ಯುಎಸ್ ಜೊತೆ ಡ್ರೋನ್ ಒಪ್ಪಂದ ಪ್ರಗತಿಯಲ್ಲಿ, ಕೋಲ್ಕತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ!

ಫೆಬ್ರವರಿಯಲ್ಲಿ ಸುಮಾರು 4 ಬಿಲಿಯನ್ ಡಾಲರ್‌ಗೆ 31 MQ-9B ಡ್ರೋನ್‌ಗಳನ್ನು ಭಾರತೀಯ ಮಿಲಿಟರಿಗೆ ಮಾರಾಟ ಮಾಡಲು ಯುಎಸ್ ಫೆಬ್ರವರಿಯಲ್ಲಿ ಅನುಮೋದಿಸಿತ್ತು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರಧಾನಿ ಮೋದಿ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರಧಾನಿ ಮೋದಿ
Updated on

ನವದೆಹಲಿ: ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಸೂಚಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕದ ರಕ್ಷಣಾ ಸಂಸ್ಥೆ ಜನರಲ್ ಅಟಾಮಿಕ್ಸ್‌ನಿಂದ 31 ದೀರ್ಘಾವಧಿಯ MQ-9B ಸಶಸ್ತ್ರ ಡ್ರೋನ್‌ಗಳ ಖರೀದಿ ಪ್ರಗತಿ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕುರಿತು ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ಜೋ-ಬೈಡನ್, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ವಿಲಿಟರಿ ನಂಟನ್ನು ಹೆಚ್ಚಿಸುವ ಮಾರ್ಗಗಳು ಸೇರಿದಂತೆ ಉಭಯ ದೇಶಗಳ ನಡುವಿನ ವಿವಿಧ ವಿಚಾರಗಳ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ.

ಫೆಬ್ರವರಿಯಲ್ಲಿ ಸುಮಾರು 4 ಬಿಲಿಯನ್ ಡಾಲರ್‌ಗೆ 31 MQ-9B ಡ್ರೋನ್‌ಗಳನ್ನು ಭಾರತೀಯ ಮಿಲಿಟರಿಗೆ ಮಾರಾಟ ಮಾಡಲು ಯುಎಸ್ ಫೆಬ್ರವರಿಯಲ್ಲಿ ಅನುಮೋದಿಸಿತ್ತು. ಈ ಪೈಕಿ 16 ಭಾರತೀಯ ವಾಯುಪಡೆ ಮತ್ತು 15 ನೌಕಪಡೆಗೆ ಸೇರಲಿವೆ.

ಡ್ರೋನ್‌ಗಳ ಪ್ರಮುಖ ಲಕ್ಷಣವೆಂದರೆ ಇವುಗಳು ನೆಲದಿಂದ 250 ಮೀಟರ್‌ಗಳಷ್ಟು ಹತ್ತಿರದಲ್ಲಿ ಹಾರಬಲ್ಲವು. ದೂರದಿಂದಲೇ ಇದನ್ನು ನಿಯಂತ್ರಿಸಬಹುದು. ಕ್ಷಿಪಣಿ ಹೊತ್ತೊಯ್ದು ದಾಳಿ ನಡೆಸಬಲ್ಲದು. ಅಲ್ಲದೆ, ಇದನ್ನು ಗಡಿಯಲ್ಲಿ ಕಣ್ಗಾವಲು, ಮಾನವೀಯ ನೆರವು, ಪರಿಹಾರ ಕಾರ್ಯ, ಶೋಧ ಕಾರ್ಯ, ಭೂ, ನೌಕಾ, ವಾಯುಪಡೆ ಯುದ್ಧಗಳ ವೇಳೆ, ಆಗಸದಿಂದ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆ ಪಡೆಯಲು- ಹೀಗೆ ನಾನಾ ರೀತಿಯ ಕೆಲಸಗಳಿಗೆ ಬಳಸಬಹುದು.

ಇದು ಸತತವಾಗಿ 35 ಗಂಟೆಗಳ ಕಾಲ ಆಗಸದಲ್ಲೇ ಕಾರ್ಯನಿರ್ವಹಣೆ ಕ್ಷಮತೆ ಹೊಂದಿದೆ. 5670 ಕೆಜಿ ತೂಕ ಹೊರಬಲ್ಲದು. 40 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ನೆಲದಿಂದ ಕೇವಲ 250 ಅಡಿ ಎತ್ತರದಲ್ಲೂ ಶತ್ರುಗಳ ಕಣ್ತಪ್ಪಿಸಿ ಚಲಿಸಬಲ್ಲದು. ಚಲಿಸುವ ಸಾಮರ್ಥ್ಯ ಗಂಟೆಗೆ 442 ಕಿ.ಮೀ. ಇದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರಧಾನಿ ಮೋದಿ
ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲಿದೆ: ಪ್ರಧಾನಿ ಮೋದಿ ಘೋಷಣೆ

ಡ್ರೋನ್ ಖರೀದಿ ಸಂಬಂಧ ಮುಂದಿನ ತಿಂಗಳೊಳಗೆ ಉಭಯ ದೇಶಗಳು ಔಪಚಾರಿಕವಾಗಿ ಒಪ್ಪಂದವನ್ನು ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಕೋಲ್ಕತ್ತಾದಲ್ಲಿನ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆ ಸಂಬಂಧ ನರೇಂದ್ರ ಮೋದಿ ಹಾಗೂ ಬೈಡನ್ ಮಾತುಕತೆ ನಡೆಸಿದ್ದಾರೆ. ಭಾರತ್ ಸಮಿ, 3rdiTech ಮತ್ತು ಯುಎಸ್ ಸ್ಪೇಸ್ ಪೋರ್ಸ್ ನಡುವಿನ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಮತ್ತು ಭಾರತದ ಸೆಮಿಕಂಡಕ್ಟರ್ ಮಿಷನ್ ಸಹಯೋಗದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com