Viagra ಸೇವಿಸಿ 14 ವರ್ಷದ ಬಾಲಕಿಯ ಜತೆ ಸಂಭೋಗ; ಪ್ರಾಣ ಕಳೆದುಕೊಂಡ Surat Diamond ಸಂಸ್ಥೆ ಮ್ಯಾನೇಜರ್

ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 14 ರ ಹರೆಯದ ಬಾಲಕಿಯ ಜೊತೆ ಹೊಟೇಲ್‌ ರೂಮ್‌ನಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಹಠಾತ್‌ ಸಾವನ್ನಪ್ಪಿದ್ದಾನೆ.
Gujarat diamond factory manager dies during sex
ಸಾಂದರ್ಭಿಕ ಚಿತ್ರ
Updated on

ಮುಂಬೈ: 14 ವರ್ಷದ ಬಾಲಕಿಯ ಜತೆ ಸಂಭೋಗ ನಡೆಸುತ್ತಿರುವಾಗಲೇ ವಜ್ರದ ಕಂಪನಿಯ ಮ್ಯಾನೇಜರ್ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.

ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 14 ರ ಹರೆಯದ ಬಾಲಕಿಯ ಜೊತೆ ಹೊಟೇಲ್‌ ರೂಮ್‌ನಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಹಠಾತ್‌ ಸಾವನ್ನಪ್ಪಿದ್ದು, ಈ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ.

ಈ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಗುಜರಾತ್‌ ಮೂಲದ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯನ್ನು ಮುಂಬೈಗೆ ಕರೆತಂದು ಹೊಟೇಲ್‌ ರೂಮಿನಲ್ಲಿ ಆಕೆಯ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವೇಳೆ ಆತ ಹಠಾತ್‌ ಸಾವನ್ನಪ್ಪಿದ್ದು, ಆತನ ಸಾವಿಗೆ ಹೃದಯಾಘಾತ ಮತ್ತು ಅತಿಯಾದ ವಯಾಗ್ರ ಕಾರಣ ಎಂದು ಹೇಳಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಸೂರತ್‌ನ ಡೈಮಂಡ್‌ ಫ್ಯಾಕ್ಟರಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ 41 ವರ್ಷದ ಈ ವ್ಯಕ್ತಿ ಬಾಲಕಿಯ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದನು. ಅಲ್ಲದೆ ಬಾಲಕಿಗೂ ವಜ್ರದ ಫ್ಯಾಕ್ಟರಿಯಲ್ಲಿಯೇ ಕೆಲಸವನ್ನು ಸಹ ಕೊಟ್ಟಿದ್ದನು.

ಬಾಲಕಿಯ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಮ್ಯಾನೇಜರ್‌ ಹಣದ ಸಹಾಯವನ್ನು ಕೂಡಾ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಅವರು ಆತನ ಮೇಲಿನ ನಂಬಿಕೆಯಿಂದ ಮಗಳನ್ನು ಆತನೊಂದಿಗೆ ಕೆಲಸದ ನಿಮಿತ್ತ ಕಳುಹಿಸಿಕೊಡುತ್ತಿದ್ದರು.

ಬಾಲಕಿಗೆ ಬ್ಲಾಕ್ ಮೇಲ್

ಈಗ್ಗೆ ನವೆಂಬರ್‌ 2 ರಂದು ಮ್ಯಾನೇಜರ್‌ ಕೆಲಸದ ನಿಮಿತ್ತ ಆ ಬಾಲಕಿಯನ್ನು ಮುಂಬೈಗೆ ಕರೆತಂದು ಇಲ್ಲಿನ ಗ್ರಾಂಟ್‌ ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಬಾಲಕಿಯ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಆಕೆಯೊಂದಿಗೆ ಹೊಟೇಲ್‌ ರೂಮ್‌ನಲ್ಲಿ ತಂಗಿದ್ದಾನೆ.

ಜೊತೆಗೆ ನೀನು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ನಿನ್ನ ಕುಟುಂಬಕ್ಕೆ ಹಣ ನೀಡುವುದನ್ನು ನಿಲ್ಲಿಸುತ್ತೇನೆ, ಇಲ್ಲಿಯವರೆಗೆ ಕೊಟ್ಟ ಹಣವನ್ನು ಸಹ ವಾಪಸ್‌ ಪಡೆಯುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಬಾಲಕಿ ಆತನಿಗೆ ಶರಣಾಗಿದ್ದಾಳೆ.

ಈ ವೇಳೆ ಆತ ಬಾಲಕಿಯ ಜೊತೆ ಬಲವಂತವಾಗಿ ಸಂಭೋಗ ನಡೆಸಿದ್ದಾನೆ. ಆದರೆ ಆತ ಮಿತಿಮೀರಿ ವಯಾಗ್ರ ಮಾತ್ರೆಯನ್ನು ಸೇವಿಸಿದ ಕಾರಣ ಸಂಭೋಗದ ಬಳಿಕ ಹಠಾತ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

Gujarat diamond factory manager dies during sex
ಬಾಲಕಿ ನಾಪತ್ತೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್; ಅತ್ಯಾಚಾರ-ಕೊಲೆ ಶಂಕೆಯ 4 ದಿನಗಳ ನಂತರ 'ಜೀವಂತ' ಪತ್ತೆ!

ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಮುಂಬೈಗೆ ಆಗಮಿಸಿದ ಬಾಲಕಿಯ ತಾಯಿ ಮೃತ ಮ್ಯಾನೇಜರ್‌ ವಿರುದ್ಧ ಪೊಲೀಸ್‌ ದೂರನ್ನು ನೀಡಿದ್ದಾರೆ. ಪೊಲೀಸರು BNS ಮತ್ತು POCSO ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು, ಆರೋಪಿ ಬದುಕಿಲ್ಲ, ಹೀಗಾಗಿ ಸಾರಾಂಶ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com