ಅಕ್ರಮವಾಗಿ ಭಾರತ ಪ್ರವೇಶ; ಬಾಂಗ್ಲಾ ಪ್ರಜೆ ಬಂಧನ

ನಕಲಿ ಗುರುತಿನ ದಾಖಲೆಗಳನ್ನು ಒದಗಿಸಿದ ಸೆಲೀಮ್ ಮತ್ತುಬ್ಬರ್ ಎಂಬಾತನನ್ನು ಶುಕ್ರವಾರ ಕೋಲ್ಕತ್ತಾದ ಹೋಟೆಲ್‌ವೊಂದರಿಂದ ಬಂಧಿಸಲಾಯಿತು.
Casual Images
ಸಾಂದರ್ಭಿಕ ಚಿತ್ರ
Updated on

ಕೋಲ್ಕತ್ತಾ: ಮಾನ್ಯತೆಗೊಂಡ ಯಾವುದೇ ಪ್ರಯಾಣ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಬಾಂಗ್ಲಾದೇಶದ ಪ್ರಜೆಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ನಕಲಿ ಗುರುತಿನ ದಾಖಲೆಗಳನ್ನು ಒದಗಿಸಿದ ಸೆಲೀಮ್ ಮತ್ತುಬ್ಬರ್ ಎಂಬಾತನನ್ನು ಶುಕ್ರವಾರ ಕೋಲ್ಕತ್ತಾದ ಹೋಟೆಲ್‌ವೊಂದರಿಂದ ಬಂಧಿಸಲಾಯಿತು.

ಈತ ಮಾಜಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸ್ಥಳೀಯ ನಾಯಕರಾಗಿದ್ದು, ಎರಡು ವರ್ಷಗಳ ಹಿಂದೆ ಕೋಲ್ಕತ್ತಾಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Casual Images
ಬಾಂಗ್ಲಾದೇಶದ Adult actress ರಿಯಾ ಬಾರ್ಡೆ ಮುಂಬೈನಲ್ಲಿ ಬಂಧನ; ಶಾಕಿಂಗ್ ವಿಚಾರ ಬಯಲು!

ಪೊಲೀಸರು ಬಂಧಿತ ಆರೋಪಿ ವಿರುದ್ಧ ವಿದೇಶಿ ಕಾಯ್ದೆ ಮತ್ತು ವಂಚನೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ.

ತನಿಖೆಯ ಸಮಯದಲ್ಲಿ, ರಬಿ ಶರ್ಮಾ ಹೆಸರಿನಲ್ಲಿದ್ದ ನಕಲಿ ಆಧಾರ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ.ಇದರ ಬಳಕೆಯಿಂದ ಆತ ನಕಲಿ ಭಾರತೀಯ ಪಾಸ್ ಪೋರ್ಟ್ ಪಡೆದಿದ್ದ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com