಿಷಯ ಬೆಳಕಿಗೆ ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡು ಪ್ರಮುಖ ಆರೋಪಿ ಬ್ರಿಜೇಶ್ ಪ್ರಜಾಪತಿ ಮತ್ತು ಆತನ 3 ಸಹಚರರನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಬ್ರಿಜೇಶ್ ಪ್ರಜಾಪತಿಯ ಸಂಬಂಧಿಕರಾಗಿದ್ದು, ಆರೋಪಿಯ ಎಲ್ಲಾ ಅಪರಾಧ ಚಟುವಟಿಕೆಗಳಲ್ಲಿ ಆರೋಪಿಗೆ ಬೆಂಬಲ ನೀಡುತ್ತಿದ್ದರು. ಪೊಲೀಸ್ ತಂಡ ಆರೋಪಿಯ ಮನೆಗೆ ತೆರಳಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದೆ.

ಎಸ್‌ಐಟಿ ತಂಡ ರಚನೆ

ಪ್ರಕರಣದ ತನಿಖೆಗಾಗಿ 9 ಸದಸ್ಯರ ಎಸ್‌ಐಟಿ ತಂಡವನ್ನು ರಚಿಸಲಾಗಿದೆ. ಈ ಸಂಪೂರ್ಣ ತಂಡವು 7 ದಿನಗಳಲ್ಲಿ ಪ್ರಕರಣದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com