ಬಿಹಾರ: ಭೂ ವಿವಾದ ಸಂಬಂಧ 80 ಮನೆಗಳಿಗೆ ದುಷ್ಕರ್ಮಿಗಳಿಂದ ಬೆಂಕಿ! ಜಂಗಲ್ ರಾಜ್ ಎಂದ ಕಾಂಗ್ರೆಸ್

21 ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 40-50 ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ನಾವಡ ಎಸ್ಪಿ ಅಭಿನವ್ ಧೀಮಾನ್ ತಿಳಿಸಿದ್ದಾರೆ.
ಬೆಂಕಿಗೆ ಆಹುತಿಯಾದ ಮನೆಗಳು
ಬೆಂಕಿಗೆ ಆಹುತಿಯಾದ ಮನೆಗಳು
Updated on

ಪಾಟ್ನಾ: ಭೂ ವಿವಾದ ಸಂಬಂಧ ನಡೆದ ಗುಂಡಿನ ದಾಳಿಯ ನಂತರ ಬುಧವಾರ ತಡರಾತ್ರಿ ನವಾಡ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದಲಿತ್ ತೊಲಾ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಸುಮಾರು 80 ಮನೆಗಳಿಗೆ ಬೆಂಕಿ ಹಚ್ಚಿದೆ.

ಮಹಾದಲಿತ ಸಮುದಾಯದ ಜನರು ಕಳೆದ 10 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುಷ್ಕರ್ಮಿಗಳು ಮಹಾದಲಿತ ತೊಲಾಗೆ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ನಂತರ, ಜನರು ಒಳಗೆ ಇದ್ದಾಗ ಅವರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಅವರ ಸುತ್ತಮುತ್ತಲಿನ ಜ್ವಾಲೆ ಮತ್ತು ಹೊಗೆ ಹೊರಹೊಮ್ಮುವುದನ್ನು ಗಮನಿಸಿದ ತಕ್ಷಣ ಅಲ್ಲಿಂದ ಹೊರ ಬಂದಿದ್ದಾರೆ.

ಕೂಡಲೇ ಬೆಂಕಿ ನಂದಿಸಿದ ಕಾರಣ ಮನೆಗಳನ್ನು ಸಂಪೂರ್ಣವಾಗಿ ಸುಟ್ಟುಹೋಗಿಲ್ಲ, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಗ್ರಾಮದಲ್ಲಿ 100 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದುಷ್ಕರ್ಮಿಗಳು ದೇದೂರು ಗ್ರಾಮದ ಕೃಷ್ಣನಗರ ತೋಲದಲ್ಲಿ ಗುಂಡು ಹಾರಿಸಿದ ಬಳಿಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಪಾಸ್ವಾನ್ ಮತ್ತು ಮಾಂಝಿ ಸಮುದಾಯದ ಸದಸ್ಯರು ಕೆಲವು ಸಾಗುವಳಿ ಮಾಡದ ಭೂಮಿಯ ವಿಷಯವಾಗಿ ಬಹಳ ಕಾಲದಿಂದಲೂ ವಿವಾದ ಹೊಂದಿದ್ದಾರೆ. ವಿಷಯವು ನ್ಯಾಯಾಯಲಯದಲ್ಲಿರುವುದರಿಂದ ಎರಡೂ ಕಡೆಯವರು ಸರ್ಕಾರಿ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

21 ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 40-50 ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ನಾವಡ ಎಸ್ಪಿ ಅಭಿನವ್ ಧೀಮಾನ್ ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಂಕಿಗೆ ಆಹುತಿಯಾದ ಮನೆಗಳು
ಮಣಿಪುರ: ಡ್ರೋನ್ ದಾಳಿಗೆ ವಾಹನಗಳು ಕರಕಲು; ಎಲ್ಲೆಲ್ಲೂ ವಿನಾಶ!

ಪ್ರಮುಖ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಇತರ 10 ಜನರನ್ನು ಬಂಧಿಸಲಾಗಿದೆ ಮತ್ತು ಎರಡು ಕಡೆಯ ನಡುವಿನ ಜಮೀನು ವಿವಾದ ಘಟನೆಗೆ ಕಾರಣವಾಯಿತು ಎಂದು ಅವರು ಹೇಳಿದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇನ್ನು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್‌ ತುಕಡಿಗಳನ್ನುನಿಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ನಂದು ಪಾಸ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಂದು ಪಾಸ್ವಾನ್ ತನ್ನ ಆಪ್ತರೊಂದಿಗೆ ಸೇರಿಕೊಂಡು ಈ ಹಿಂದೆ ಜಮೀನು ಖಾಲಿ ಮಾಡುವಂತೆ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದ ಎಂದು ಅವರು ಹೇಳಿದ್ದಾರೆ. ನಂದು ಮತ್ತು ಅವನ ಕಡೆಯ ಜನರು ತಮ್ಮ ಮನೆಗಳಿಗೆ ಬೆಂಕಿ ಹಚ್ಚುವ ಮೊದಲು ತಮ್ಮನ್ನು ಬೆದರಿಸಲು ಗುಂಡು ಹಾರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಮಹಾ ಜಂಗಲ್ ರಾಜ್! ಮಹಾ ದಾನವ ರಾಜ್! ಮಹಾ ರಾಕ್ಷಸ ರಾಜ್! ನಾವಡದಲ್ಲಿ ದಲಿತರ 100ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಆಡಳಿತದಲ್ಲಿ ಬಿಹಾರದಾದ್ಯಂತ ಬೆಂಕಿ ಕಾಣಿಸಿಕೊಂಡಿದೆ. ಆದರೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ತೊಂದರೆಯಾಗುವುದಿಲ್ಲ, ಬಡವರು ಸುಟ್ಟುಹೋದರು, ಸತ್ತರೂ ಅವರಿಗೆ ಕಾಳಜಿಯಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಕಿಡಿ ಕಾರಿದ್ದಾರೆ.

ನವಾಡದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಎನ್‌ಡಿಎ ಸರ್ಕಾರವನ್ನು ಕಾಂಗ್ರೆಸ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ, ಇದು ರಾಜ್ಯದಲ್ಲಿ "ಜಂಗಲ್ ರಾಜ್" ಅಸ್ತಿಸ್ತವದಲ್ಲಿರುವುದಕ್ಕೆ ಸಾಕ್ಷಿಯಾಗಿದೆ ಮತ್ತು ದಲಿತರು ಮತ್ತು ವಂಚಿತರ ಬಗ್ಗೆ ಆಡಳಿತ "ಅತ್ಯಂತ ಅಸಡ್ಡೆ" ತೋರಿಸುತ್ತಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com