ಒಡಿಶಾದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿ; ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ!

ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಒಡಿಶಾದ ಭದ್ರಕ್-ಬೌದ್‌ಪುರ ವಿಭಾಗದಲ್ಲಿ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ" ಎಂದು ರೈಲ್ವೆ ತಿಳಿಸಿದೆ.
ರೈಲಿನ ಮೇಲೆ ಗುಂಡಿನ ದಾಳಿ
ರೈಲಿನ ಮೇಲೆ ಗುಂಡಿನ ದಾಳಿ
Updated on

ಭದ್ರಕ್: ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಮಂಗಳವಾರ ಚಲಿಸುತ್ತಿದ್ದ ರೈಲಿನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚರಂಪಾ ಸ್ಟೇಷನ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ನಂದನ್ ಕಾನನ್ ಎಕ್ಸ್‌ಪ್ರೆಸ್‌ಗೆ ರೈಲ್ವೆ ಸಂರಕ್ಷಣಾ ಪಡೆ ಭದ್ರತೆ ಒದಗಿಸಿದರು ಮತ್ತು ಪುರಿಯವರೆಗೆ ಬೆಂಗಾವಲು ಮಾಡಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಸಂಖ್ಯೆ "12816 ಆನಂದ್ ವಿಹಾರ್-ಪುರಿ ನಂದನ್ ಕಾನನ್ ಎಕ್ಸ್‌ಪ್ರೆಸ್‌ನ ಗಾರ್ಡ್ ವ್ಯಾನ್‌ನ ಕಿಟಕಿಯ ಹಲಗೆಗೆ ಎರಡು ಬುಲೆಟ್‌ಗಳು ಬಡಿದಿವೆ. ಗುಂಡಿನ ದಾಳಿಗೆ ಕಾರಣವೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಒಡಿಶಾದ ಭದ್ರಕ್-ಬೌದ್‌ಪುರ ವಿಭಾಗದಲ್ಲಿ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದೆ" ಎಂದು ರೈಲ್ವೆ ತಿಳಿಸಿದೆ.

ರೈಲಿನ ಮೇಲೆ ಗುಂಡಿನ ದಾಳಿ
ಕಾನ್ಪುರ: ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು, ಪ್ರಯಾಣಿಕರ ಸ್ಥಳಾಂತರ

ಬೆಳಗ್ಗೆ 9.25 ರ ಸುಮಾರಿಗೆ ರೈಲು ಭದ್ರಕ್ ನಿಲ್ದಾಣದಿಂದ ಹೊರಟಿತು ಮತ್ತು ಐದು ನಿಮಿಷಗಳ ನಂತರ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಫೈರಿಂಗ್‌ನಲ್ಲಿ ಭಾಗಿಯಾಗಿರುವವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಿಆರ್‌ಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com