ಗಾಂಜಾ ಕೇಸ್ ನಲ್ಲಿ ನಟ, ಗಾಯಕ ಬಂಧನ!

ಶನಿವಾರ ರಾತ್ರಿ ಜಿಲ್ಲೆಯ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ ಪಾರೀಕುಟ್ಟಿ ಎಂದೇ ಹೆಸರಾಗಿರುವ ನಟ ಮತ್ತು ಆತನ ಸ್ನೇಹಿತರೊಬ್ಬರನ್ನು MDMA ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಬಂಧಿಸಲಾಯಿತು.
P S Fareeduddin
ಪಿ.ಎಸ್ .ಫರೀದುದ್ದೀನ್
Updated on

ಇಡುಕ್ಕಿ: ನಿಷೇಧಿತ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಮಲಯಾಳಂ ನಟ, ಗಾಯಕ ಹಾಗೂ BigBoss ಮಾಜಿ ಸ್ಪರ್ಧಿ ಪಿ.ಎಸ್ .ಫರೀದುದ್ದೀನ್ ಅವರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ ಜಿಲ್ಲೆಯ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ ಪಾರೀಕುಟ್ಟಿ ಎಂದೇ ಹೆಸರಾಗಿರುವ ನಟ ಮತ್ತು ಆತನ ಸ್ನೇಹಿತರೊಬ್ಬರನ್ನು MDMA ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಬಂಧಿಸಲಾಯಿತು.

ಬಂಧಿತ ನಟ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನಪ್ರಿಯ ಟಿವಿ ಶೋ ಬಿಗ್ ಬಾಸ್‌ನ ಒಂದು ಸೀಸನ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಹಲವಾರು ಫಾಲೋವರ್ಸ್ ಇದ್ದಾರೆ. ಇದು ಸಾಮಾನ್ಯ ವಾಹನ ತಪಾಸಣೆಯಾಗಿದ್ದು, ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ 10. 50 ಗ್ರಾಂ MDMA ಮಾದಕ ದ್ರವ್ಯ ಮತ್ತು 9 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅಬಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

P S Fareeduddin
ಬೆಂಗಳೂರು: ಕುಂಡಗಳಲ್ಲಿ ಗಾಂಜಾ ಬೆಳೆದ ದಂಪತಿ ; ರೀಲ್ಸ್ ಮಾಡಿ ಪೊಲೀಸರ ಬಲೆಗೆ ಬಿದ್ದ ಜೋಡಿ!

ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯ ಪ್ರಮಾಣ ಹೆಚ್ಚಾಗಿದ್ದು, ಅವರು 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ತನಿಖೆ ಮುಂದುವರಿದಿದ್ದು, ತನಿಖೆಯ ನಂತರ ಇತರ ವಿವರಗಳು ಲಭ್ಯವಾಗಬಹುದು ಎಂದು ಅವರು ಹೇಳಿದರು.

ನಟ ಮತ್ತು ಅವರ ಸ್ನೇಹಿತ ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com