Maharashtra Elections: ಮತದಾನದ ದಿನವೇ Crypto funds ಡೀಲ್ ಆಡಿಯೋ ವೈರಲ್; ಅದು 'ಸುಪ್ರಿಯಾ'ದ್ದೇ ಧ್ವನಿ ಎಂದ Ajit Pawar

ಕ್ರಿಪ್ಟೋಕರೆನ್ಸಿ ವ್ಯಾಪಾರಿ ಅಮಿತ್ ಭಾರದ್ವಾಜ್ ಬಂಧನದ ವೇಳೆ ಬಿಟ್‌ಕಾಯಿನ್‌ ಅನ್ನು ಒಳಗೊಂಡ ಹಾರ್ಡ್‌ವೇರ್ ಅನ್ನು ಜಪ್ತಿ ಮಾಡಲಾಗಿತ್ತು.
Ajit Pawar on Viral Audio Clip
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ (ಸಾಂದರ್ಭಿಕ ಚಿತ್ರ)
Updated on

ಮುಂಬೈ: ಮಹಾರಾಷ್ಚ್ರ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿರುವಂತೆಯೇ ಇತ್ತ Crypto ಕರೆನ್ಸಿ ಕುರಿತ ಆಡಿಯೋ ಕ್ಲಿಪ್ ವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಇದು ಎನ್ ಸಿಪಿ ಶರದ್ ಪವಾರ್ ಬಣದ ನಾಯಕಿ ಸುಪ್ರಿಯಾ ಸುಳೆಯದ್ದೇ ಧನಿ ಎಂದು ಎನ್ ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

ಹೌದು.. ಬಹು ನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ಆರಂಭವಾಗಿದ್ದು, ಮತದಾನ ಚಾಲ್ತಿಯಲ್ಲಿರುವಂತೆಯೇ ಬಹು ನಿರ್ಣಾಯಕವಾದ ಚುನಾವಣೆಯ ಹಿಂದಿನ ದಿನವಾದ ಮಂಗಳವಾರ ಭ್ರಷ್ಟಚಾರ ಆರೋಪಗಳು ವಿರೋಧ ಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಆಘಾತ ಉಂಟುಮಾಡಿದೆ.

2018ರಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ವಂಚನೆ ಪ್ರಕರಣದಲ್ಲಿ ಎನ್ ಸಿಪಿ ಶರದ್ ಪವಾರ್ ಬಣದ ಮಹಾನಾಯಕಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಗಂಭೀರ ಆರೋಪ ಮಾಡಿದ್ದು, ಮಾತ್ರವಲ್ಲದೇ ಈ ಅಕ್ರಮದ ಹಣವನ್ನು ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಳಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Ajit Pawar on Viral Audio Clip
ಮಹಾರಾಷ್ಟ್ರ ಚುನಾವಣೆ: ವೋಟಿಗಾಗಿ ಹಣ ಹಂಚಿದ ಆರೋಪ; ಬಿಜೆಪಿ ನಾಯಕನ ವಿರುದ್ಧ FIR; Video

'ಸುಪ್ರಿಯಾ'ದ್ದೇ ಧ್ವನಿ ಎಂದ Ajit Pawar

ಈ ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ತಮ್ಮ ಸಹೋದರಿ ಸುಪ್ರಿಯಾ ಸುಳೆ ಅವರ ಧ್ವನಿಯನ್ನು ತಿಳಿದಿದ್ದು, ಸತ್ಯವನ್ನು ಹೊರತರುವ ಆರೋಪಗಳ ತನಿಖೆಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. “ಸುಪ್ರಿಯಾ ನನ್ನ ಸಹೋದರಿ ಮತ್ತು ನಾನು ನಾನಾ ಪಟೋಲೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರ ಧ್ವನಿ ನನಗೆ ತಿಳಿದಿದೆ. ಆಡಿಯೊ ಕ್ಲಿಪ್‌ಗಳಲ್ಲಿ ಯಾವುದೇ ರೀತಿಯ ಡಬ್ಬಿಂಗ್ ನಡೆಯುತ್ತಿಲ್ಲ ಎಂದು ನನಗೆ ಖಚಿತವಾಗಿದೆ. ನಾನು ವಿಚಾರಣೆಯನ್ನು ಬೆಂಬಲಿಸುತ್ತೇನೆ” ಎಂದು ಹೇಳಿದರು.

ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಬಿಜೆಪಿ

ಇನ್ನು ಮಹಾರಾಷ್ಟ್ರ ಮತದಾರರು ತಮ್ಮ ತೀರ್ಪನ್ನು ಒತ್ತಲು ಒಂದು ದಿನ ಬಾಕಿ ಇರುವಾಗಲೇ ಕೇಳಿಬಂದಿರುವ ಆರೋಪ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಇದರಿಂದ ಎಂವಿಎ ಇಕ್ಕಟ್ಟಿಗೆ ಸಿಲುಕಿದೆ. ಈ ಸನ್ನಿವೇಶ ಬಳಸಿಕೊಂಡ ಬಿಜೆಪಿ, ನಾನಾ ಪಟೋಲೆ ಹಾಗೂ ಸುಪ್ರಿಯಾ ಸುಳೆ ಅವರು 'ಬಿಟ್ ಕಾಯಿನ್ ಹಗರಣ'ದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಇದೆ ಎಂದು ಆಡಿಯೋ ಕ್ಲಿಪ್ ಒಂದನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದೆ.

ಸುಪ್ರಿಯಾ ಸುಳೆ, ನಾನಾ ಪಟೋಲೆಗೆ ಕ್ರಿಪ್ಟೋ ಕರೆನ್ಸಿ ಉರುಳು

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರಶ್ಚಂದ್ರ) ನಾಯಕ ಶರದ್ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು 2018ರಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ನಿವೃತ್ತ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಆರೋಪಿಸಿದ್ದಾರೆ.

ಯಾರಿದು ರವೀಂದ್ರನಾಥ್ ಪಾಟೀಲ್? ಏನಿದು ಆರೋಪ?

ಭಾರತೀಯ ಪೊಲೀಸ್ ಸೇವೆಯಿಂದ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದುಕೊಂಡಿರುವ ರವೀಂದ್ರನಾಥ್ ಪಾಟೀಲ್, 2018ರಲ್ಲಿ ದಾಖಲಾಗಿದ್ದ ಕೆಲವು ಕ್ರಿಪ್ಟೋಕರೆನ್ಸಿ ಪ್ರಕರಣಗಳ ತನಿಖೆಗಾಗಿ ಸೈಬರ್ ಪರಿಣತ ಪಂಕಜ್ ಘೋಡೆ ಅವರೊಂದಿಗೆ ಪುಣೆ ಪೊಲೀಸ್ ವಿಭಾಗದಲ್ಲಿ ಭಾಗಿಯಾಗಿದ್ದರು.

ಆದರೆ ತನಿಖೆ ಸಂದರ್ಭದಲ್ಲಿ ಪಾಟೀಲ್ ಅವರು ಕೆಲವು ಕ್ರಿಪ್ಟೋಕರೆನ್ಸಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎನ್ನಲಾಗಿದೆ. ಸಂಖ್ಯೆಗಳನ್ನು ಬದಲಿಸುವ ಮೂಲಕ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಘೋಡೆ ಪೊಲೀಸರಿಗೆ ಒದಗಿಸಿದ್ದರು. ಇದು ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಕಡಿಮೆ ಮೊತ್ತವನ್ನು ತೋರಿಸಿತ್ತು ಎಂದು ಪೊಲೀಸರು ಆರೋಪಿಸಿದ್ದರು.

Ajit Pawar on Viral Audio Clip
ಮಹಾರಾಷ್ಟ್ರ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ; ಗಂಭೀರ ಗಾಯ

ಕ್ರಿಪ್ಟೋಕರೆನ್ಸಿ ವ್ಯಾಪಾರಿ ಅಮಿತ್ ಭಾರದ್ವಾಜ್ ಬಂಧನದ ವೇಳೆ ಬಿಟ್‌ಕಾಯಿನ್‌ ಅನ್ನು ಒಳಗೊಂಡ ಹಾರ್ಡ್‌ವೇರ್ ಅನ್ನು ಜಪ್ತಿ ಮಾಡಲಾಗಿತ್ತು. ಆದರೆ ಆಗಿನ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಅವರ ಸೂಚನೆಯಂತೆ ವ್ಯಾಲೆಟ್ ಅನ್ನು ಬೇರೆ ವ್ಯಾಲೆಟ್‌ನಿಂದ ಬದಲಿಸಲಾಗಿತ್ತು ಎಂದು ಮೆಹ್ತಾ ಆರೋಪಿಸಿದ್ದಾರೆ. ನಿಜವಾದ ತಪ್ಪಿತಸ್ಥರು ಗುಪ್ತಾ ಮತ್ತು ಅವರ ತಂಡ. ಆದರೆ ಪಾಟೀಲ್ ಹಾಗೂ ಅವರ ಸಹೋದ್ಯೋಗಿಗಳನ್ನು ಅನ್ಯಾಯವಾಗಿ ಬಂಧಿಸಲಾಗಿತ್ತು ಎಂದಿರುವ ಮೆಹ್ತಾ, ನಾನಾ ಪಟೋಲೆ ಹಾಗೂ ಸುಪ್ರಿಯಾ ಸುಳೆ ಅವರ ಕುರಿತು ತಾವೇ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com