ಉತ್ತರ ಪ್ರದೇಶ: ರೈಲು ಹಳಿ ಮೇಲೆ ಮತ್ತೆ ಅಗ್ನಿಶಾಮಕ ಸಿಲಿಂಡರ್ ಪತ್ತೆ

ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾನ್ಪುರ: ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಈ ವಾರ ಎರಡನೇ ಬಾರಿಗೆ ರೈಲ್ವೆಗೆ ಸೇರಿದ ಅಗ್ನಿಶಾಮಕ ಸಿಲಿಂಡರ್ ರೈಲು ಹಳಿ ಮೇಲೆ ಬುಧವಾರ ಪತ್ತೆಯಾಗಿದೆ.

ಕಾನ್ಪುರದ ಅಂಬಿಯಾಪುರ ನಿಲ್ದಾಣದ ಬಳಿ ಬ್ರೇಕ್ ಹಾಕಿದಾಗ ಗೂಡ್ಸ್ ರೈಲಿನ ಲೋಕೋ ಪೈಲಟ್ ಇದನ್ನು ಗುರುತಿಸಿದ್ದಾರೆ. ಕೃತ್ಯದ ಹಿಂದೆ ಯಾವುದೇ ಕ್ರಿಮಿನಲ್ ಉದ್ದೇಶವಿದ್ದಂತೆ ಕಾಣುತ್ತಿಲ್ಲ. ಆಕಸ್ಮಿಕವಾಗಿ ರೈಲಿನಿಂದ ಅಗ್ನಿಶಾಮಕ ಸಿಲಿಂಡರ್ ಬಿದ್ದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಪ್ಟೆಂಬರ್ 29 ರಂದು ಝಾನ್ಸಿ-ಕಾನ್ಪುರ ಮಾರ್ಗದ ಭೀಮ ಸೇನ್ ಹಾಗೂ ಗೋವಿಂದ ಪುರಿ ರೈಲು ನಿಲ್ದಾಣಗಳ ನಡುವೆ ರೈಲು ಹಳಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಲೋಕೋ ಪೈಲಟ್ ದೂರದಲ್ಲೇ ಸಿಲಿಂಡರ್ ಗುರ್ತಿಸಿ ರೈಲಿನ ತುರ್ತು ಬ್ರೇಕ್ ಹಾಕಿದ್ದರು.

ಬುಧವಾರ ಬೆಳಿಗ್ಗೆ 6:30 ರ ಸುಮಾರಿಗೆ ಮತ್ತೆ ಇಂತಹ ಘಟನೆ ಬೆಳಕಿಗೆ ಬಂದಿದ್ದು, ತುರ್ತು ಬ್ರೇಕ್ ಹಾಕಿದ ಲೋಕೋ ಪೈಲಟ್, ಕೂಡಲೇ ಈ ವಿಚಾರವನ್ನು ಜಿಆರ್ ಪಿ ಮತ್ತು ರೈಲ್ವೆ ಪೊಲೀಸರಿಗೆ ತಿಳಿಸಿದರು. ಆದಾಗ್ಯೂ, ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ರೈಲು ಹಳಿ ತಪ್ಪಿಸಲು ಟ್ರ್ಯಾಕ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟ ದುಷ್ಕರ್ಮಿಗಳು

ಹಳಿಗಳ ಮೇಲೆ ಸಿಲಿಂಡರ್ ತರಹದ ವಸ್ತುವನ್ನು ಚಾಲಕ ಗುರುತಿಸಿದಾಗ ಗೂಡ್ಸ್ ರೈಲು ಅಂಬಿಯಾಪುರ ರೈಲು ನಿಲ್ದಾಣವನ್ನು ತಲುಪಿರಲಿಲ್ಲ. ನಂತರ ಅದು ಅಗ್ನಿಶಾಮಕ ಸಿಲಿಂಡರ್ ಎಂಬುದು ಗೊತ್ತಾಗಿದೆ ಎಂದು ಜಿಆರ್‌ಪಿ ಔಟ್‌ಪೋಸ್ಟ್‌ನ ಉಸ್ತುವಾರಿ ಅರ್ಪಿತ್ ತಿವಾರಿ ಹೇಳಿದರು. ಕೂಡಲೇ ಹಿರಿಯ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಮತ್ತೊಂದು ರೈಲಿನಿಂದ ಬಿದ್ದಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಬಿಜಿಟಿಎಸ್ ಮೂರ್ತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com