'Adani ಯನ್ನು ತಕ್ಷಣವೇ ಬಂಧಿಸಿ, ಸೆಬಿ ಮುಖ್ಯಸ್ಥೆಯ ವಿರುದ್ಧವೂ ತನಿಖೆ ನಡೆಸಿ': ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹ

ಅಮೆರಿಕದಲ್ಲಿ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚ ಮತ್ತು ವಂಚನೆ ಆರೋಪ ಹೊರಿಸಲಾಗಿದ್ದು, ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಒತ್ತಾಯಿಸಿದ್ದಾರೆ.
Rahul Gandhi demands Adani's immediate arrest
ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ
Updated on

ನವದೆಹಲಿ: ಲಂಚ ಪ್ರಕರಣದಲ್ಲಿ ಭಾರತದ ಖ್ಯಾತ ಉದ್ಯಮಿ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಕೇಂದ್ರಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಭಾರತದ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚ ಮತ್ತು ವಂಚನೆ ಆರೋಪ ಹೊರಿಸಲಾಗಿದ್ದು, ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಒತ್ತಾಯಿಸಿದ್ದಾರೆ.

ಭಾರತೀಯ ಅಧಿಕಾರಿಗಳಿಗೆ USD 250 ಮಿಲಿಯನ್ ಲಂಚ ನೀಡಿದ ಆರೋಪದ ಮೇಲೆ US ಪ್ರಾಸಿಕ್ಯೂಟರ್‌ಗಳು ಅದಾನಿ ಮತ್ತು ಸಹಚರರ ಮೇಲೆ ಆರೋಪ ಹೊರಿಸಿ ಬಂಧನ ವಾರಂಟ್ ಜಾರಿಸಿಗೊಳಿಸಿದ ಬೆನ್ನಲ್ಲೇ ಅದಾನಿ ಬಂಧನಕ್ಕೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ಉದ್ಯಮಿ ಗೌತಮ್ ಅದಾನಿ ಭಾರತೀಯ ಮತ್ತು ಅಮೇರಿಕನ್ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಈಗ ಅಮೆರಿಕದಲ್ಲಿ ಸ್ಪಷ್ಟವಾಗಿದೆ ಮತ್ತು ದೃಢಪಟ್ಟಿದೆ ಎಂದು ಹೇಳಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಹೈ ತೋ ಸೇಫ್ ಹೇ’ ಘೋಷಣೆಗೆ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಅದಾನಿ ಒಟ್ಟಿಗೆ ಇರುವವರೆಗೂ ಅವರು ಭಾರತದಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಕೂಡಲೇ ಅದಾನಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಮತ್ತು ಅವರ "ರಕ್ಷಕ" ಮತ್ತು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರನ್ನು ತನಿಖೆಗೊಳಪಡಿಸಬೇಕು. ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ರಾಹುಲ್ ಗಾಂಧಿ ಹೇಳಿದರು.

Rahul Gandhi demands Adani's immediate arrest
ಅಮೆರಿಕಾದಿಂದ ಕ್ರಿಮಿನಲ್ ದೋಷಾರೋಪ: 600 ಮಿಲಿಯನ್ ಡಾಲರ್ ಬಾಂಡ್ ಮಾರಾಟ ರದ್ದುಗೊಳಿಸಿದ ಅದಾನಿ ಗ್ರೂಪ್ ಅಂಗಸಂಸ್ಥೆ

ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳ ಬೇಡಿಕೆಯೂ ನಿಂತಿದೆ ಎಂದ ಅವರು, ಮೋದಿ ಸರ್ಕಾರವು ಅದಾನಿಯನ್ನು ರಕ್ಷಿಸುತ್ತಿರುವ ಕಾರಣ ಭಾರತದಲ್ಲಿ ಅದಾನಿಯನ್ನು ಬಂಧಿಸುವುದಿಲ್ಲ ಅಥವಾ ತನಿಖೆ ಮಾಡುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ತನಿಖೆಗಳು ಎಲ್ಲಾ ರಾಜ್ಯಗಳನ್ನು ಒಳಗೊಂಡಿರಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

ಇನ್ನು ತಮ್ಮ ವಿರುದ್ಧದ ಆರೋಪದ ಬಗ್ಗೆ ಅದಾನಿ ಸಮೂಹ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com