ನವದೆಹಲಿ: ಪೂರ್ವ ಲಡಾಖ್‌ನ ಎರಡು ಘರ್ಷಣೆಯ ಬಳಿಕ ಗಡಿ ಪ್ರದೇಶದಲ್ಲಿ ಚೀನಾ- ಭಾರತ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯು ಶುಕ್ರವಾರ ಡೆಮ್‌ಚೋಕ್‌ನಲ್ಲಿ ಗಸ್ತು ತಿರುಗಲು ಪ್ರಾರಂಭಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಡೆಪ್ಸಾಂಗ್‌ನಲ್ಲಿ ಗಸ್ತು ತಿರುಗುವಿಕೆ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದಲ್ಲಿನ ಎರಡು ಘರ್ಷಣೆ ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ ಮತ್ತು ಈ ಹಂತಗಳಲ್ಲಿ ಶೀಘ್ರದಲ್ಲೇ ಗಸ್ತು ತಿರುಗಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಗುರುವಾರ ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಬಿಂದುಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡರು. ಎರಡೂ ದೇಶಗಳು ಎರಡು ಘರ್ಷಣೆಯ ಪ್ರದೇಶಗಳಲ್ಲಿ ಸೈನಿಕರ ವಿಯೋಜನೆಯನ್ನು ಪೂರ್ಣಗೊಳಿಸಿದ ಒಂದು ದಿನದ ನಂತರ ಸಾಂಪ್ರದಾಯಿಕ ಅಭ್ಯಾಸವನ್ನು ನಡೆಸಲಾಯಿತು.
ಗಸ್ತು ಸ್ಥಿತಿಯನ್ನು ಏಪ್ರಿಲ್ 2020 ರ ಪೂರ್ವದ ಮಟ್ಟಕ್ಕೆ ಹಿಂತಿರುಗಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು.
ಗಸ್ತು ತಿರುಗುವ ವಿಧಾನಗಳನ್ನು ಕಮಾಂಡರ್‌ಗಳ ನಡುವೆ ನಿರ್ಧರಿಸಲಾಗುವುದು "ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆ ಮುಂದುವರಿಯುತ್ತದೆ" ಎಂದು ಸೇನೆ ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅಕ್ಟೋಬರ್ 21 ರಂದು ದೆಹಲಿಯಲ್ಲಿ ಕಳೆದ ಹಲವು ವಾರಗಳಿಂದ ಮಾತುಕತೆಗಳ ನಂತರ ಭಾರತ ಮತ್ತು ಚೀನಾ ನಡುವೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಮತ್ತು ಇದು 2020 ರಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು.
Advertisement