ವಿಚಾರಣೆ ಹೆಸರಲ್ಲಿ 36 ವರ್ಷದ ವಕೀಲೆಯನ್ನು ಕ್ಯಾಮೆರಾ ಮುಂದೆ ನಗ್ನಳಾಗಿಸಿ, 50 ಸಾವಿರ ರೂ ಪೀಕಿದ ಸೈಬರ್ ವಂಚಕರು!

ವಂಚಕರು ಗೌಪ್ಯ ತನಿಖೆಯ ಹೆಸರಿನಲ್ಲಿ ವೀಡಿಯೋ ಕಾಲ್ ಮೂಲಕ ಬಟ್ಟೆ ಬಿಚ್ಚುವಂತೆ ಹೇಳಿ ನಂತರ ಬ್ಲಾಕ್ ಮೇಲ್ ಮಾಡಿದ್ದಾರೆ. ಸಂತ್ರಸ್ತೆ ಅಂಧೇರಿ ಪೂರ್ವದ ಸಕಿನಾಕಾ ಪ್ರದೇಶದ ನಿವಾಸಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ಮುಂಬೈ: ಅಪರಿಚಿತ ಮೊಬೈಲ್ ಕರೆಯೊಂದು ಮಹಿಳಾ ವಕೀಲೆಯ ಬಾಳನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆ ಕರೆಗೆ ತಾನೂ ಇಷ್ಟೊಂದು ಬೆಲೆ ತೆರಬೇಕಾಗುತ್ತದೆ ಎಂದು ಆ ಮಹಿಳೆಯೂ ಊಹಿಸಿರಲಿಲ್ಲ. ಹೌದು.. 36 ವರ್ಷದ ಸಂತ್ರಸ್ತೆಯನ್ನು ಮೊದಲು ಕ್ಯಾಮೆರಾ ಮುಂದೆ ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು. ನಂತರ ಆಕೆಯನ್ನು ಅಕೌಂಟ್ ನಿಂದ ಸೈಬರ್ ವಂಚಕರು 50 ಸಾವಿರ ರೂಪಾಯಿ ಪೀಕಿದ್ದರು. ಅಷ್ಟೇ ಅಲ್ಲದೆ 'ಗೌಪ್ಯ ತನಿಖೆ' ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ.

ವಕೀಲೆಯ ಪ್ರಕಾರ, ವಂಚಕರು ಗೌಪ್ಯ ತನಿಖೆಯ ಹೆಸರಿನಲ್ಲಿ ವೀಡಿಯೋ ಕಾಲ್ ಮೂಲಕ ಬಟ್ಟೆ ಬಿಚ್ಚುವಂತೆ ಹೇಳಿ ನಂತರ ಬ್ಲಾಕ್ ಮೇಲ್ ಮಾಡಿದ್ದಾರೆ. ಸಂತ್ರಸ್ತೆ ಅಂಧೇರಿ ಪೂರ್ವದ ಸಕಿನಾಕಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆರೋಪಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದರು. ಅಷ್ಟೇ ಅಲ್ಲದೆ ಪೊವಾಯ್‌ನಲ್ಲಿರುವ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಲು ಕೇಳಿದರು.

ಮಹಿಳೆಯ ದೇಹದ ಮೇಲಿನ 'ಗಾಯ'ಗಳ ವೀಡಿಯೊ ತಪಾಸಣೆಯನ್ನು ಮಹಿಳಾ ಅಧಿಕಾರಿಯಿಂದ ಮಾಡಲಾಗುತ್ತದೆ. ಇದು ಸಾಮಾನ್ಯ ತಪಾಸಣೆ ಎಂದು ಮಹಿಳೆಗೆ ಭರವಸೆ ನೀಡಿದ್ದರು. ಇದರೊಂದಿಗೆ ಮಹಿಳೆಗೆ 50,000 ರೂಪಾಯಿ ವರ್ಗಾವಣೆ ಮಾಡುವಂತೆ ಹೇಳಿದ್ದು, ಇದೆಲ್ಲ ರಹಸ್ಯವಾಗಿದ್ದು, ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ಮಹಿಳೆ ಅವನ ಕೋರಿಕೆಗೆ ಒಪ್ಪಿದ್ದು ಅವರು ಹೇಳಿದಂತೆ ಮಾಡಿದ್ದರು.

ನಂತರ, ಮಹಿಳೆ ಆರೋಪಿಯ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದಾಗ, ಆಕೆಯ ಬೆತ್ತಲೆ ಫೋಟೋಗಳನ್ನು ಮತ್ತು ಹಣದ ಬೇಡಿಕೆಯನ್ನು ಹೊಂದಿರುವ ಇ-ಮೇಲ್ಗಳನ್ನು ಕಳುಹಿಸಿದ್ದರು. ತನಗೆ ವಂಚನೆಯಾಗಿದೆ ಎಂದು ತಿಳಿದ ಮಹಿಳೆ ತನ್ನ ಪತಿಗೆ ಎಲ್ಲವನ್ನೂ ತಿಳಿಸಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಟೆಲಿಕಾಂ ಅಥಾರಿಟಿಯ ಅಧಿಕಾರಿಯಂತೆ ನಟಿಸುತ್ತಿರುವ ವಂಚಕ, ತನ್ನ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹಣ ವರ್ಗಾವಣೆಗೆ ಬಳಸಲಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು: ಸೈಬರ್ ಕ್ರೈಂಗೆ 14.57 ಲಕ್ಷ ರೂ. ಕಳೆದುಕೊಂಡ ವಕೀಲೆ; ಕ್ಯಾಮರಾ ಮುಂದೆ ಬೆತ್ತಲಾಗುವಂತೆ ಮಾಡಿದ ವಂಚಕರು!

ಇದರಿಂದ ಹೆದರಿದ ಮಹಿಳೆ ಆರೋಪಿಗಳ ಮಾತಿಗೆ ಒಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಣ ವರ್ಗಾವಣೆ ಮಾಡಿರುವ ಖಾತೆಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ನಿಂದ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಆ ಖಾತೆಯನ್ನು ಬ್ಲಾಕ್ ಮಾಡುವಂತೆಯೂ ಬ್ಯಾಂಕ್‌ಗೆ ತಿಳಿಸಲಾಗಿದೆ. ಡಿಜಿಟಲ್ ವಂಚನೆಯಲ್ಲಿ, ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವೀಡಿಯೊ ಕರೆಗಳನ್ನು ಮಾಡುತ್ತಾರೆ ಮತ್ತು ನಿಮ್ಮ ಹೆಸರನ್ನು ಕೆಲವು ಅಪರಾಧಕ್ಕೆ ಎಳೆಯುತ್ತಾರೆ. ಇದರಿಂದಾಗಿ ನೀವು ಬಂಧನದ ಭಯದಿಂದ ವಂಚನೆಗೆ ಬಲಿಯಾಗುತ್ತೀರಿ. ನಿಮಗೂ ಇಂತಹ ಕರೆಗಳು ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡುವುದು ಉತ್ತಮ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com