ಅಗ್ನಿ ಅವಘಡonline desk
ದೇಶ
ಸಿಡಿಲುಬಡಿದು ಪಟಾಕಿ ಘಟಕಕ್ಕೆ ಬೆಂಕಿ; 2 ಸಾವು
ಸೂರ್ಯಾರುಪಲೇಂ ಗ್ರಾಮದಲ್ಲಿ ಈಘಟನೆ ನಡೆದಿದ್ದು, ಪಟಾಕಿ ತಯಾರಿಕಾ ಘಟಕ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದೆ.
ಪೂರ್ವಗೋದಾವರಿ: ಪಟಾಕಿ ತಯಾರಿಕಾ ಘಟಕಕ್ಕೆ ಸಿಡಿಲುಬಡಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ಇಂದು ನಡೆದಿದೆ.
ಸೂರ್ಯಾರುಪಲೇಂ ಗ್ರಾಮದಲ್ಲಿ ಈಘಟನೆ ನಡೆದಿದ್ದು, ಪಟಾಕಿ ತಯಾರಿಕಾ ಘಟಕ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದೆ.
ಡಿಎಸ್ಪಿ (ಕೊವ್ವೂರು) ಜಿ ದೇವಕುಮಾರ್ ಪ್ರಕಾರ, ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ