ಅಸ್ಸಾಂ: ಅಕ್ರಮವಾಗಿ ಭಾರತ ಪ್ರವೇಶಿಸಿದ 17 ಬಾಂಗ್ಲಾದೇಶೀಯರ ಬಂಧನ

ಒಳ ನುಸುಳುವಿಕೆಯ ವಿರುದ್ಧ ದೃಢವಾದ ನಿಲುವು ತಳೆದ ಅಸ್ಸಾಂ ಪೊಲೀಸರು ಇಂದು ಬೆಳ್ಳಂಬೆಳಗ್ಗೆ 9 ಬಾಂಗ್ಲಾದೇಶಿಯರು ಮತ್ತು 8 ಮಕ್ಕಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದ್ದಾರೆ
ಬಾಂಗ್ಲಾ ಪೊಲೀಸರು
ಬಾಂಗ್ಲಾ ಪೊಲೀಸರು
Updated on

ಗುವಾಹಟಿ: ಅಕ್ರಮವಾಗಿ ಭಾರತ ಪ್ರವೇಶಿಸಿದ ಆರೋಪದ ಮೇಲೆ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ ಎಂಟು ಮಕ್ಕಳು ಸೇರಿದಂತೆ17 ಬಾಂಗ್ಲಾದೇಶೀಯರನ್ನು ಶನಿವಾರ ವಾಪಸ್ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಕ್ರಮ ವಲಸಿಗರ ಫೋಟೋವನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ, ಒಳ ನುಸುಳುವಿಕೆಯ ವಿರುದ್ಧ ದೃಢವಾದ ನಿಲುವು ತಳೆದ ಅಸ್ಸಾಂ ಪೊಲೀಸರು ಇಂದು ಬೆಳ್ಳಂಬೆಳಗ್ಗೆ 9 ಬಾಂಗ್ಲಾದೇಶಿಯರು ಮತ್ತು 8 ಮಕ್ಕಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಬಾಂಗ್ಲಾ ಪೊಲೀಸರು
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಂದ ದಾಂಧಲೆ: ಪೊಲೀಸರ ಸ್ಪಷ್ಟನೆ!

ಬಾಂಗ್ಲಾದೇಶದ ಪ್ರಕ್ಷುಬ್ಧತೆಯ ನಂತರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಅಸ್ಸಾಂ ರಾಜ್ಯದಲ್ಲಿ ಇದುವರೆಗೆ ಸುಮಾರು 100 ಜನರನ್ನು ಬಂಧಿಸಿ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com