ಭಾರತದಲ್ಲಿ 39 ಅತ್ಯಂತ ಕಲುಷಿತ ನಗರಗಳು! S&P ಅಧ್ಯಯನ

ನೆರೆಯ ಪಾಕಿಸ್ತಾನವು ಏಳು ನಗರಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಐದು ಮತ್ತು ನೇಪಾಳ ಎರಡು ನಗರಗಳೊಂದಿಗೆ ನಂತರದ ಸ್ಥಾನದಲ್ಲಿದೆ.
Newdelhi
ನವದೆಹಲಿ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಜಗತ್ತಿನ ಟಾಪ್ 100 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತ ತನ್ನ ಪ್ರತಿಸ್ಪರ್ಧಿ ಚೀನಾಕ್ಕಿಂತ ಬಹಳ ಮುಂದಿದೆ. ಇತ್ತೀಚಿಗೆ S&P ಗ್ಲೋಬಲ್ ಮೊಬಿಲಿಟಿ ವೆಬ್ ಜಾಗತಿಕವಾಗಿ ಅತ್ಯಂತ ಕಲುಷಿತವಾಗಿರುವ ಟಾಪ್ 100 ನಗರಗಳನ್ನು ಗುರುತಿಸಿದೆ. ಇದರಲ್ಲಿ ಭಾರತದ 39 ನಗರಗಳಿವೆ. ಪ್ರತಿಸ್ಪರ್ಧಿ ಚೀನಾ 30 ನಗರಗಳನ್ನು ಹೊಂದಿದೆ.

ನೆರೆಯ ಪಾಕಿಸ್ತಾನವು ಏಳು ನಗರಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಐದು ಮತ್ತು ನೇಪಾಳ ಎರಡು ನಗರಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಆತಂಕಕಾರಿ ವಿಷಯವೇನೆಂದರೆ, ವಿಶ್ವದ ಅಗ್ರ 100 ಅತ್ಯಂತ ಕಲುಷಿತ ನಗರಗಳಲ್ಲಿ ಅರ್ಧಕ್ಕಿಂತ ಹೆಚ್ಚು (53 ನಗರಗಳು) ಭಾರತೀಯ ಉಪಖಂಡದಲ್ಲಿವೆ. ಭಾರತವು ಎಲೆಕ್ಟ್ರೀಕ್ ವಾಹನಗಳತ್ತ ಹೊರಳಬೇಕಾದ ಅಗತ್ಯವನ್ನುS&P ಅಧ್ಯಯನವು ಎತ್ತಿ ತೋರಿಸಿದೆ.

ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಬಗ್ಗೆ ಕಳವಳವನ್ನು ಸಹ ವ್ಯಕ್ತಪಡಿಸಿದೆ. ಸಂಚಾರ ದಟ್ಟಣೆಯಲ್ಲಿ ಪ್ರತಿ ಕಿಲೋಮೀಟರ್‌ಗೆ 430 ವಾಹನಗಳೊಂದಿಗೆ ಮುಂಬೈ ಅಗ್ರಸ್ಥಾನದಲ್ಲಿದೆ 308 ವಾಹನಗಳೊಂದಿಗೆ ಕೋಲ್ಕತ್ತಾ ಎರಡನೇ ಸ್ಥಾನ, ಪುಣೆ 248, ಮತ್ತು ದೆಹಲಿಯು ಪ್ರತಿ ಕಿಮೀಗೆ 93 ವಾಹನಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಬೆಂಗಳೂರಿನಲ್ಲಿ ತೀವ್ರ ಸಂಚಾರ ದಟ್ಟಣೆ ಸರಾಸರಿ ವಾಹನದ ವೇಗವನ್ನು ಗಂಟೆಗೆ ಕೇವಲ 10 ಕಿಮೀಗೆ ಇಳಿಸಿದೆ ಎಂದು ಅಧ್ಯಯನ ಹೇಳಿದೆ.

ನೇರ ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಭಾರತ ಮೂಲದ ಕಂಪನಿಯಾದ AQI ಒದಗಿಸಿದ ಡೇಟಾದಿಂದ ಭಾರತದ ಮಾಲಿನ್ಯ ಸಮಸ್ಯೆಯ ಗುರುತ್ವವು ಸ್ಪಷ್ಟವಾಗಿದೆ. ಅತ್ಯಂತ ಕಲುಷಿತಗೊಂಡಿರುವ ಮೊದಲ 10 ಸ್ಥಾನಗಳನ್ನು ದೆಹಲಿ, ಗಾಜಿಯಾಬಾದ್, ಬುಲಂದ್‌ಶಹರ್, ಹುಬ್ಬಳ್ಳಿ ಮತ್ತು ಗುಲ್ಬರ್ಗಾ ಸೇರಿದಂತೆ ಭಾರತೀಯ ನಗರಗಳವೇ ಆಕ್ರಮಿಸಿಕೊಂಡಿವೆ.

Newdelhi
G20 ಮುಕ್ತಾಯ: ಸುಸ್ಥಿರ ಅಭಿವೃದ್ಧಿ, ಹವಾಮಾನ ಹಣಕಾಸು ಸುಧಾರಣೆ ಘೋಷವಾಕ್ಯ; ಪಳೆಯುಳಿಕೆ ಇಂಧನದ ಬಗ್ಗೆ ಪ್ರಸ್ತಾಪವಿಲ್ಲ!

2023 ರಲ್ಲಿ IQAir, ಅಂತರಾಷ್ಟ್ರೀಯ ಮೇಲ್ವಿಚಾರಣಾ ಸಂಸ್ಥೆ ದೆಹಲಿಯನ್ನು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂದು ಪರಿಗಣಿಸಿತ್ತು. ಚೀನಾದ ಬೀಜಿಂಗ್ ನೊಂದಿಗೆ 18 ನೇ ಸ್ಥಾನದಲ್ಲಿತ್ತು. ಅತ್ಯಧಿಕ ಸರಾಸರಿ PM2.5 ಸಾಂದ್ರತೆಯನ್ನು ಹೊಂದಿರುವ ದೇಶಗಳಲ್ಲಿ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. ಈ ಮಧ್ಯೆ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಚೀನಾ 19 ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com