Bishnoi Gang: 'ಪಶ್ಚಾತ್ತಾಪವೇನಿಲ್ಲ.. ಲಾರೆನ್ಸ್ ಬಿಷ್ಣೋಯ್ ನನ್ನ ಸ್ಫೂರ್ತಿ': Salman Khan ಗೆ ಬೆದರಿಕೆ ಹಾಕಿದ್ದ 'ಹಾವೇರಿ' ವ್ಯಕ್ತಿ ಹೇಳಿಕೆ!

ಲಾರೆನ್ಸ್ ಬಿಷ್ಣೋಯ್ ತನ್ನ ಆರಾಧ್ಯ ದೈವವಾಗಿದ್ದು, ಬಿಷ್ಣೋಯ್ ಸಮುದಾಯಕ್ಕೆ ಮಂದಿರ ನಿರ್ಮಿಸಲು ಸಲ್ಮಾನ್ ಖಾನ್ ಬಳಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾಗಿ ಆತ ಹೇಳಿದ್ದಾನೆ.
Lawrence Bishnoi
ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ (ಸಂಗ್ರಹ ಚಿತ್ರ)
Updated on

ಮುಂಬೈ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಕರೆ ಮಾಡಿ 5 ಕೋಟಿ ರೂಗೆ ಬೇಡಿಕೆ ಇಟ್ಟಿದ್ದ ಹಾವೇರಿ ವ್ಯಕ್ತಿ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ಇತ್ತೀಚೆಗೆ ಕರ್ನಾಟಕದ ಹಾವೇರಿಯಲ್ಲಿ ಬಂಧನಕ್ಕೀಡಾಗಿದ್ದ ಭಿಕಾ ರಾಮ್ ಬಿಷ್ಣೋಯ್, 'ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ ಜೈಲುಪಾಲಾಗಿರುವುದಕ್ಕೆ ನನಗಾವುದೇ ಪಶ್ಚಾತ್ತಾಪವಿಲ್ಲ.. ಬಿಷ್ಣೋಯ್ ಸಮುದಾಯಕ್ಕಾಗಿ ಜೈಲಿಗೆ ಹೋಗಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ನೀಡಿ 5 ಕೋಟಿ ರುಪಾಯಿ ಬೇಡಿಕೆಯಿಟ್ಟ ಆರೋಪದ ಮೇಲೆ ಭಿಕಾ ರಾಮ್ ಬಿಷ್ಣೋಯ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ವರ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಅಂತೆಯೇ ವಿಚಾರಣೆ ವೇಳೆ, 'ಬೆದರಿಕೆ ಹಾಕಿ ಪೊಲೀಸರಿಂದ ಬಂಧನಕ್ಕೀಡಾಗಿದ್ದಕ್ಕೆ ತನಗೆ ಯಾವುದೇ ವಿಷಾದವಿಲ್ಲ. ಬಿಷ್ಣೋಯ್ ಸಮುದಾಯಕ್ಕಾಗಿ ಜೈಲಿಗೆ ಹೋಗಿದ್ದಕ್ಕೆ ನನಗೆ ಖುಷಿ ಇದೆ. ಲಾರೆನ್ಸ್ ಬಿಷ್ಣೋಯ್ ತನ್ನ ಆರಾಧ್ಯ ದೈವವಾಗಿದ್ದು, ಬಿಷ್ಣೋಯ್ ಸಮುದಾಯಕ್ಕೆ ಮಂದಿರ ನಿರ್ಮಿಸಲು ಸಲ್ಮಾನ್ ಖಾನ್ ಬಳಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.

Lawrence Bishnoi
ನಟ ಸಲ್ಮಾನ್ ಖಾನ್ ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತೊಂದು ಬೆದರಿಕೆ ಕರೆ: 5 ಕೋಟಿ ರು ಹಣಕ್ಕೆ ಬೇಡಿಕೆ

ಲಾರೆನ್ಸ್ ಬಿಷ್ಣೋಯ್ ವಿಡಿಯೋ ವೀಕ್ಷಿಸುತ್ತಿದ್ದ ಆರೋಪಿ

ಇನ್ನು ಆರೋಪಿ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ನ ಅಭಿಮಾನಿಯಾಗಿದ್ದು, ಲಾರೆನ್ಸ್ ಬಿಷ್ಣೋಯ್ ವೀಡಿಯೊಗಳನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ. ಜೈಲಿನೊಳಗಿಂದಲೇ ಬಿಷ್ಣೋಯ್ ಸಮುದಾಯಕ್ಕಾಗಿ ಸಾಕಷ್ಟು ಮಾಡುತ್ತಿದ್ದಾರೆ ಎಂದು ಹೆಮ್ಮೆಪಡುತ್ತಿದ್ದ. ಅಂತೆಯೇ ಹಿಟ್ ಅಂಡ್ ರನ್ ಪ್ರಕರಣವಾಗಲಿ ಅಥವಾ ಕೃಷ್ಣಮೃಗ ಬೇಟೆ ಪ್ರಕರಣವಾಗಲಿ ಸಲ್ಮಾನ್ ಖಾನ್ ತಾನು ಮಾಡಿದ ಯಾವುದೇ ಕೃತ್ಯಕ್ಕೆ ಕ್ಷಮೆ ಕೇಳಿಲ್ಲ. ಹೀಗಾಗಿ ಆತನ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಮಾಡುತ್ತಿರುವುದು ಸರಿಯಾಗಿದೆ ಎಂದು ನಂಬಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ 32 ವರ್ಷದ ಭಿಕಾ ರಾಮ್ ಬಿಷ್ಣೋಯ್ ನನ್ನು ಕರ್ನಾಟಕದ ಹಾವೇರಿಯಲ್ಲಿ ಬಂಧಿಸಿ ಬುಧವಾರ ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com