ದೀಪಾವಳಿ: ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣ; LAC ಹಲವು ಭಾಗಗಳಲ್ಲಿ ಸಿಹಿ ಹಂಚಿ ಸಂಭ್ರಮ!

ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ ಎರಡು ಘರ್ಷಣೆಯ ಬಿಂದುಗಳಲ್ಲಿ ಎರಡೂ ದೇಶಗಳು ಕದನ ವಿರಾಮ ಘೋಷಿಸಿದ ನಂತರ ಸಿಹಿಹಂಚಿಕೊಂಡರು. ಇದು ಚೀನಾ-ಭಾರತದ ಸಂಬಂಧಗಳಲ್ಲಿ ಹೊಸ ಭಾಷ್ಯವನ್ನು ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.
Soldiers of the Indian and Chinese Army exchange sweets at the Chushul-Moldo border meeting point on the occasion of Diwali on Thursday, Oct. 31, 2024.
ದೀಪಾವಳಿ ಪ್ರಯುಕ್ತ ಚುಶುಲ್-ಮೊಲ್ಡೊ ಗಡಿ ಕೇಂದ್ರದಲ್ಲಿ ಭಾರತ ಮತ್ತು ಚೀನಾ ಪಡೆ ಯೋಧರು ಸಿಹಿತಿಂಡಿ ಹಂಚಿಕೊಂಡರು
Updated on

ನವದೆಹಲಿ: ದೀಪಾವಳಿ ಹಬ್ಬದ ಸಂತೋಷದ ಸಮಯದಲ್ಲಿ ಪ್ರೀತಿಯ ಧ್ಯೋತಕವಾಗಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ (LAC) ಹಲವು ಗಡಿ ಭಾಗಗಳಲ್ಲಿ ಸಿಹಿತಿಂಡಿ ವಿನಿಮಯ ಮಾಡಿಕೊಂಡರು.

ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ ಎರಡು ಘರ್ಷಣೆಯ ಬಿಂದುಗಳಲ್ಲಿ ಎರಡೂ ದೇಶಗಳು ಕದನ ವಿರಾಮ ಘೋಷಿಸಿದ ನಂತರ ಸಿಹಿಹಂಚಿಕೊಂಡರು. ಇದು ಚೀನಾ-ಭಾರತದ ಸಂಬಂಧಗಳಲ್ಲಿ ಹೊಸ ಭಾಷ್ಯವನ್ನು ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಿಹಿ ವಿನಿಮಯವು ದೀಪಾವಳಿಯ ಸಂದರ್ಭದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಹಲವು ಗಡಿ ಬಿಂದುಗಳಲ್ಲಿ ನಡೆಯಿತು ಎಂದು ಸೇನಾ ಮೂಲವು ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿಗೆ ತಿಳಿಸಿದರು.

ಗಡಿ ವಾಸ್ತವ ರೇಖೆಯ ಉದ್ದಕ್ಕೂ ಐದು ಬಾರ್ಡರ್ ಪರ್ಸನಲ್ ಮೀಟಿಂಗ್ (BPM) ಪಾಯಿಂಟ್‌ಗಳಲ್ಲಿ ಸಿಹಿತಿಂಡಿಗಳ ವಿನಿಮಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಎರಡೂ ಕಡೆಯ ಪಡೆಗಳು ಎರಡು ಘರ್ಷಣೆ ಬಿಂದುಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿವೆ. ಈ ಹಂತಗಳಲ್ಲಿ ಗಸ್ತು ತಿರುಗುವಿಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

Soldiers of the Indian and Chinese Army exchange sweets at the Chushul-Moldo border meeting point on the occasion of Diwali on Thursday, Oct. 31, 2024.
ದೀಪಾವಳಿಗೂ ಮುನ್ನ ಗುಡ್ ನ್ಯೂಸ್: ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಪೂರ್ಣ, ನಾಳೆ ಸಿಹಿ ಹಂಚಿ ಸಂಭ್ರಮ!

ಸೇನಾ ನಿರ್ಗಮನದ ನಂತರ ಪರಿಶೀಲನೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಗಸ್ತು ತಿರುಗುವ ವಿಧಾನಗಳನ್ನು ಸೇನಾ ಕಮಾಂಡರ್‌ಗಳ ನಡುವೆ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆ ಮುಂದುವರಿಯುತ್ತದೆ ಎಂದು ಸೇನಾ ಮೂಲವು ಸೇರಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅಕ್ಟೋಬರ್ 21 ರಂದು ದೆಹಲಿಯಲ್ಲಿ ಕಳೆದ ಹಲವು ವಾರಗಳಿಂದ ಮಾತುಕತೆಗಳ ನಂತರ ಭಾರತ ಮತ್ತು ಚೀನಾ ನಡುವೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. 2020 ರಲ್ಲಿ ಪೂರ್ವ ಲಡಾಕ್ ನಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಗಸ್ತು ತಿರುಗುವಿಕೆ ಮತ್ತು ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಕುರಿತು ಒಪ್ಪಂದವನ್ನು ದೃಢಪಡಿಸಲಾಯಿತು, ಇದು ನಾಲ್ಕು ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವ ಸೂಚನೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com