74ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಗಣ್ಯರಿಂದ ಶುಭಾಶಯ, ದೂರದೃಷ್ಟಿಯುಳ್ಳ ನಾಯಕನೆಂದು ಕೊಂಡಾಡಿದ BJP ನಾಯಕರು

ಜಗಮೆಚ್ಚಿದ ಜನನಾಯಕ, ಭಾರತ ಕಂಡ ಹೆಮ್ಮೆಯ ಪ್ರಧಾನಿ, ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 74ನೇ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ಬಿಜೆಪಿ ನಾಯಕರು ಶುಭಾಶಯಗಳನ್ನು ಕೋರಿದ್ದಾರೆ.

ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಜಗಮೆಚ್ಚಿದ ಜನನಾಯಕ, ಭಾರತ ಕಂಡ ಹೆಮ್ಮೆಯ ಪ್ರಧಾನಿ, ದಕ್ಷ ಆಡಳಿತ, ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ, ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಹೇಳಿ, ಕೊಂಡಾಡಿದೆ.

ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಇನ್ನೂ ಸುದೀರ್ಘ ಕಾಲ ತಮ್ಮ ಸಾರ್ಥಕ ದೇಶಸೇವೆ ನಡೆಯುತ್ತಿರುವಂತೆ ದೇವರ ಆಶೀರ್ವಾದವಿರಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ.ನಡ್ಡಾ ಅವರು ಪೋಸ್ಟ್ ಮಾಡಿ, ರಾಷ್ಟ್ರದ ಸೇವೆ ಮತ್ತು ಜನರ ಉನ್ನತಿಗಾಗಿ ಪ್ರತಿ ಕ್ಷಣವನ್ನೂ 'ಅಂತ್ಯೋದಯ' ಮಂತ್ರವನ್ನು ಸಾಕ್ಷಾತ್ಕರಿಸಲು ಮೀಸಲಿಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಜನ್ಮದಿನದಂದು ಹೃತ್ಪೂರ್ವಕವಾಗಿ ಅಭಿನಂದನೆ ತಿಳಿಸುತ್ತೇನೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ಗುರಿ, ಸೇವೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯು ನಿಜವಾಗುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ’ ಎಂಬುದು ಜನರ ಸಂಕಲ್ಪವಾಗಿದೆ. ನಿಮ್ಮ ನಾಯಕತ್ವ ಮತ್ತು ಮಾರ್ಗದರ್ಶನ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಸದಾ ಸ್ಫೂರ್ತಿಯಾಗಿದೆ. ನಿಮ್ಮ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ
100 ದಿನಗಳಲ್ಲಿ, ದೇಶದ ಪ್ರಗತಿಗೆ ಕಾರಣವಾಗುವ ಪ್ರತಿಯೊಂದು ಕ್ಷೇತ್ರದ ಸಮಸ್ಯೆ ಪರಿಹರಿಸಲು ಯತ್ನ: ಪ್ರಧಾನಿ ಮೋದಿ

ಅಮಿತ್ ಶಾ ಅವರು ಪೋಸ್ಟ್ ಮಾಡಿ, ಮೋದಿಯವರು ಪರಂಪರೆಯಿಂದ ವಿಜ್ಞಾನದವರೆಗೆ ಎಲ್ಲವನ್ನೂ 'ನವ ಭಾರತ'ದ ದೃಷ್ಟಿಯೊಂದಿಗೆ ಜೋಡಿಸಿದ್ದಾರೆ. ತಮ್ಮ ಇಚ್ಛಾಶಕ್ತಿ ಮತ್ತು ಜನಕಲ್ಯಾಣದ ಸಂಕಲ್ಪ ಅಸಾಧ್ಯವೆಂದು ತೋರುವ ಅನೇಕ ಕಾರ್ಯಗಳನ್ನು ಸಾಧ್ಯವಾಗಿಸುವ ಮೂಲಕ ಬಡವರ ಕಲ್ಯಾಣಕ್ಕಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ದೇಶವು ಭದ್ರತೆಗಾಗಿ ದುಡಿದ, ಹಿಂದುಳಿದವರ ಬದುಕಿನಲ್ಲಿ ಬದಲಾವಣೆ ತಂದು ಅವರನ್ನು ಮುಖ್ಯವಾಹಿನಿಗೆ ತಂದ ನಿರ್ಣಾಯಕ ನಾಯಕನನ್ನು ಮೋದಿ ರೂಪದಲ್ಲಿ ದೇಶ ಪಡೆದಿದೆ. ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಯ ಸ್ವಾಭಿಮಾನ ಹೆಚ್ಚಾಗಿರುವುದರೊಂದಿಗೆ ಭಾರತದ ಬಗೆಗಿನ ಜಾಗತಿಕ ದೃಷ್ಟಿಕೋನವೂ ಬದಲಾಗಿದೆ. ದೇಶದ ಪ್ರತಿಷ್ಠೆಯನ್ನು ಸಮುದ್ರದ ಆಳದಿಂದ ಬಾಹ್ಯಾಕಾಶದ ಎತ್ತರಕ್ಕೆ ಏರಿಸಿದ ಮೋದಿ ಅವರು ವಿಶ್ವದಾದ್ಯಂತ ಶಾಂತಿ, ಸಹಾನುಭೂತಿಗೆ ಸ್ಫೂರ್ತಿಯಾಗಿದ್ದಾರೆಂದು ಕೊಂಡಾಡಿ, ಮೋದಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಮೋದಿಯವರ ದೂರದೃಷ್ಟಿ ಮತ್ತು ಬಲಿಷ್ಠ ನಾಯಕತ್ವವನ್ನು ಕಂಡಿದೆ. ಮೋದಿಜಿಯವರು ಸಂಪೂರ್ಣ ಸನ್ನದ್ಧತೆ, ಸಮರ್ಪಣಾ ಮನೋಭಾವ ಮತ್ತು ತಪಸ್ಸಿನಿಂದ ದೇಶವನ್ನು ಮುನ್ನಡೆಸಿದ್ದಾರೆ. ಇಂದಿಗೂ ಅದನ್ನೇ ಮಾಡುತ್ತಿದ್ದಾರೆ. ಅವರ ಜನ್ಮದಿನಕ್ಕೆ ಹೃದಯ ಪೂರ್ವಕ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪೋಸ್ಟ್ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ದೇವರು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com