Hit and Run: ರಂಗೋಲಿ ಹಾಕುತ್ತಿದ್ದ ಬಾಲಕಿಯರ ಮೇಲೆರಗಿದ ಕಾರು, ಇಬ್ಬರ ಸ್ಥಿತಿ ಗಂಭೀರ!

ಇಂದೋರ್‌ನ ಜೈಭವಾನಿ ನಗರದಲ್ಲಿ ಈ ಘಟನೆ ನಡೆದಿದ್ದು, ಕಿರಿದಾದ ರಸ್ತೆಯಲ್ಲಿ ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ.
Full Speed Car crushed two girls in Indore
ಇಂದೋರ್ ನಲ್ಲಿ ಭೀಕರ ಅಪಘಾತ
Updated on

ಇಂದೋರ್: ಮಧ್ಯಪ್ರದೇಶದಲ್ಲಿ ಮತ್ತೊಂದು ಭೀಕರ ಹಿಟ್ ಅಂಡರ್ ರನ್ ಕೇಸ್ ದಾಖಲಾಗಿದ್ದು, ಇಂದೋರ್ ನಲ್ಲಿ ವೇಗವಾಗಿ ಬಂದ ಕಾರೊಂದು ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಹರಿದಿರುವ ವಿಡಿಯೋ ವೈರಲ್ ಆಗಿದೆ.

ಇಂದೋರ್‌ನ ಜೈಭವಾನಿ ನಗರದಲ್ಲಿ ಈ ಘಟನೆ ನಡೆದಿದ್ದು, ಕಿರಿದಾದ ರಸ್ತೆಯಲ್ಲಿ ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ.

ಈ ವೇಳೆ ಕಾರು ನಿಯಂತ್ರಣ ತಪ್ಪಿದ್ದು, ನೋಡ ನೋಡುತ್ತಲೇ ರಸ್ತೆ ಪಕ್ಕ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರು ಬಾಲಕಿಯರಿಗೆ ಢಿಕ್ಕಿಯಾಗಿದೆ. ಈ ಅಪಘಾತದಲ್ಲಿ 19 ವರ್ಷದ ಯುವತಿ ಹಾಗೂ 13 ವರ್ಷದ ಅಪ್ರಾಪ್ತ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Full Speed Car crushed two girls in Indore
ಸ್ಕೂಟಿ ಚಾಲಕಿ ಎಡವಟ್ಟು: ಕೇರಳ ಸಿಎಂ Pinarayi Vijayan ಬೆಂಗಾವಲು ವಾಹನಗಳು ಸರಣಿ ಅಪಘಾತ

ಕಾರಿನಡಿ ಸಿಲುಕಿದ್ದ ಇಬ್ಬರು ಬಾಲಕಿಯರನ್ನು ಸ್ಥಳೀಯರು ಹೊರಗೆಳೆದಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಲಯ-1ರ ಡಿಸಿಪಿ ವಿನೋದ್ ಕುಮಾರ್ ಮೀನಾ ಅವರು, ಕಾರಿನ ಸಂಖ್ಯೆ MP 09 ZW 7287 ಆಗಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕಾರು ಮಾಲೀಕನ ಹೆಸರು ತುಷಾರ್ ಅಗರ್ವಾಲ್ ಎಂದು ಆತ ಹುಕುಂಚಂದ್ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com