ದೆಹಲಿಯ ಗಾಳಿಯ ಗುಣಮಟ್ಟ ಈ ಋತುವಿನಲ್ಲಿ ಮೊದಲ ಬಾರಿಗೆ ತೀವ್ರ 'ಕಳಪೆ'!

ಇಂದು ಬೆಳಗ್ಗೆ 9 ಗಂಟೆಗೆ, ಗಾಳಿಯ ಗುಣಮಟ್ಟವು 366 AQIನೊಂದಿಗೆ 'ಅತ್ಯಂತ ಕಳಪೆ' ದಾಖಲಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ದೆಹಲಿ ವಾಯು ಮಾಲಿನ್ಯ
ದೆಹಲಿ ವಾಯು ಮಾಲಿನ್ಯ
Updated on

ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟವು ಬುಧವಾರ ಈ ಋತುವಿನಲ್ಲಿ ಮೊದಲ ಬಾರಿಗೆ ತೀವ್ರ 'ಕಳಪೆ' ದಾಖಲಾಗಿದ್ದು, AQI 418 ಕ್ಕೆ ಏರಿದೆ.

ರಾಷ್ಟ್ರ ರಾಜಧಾನಿಯ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ, ಪ್ರತಿದಿನ ಸಂಜೆ 4 ಗಂಟೆಗೆ ದಾಖಲಾಗುತ್ತದೆ. ಮಂಗಳವಾರ AQI 334 ರಷ್ಟಿತ್ತು. ಇಂದು 418ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆ 9 ಗಂಟೆಗೆ, ಗಾಳಿಯ ಗುಣಮಟ್ಟವು 366 AQIನೊಂದಿಗೆ 'ಅತ್ಯಂತ ಕಳಪೆ' ದಾಖಲಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ದೆಹಲಿ ವಾಯು ಮಾಲಿನ್ಯ
'ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸಲ್ಲ...', ಪಟಾಕಿ ನಿಷೇಧ ಕೇವಲ ತೋರಿಕೆಗಾಗಿ: ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ!

ಝಿರೋದಿಂದ 50 ರ ನಡುವಿನ AQI ಅನ್ನು 'ಉತ್ತಮ', 51 ರಿಂದ 100 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ಅತ್ಯಂತ ಕಳಪೆ', 401 ರಿಂದ 450 'ತೀವ್ರ ಕಳಪೆ' ಮತ್ತು 450 ಕ್ಕಿಂತ ಹೆಚ್ಚಿದ್ದರೆ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com