ನುಸುಳುಕೋರ ತಂದೆ, ಆದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ: ಜೆಪಿ ನಡ್ಡಾ

ಬಿಶ್ರಾಮ್‌ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಜೆಎಂಎಂ ನೇತೃತ್ವದ ಸರ್ಕಾರವು ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡಿದೆ ಎಂದು ಆರೋಪಿಸಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
Updated on

ರಾಂಚಿ: ಜಾರ್ಖಂಡ್‌ನಲ್ಲಿ ಕೇಸರಿ ಪಕ್ಷವು ಅಧಿಕಾರಕ್ಕೆ ಬಂದರೆ, ನುಸುಳುಕೋರ ತಂದೆ ಮತ್ತು ಸ್ಥಳೀಯ ಆದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕುಗಳನ್ನು ನೀಡುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಗತ್ ಪ್ರಸಾದ್ ನಡ್ಡಾ ಅವರು ಶನಿವಾರ ಹೇಳಿದ್ದಾರೆ.

ಇಂದು ಪಲಮು ಜಿಲ್ಲೆಯ ಬಿಶ್ರಾಮ್‌ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಜೆಎಂಎಂ ನೇತೃತ್ವದ ಸರ್ಕಾರವು ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅವರನ್ನು ಓಡಿಸಲಾಗುವುದು ಎಂದರು.

"ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿ ನುಸುಳುಕೋರ ತಂದೆ ಮತ್ತು ಆದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕುಗಳನ್ನು ನಿರಾಕರಿಸಲಾಗುತ್ತದೆ. ಇದರಿಂದ ಒಳನುಸುಳುವಿಕೆಯನ್ನು ತಡೆಯಬಹುದು" ಎಂದು ನಡ್ಡಾ ಹೇಳಿದರು.

ರಾಜ್ಯದಲ್ಲಿ ಭ್ರಷ್ಟರು ಮತ್ತು ಕಳ್ಳರು ಜೆಎಂಎಂ ನೇತೃತ್ವದ ಸರ್ಕಾರದ ಭಾಗವಾಗಿದ್ದಾರೆ ಎಂದು ನಡ್ಡಾ ಆರೋಪಿಸಿದರು.

"ಜಾರ್ಖಂಡ್‌ನಲ್ಲಿ ಸಿಂಗಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಇಲ್ಲಿ ಡಬಲ್ ಇಂಜಿನ್ ಸರ್ಕಾರ ರಚಿಸುವ ಸಮಯ ಬಂದಿದೆ" ಎಂದು ನಡ್ಡಾ ಹೇಳಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
ರಾಹುಲ್ ಗಾಂಧಿ ತೋರಿಸಿದ ಸಂವಿಧಾನದ ಪ್ರತಿ ನಕಲಿ: ಅಮಿತ್ ಶಾ

ಸೋರೆನ್ ಸರ್ಕಾರದಿಂದ ನುಸುಳುಕೋರರಿಗೆ ರೆಡ್ ಕಾರ್ಪೆಟ್

ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ನೇತೃತ್ವದ ಸರ್ಕಾರವು ಬಾಂಗ್ಲಾ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತವನ್ನು ನೀಡುತ್ತಿದೆ ಎಂದು ಆರೋಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಅಂತಹ ಶಕ್ತಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಶನಿವಾರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com