ವಾರಣಾಸಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜನಸಮೂಹ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಂಜೆ ತಮ್ಮ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ರಾಜತಾಲಾಬ್‌ನ ಸ್ಟೇಷನ್ ಹೆಡ್ ಆಫೀಸರ್ (ಎಸ್‌ಎಚ್‌ಒ) ಅಜಿತ್ ವರ್ಮಾ ಪ್ರಯಾಣಿಸುತ್ತಿದ್ದರು.
ಈ ವೇಳೆ ರಸ್ತೆಯಲ್ಲಿ ಅವರ ಕಾರು ಆಟೋಗೆ ಢಿಕ್ಕಿಯಾಗಿದ್ದು, ಬಳಿಕ ಆಟೋ ಚಾಲಕ ಮತ್ತು ಅಜಿತ್ ವರ್ಮಾ ಜೊತೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದಾಗ ಕೆಲವರು ಮಧ್ಯಪ್ರವೇಶಿಸಿ ಅಜಿತ್ ವರ್ಮಾ ವಿರುದ್ಧ ಹಲ್ಲೆ ಮುಂದಾಗಿದ್ದಾರೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಓರ್ವ ಪೊಲೀಸ್ ಸಿಬ್ಬಂದಿ ಜಗಳ ಬಿಡಿಸಲು ಮುಂದಾದರೂ ಮಾತುಕೇಳದ ಜನ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದರು.
ಈ ವೇಳೆ ಇನ್ಸ್‌ಪೆಕ್ಟರ್ ಸಮವಸ್ತ್ರದಲ್ಲಿ ಇರಲಿಲ್ಲ, ಆದ್ದರಿಂದ ಆತ ಪೊಲೀಸ್ ಅಧಿಕಾರಿ ತಿಳಿಯದ ಜನ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅಜಿತ್ ತಾನು ಪೊಲೀಸ್ ಅಧಿಕಾರಿ.. ಕಾರಿನಲ್ಲಿ ನನ್ನ ಹೆಂಡತಿ ಮಕ್ಕಳಿದ್ದಾರೆ.. ಥಳಿಸಬೇಡಿ ಎಂದು ಹೇಳಿದರೂ ಕೇಳಿಸಿಕೊಳ್ಳದ ಜನ ಅಧಿಕಾರಿ ಮಾತುಕೇಳದೇ ಮನಸೋ ಇಚ್ಛೆ ಥಳಿಸಿದ್ದಾರೆ.
ಈ ವೇಳೆ ಅಜಿತ್ ಕೂಡ ಹಲ್ಲೆ ಮಾಡಿದ್ದು ಈ ಘರ್ಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಎರಡೂ ಕಡೆಯವರು ಪರಸ್ಪರ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.
Advertisement