
ಪಣಜಿ: ಗೋವಾ ಪ್ರವಾಸಕ್ಕೆ ಬಂದಿದ್ದ ರಷ್ಯಾ ಪ್ರಜೆಯೋರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಆತನ ಗೆಳತಿಯನ್ನು ರಕ್ಷಣೆ ಮಾಡಲಾಗಿದೆ.
ರಜೆಯಲ್ಲಿ ಗೆಳತಿಯ ಜೊತೆ ಗೋವಾ ತಿರುಗಾಡಲು ಬಂದ ರಷ್ಯಾದ ಪ್ರಜೆ ಡಿಮಿಟ್ರಿ ಎಲ್ವೊವ್ (33) ಬೀಚ್ ನಲ್ಲಿ ಮುಳುಗಿ ಮೃತಪಟ್ಟಿದ್ದು ಆತನ ಜೊತೆಗಿದ್ದ ಗೆಳತಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಭಾನುವಾರ (ಸೆ.8) ರಂದು ನಡೆದಿದೆ.
ರಷ್ಯಾದ ಪ್ರಜೆ ಡಿಮಿಟ್ರಿ ಎಲ್ವೊವ್ (33) ಮೃತಪಟ್ಟಿದ್ದು, ಆತನ ಗೆಳತಿ ಐರಿನಾ ರುಡೆಮ್ಕೊ (28) ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸರು, 'ಭಾನುವಾರ ಡಿಮಿಟ್ರಿ, ಐರಿನಾ ಜೊತೆ ಮುಂಜಾನೆ ಸುಮಾರು ಐದು ಗಂಟೆಯ ವೇಳೆಗೆ ಉತ್ತರ ಗೋವಾದ ಮೊರ್ಜಿಮ್ ಬೀಚ್ ಗೆ ತೆರಳಿದ್ದಾರೆ. ಈ ವೇಳೆ ನೀರಿಗೆ ಇಳಿದ ಇಬ್ಬರೂ ಈಜಲು ಸಾಧ್ಯವಾಗದೇ ಸಮುದ್ರಪಾಲಾಗಿದ್ದಾರೆ.
ಕೂಡಲೇ ಅಲ್ಲಿದ್ದ ಸ್ಥಳೀಯರು ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಬಲವಾದ ಅಲೆಗಳ ಹೊಡೆತಕ್ಕೆ ಡಿಮಿಟ್ರಿ ಸಮುದ್ರದಲ್ಲಿ ಮುಳುಗಿದ್ದಾರೆ, ಆತನ ಗೆಳತಿ ಐರಿನಾಳನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಜೀವರಕ್ಷಕ ಸಿಬ್ಬಂದಿ ರಷ್ಯಾದ ಪ್ರಜೆಯ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
Advertisement