
ಕೋಟಾ: ವೇಗವಾಗಿ ಬಂದ ಟ್ರಕ್'ವೊಂದು ವ್ಯಾನ್'ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಯಾತ್ರಾರ್ಥಿಗಲು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸಿಕರ್ ಜಿಲ್ಲೆಯ ಖತು ಶ್ಯಾಮ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ಮೃತರು 16-40 ವರ್ಷ ವಯೋಮಾನದವರಾಗಿದ್ದು, ಮದನ್ ನಾಯಕ್, ಮಂಗಿಲಾಲ್ ನಾಯಕ್, ಮಹೇಶ್ ನಾಯಕ್, ರಾಜೇಶ್ ಮತ್ತು ಪುನಂ ಎಂದು ಗುರುತಿಸಲಾಗಿದೆ. ಓರ್ವ ವ್ಯಕ್ತಿಯ ಗುರಿತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ಇದೀಗ ಡಿಕ್ಕಿ ಹೊಡೆದು ಪರಾರಿಯಾಗಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Advertisement